More

    ಎಂದಿಗೂ ಮದ್ವೆಯಾಗುವುದಿಲ್ಲ ಎಂದು ಯೋಚಿಸಿದ್ದ ಅನಂತ್​ ಅಂಬಾನಿ ಮನಸ್ಸು ಬದಲಿಸಿದ್ದೇಕೆ?

    ಮುಂಬೈ: ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್​ ಇಂಡಸ್ಟ್ರೀಸ್​ ಮಾಲೀಕ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​, ಪ್ರೀ ವೆಡ್ಡಿಂಗ್​ ಸಂಭ್ರಮ ಇಂದಿನಿಂದ ಗುಜರಾತಿನ ಜಾಮ್​ನಗರದಲ್ಲಿ ಆರಂಭವಾಗಲಿದೆ. ಜುಲೈನಲ್ಲಿ ನಡೆಯಲಿರುವ ಅದ್ಧೂರಿ ವಿವಾಹಕ್ಕೂ ಮುನ್ನ ಮೂರು ದಿನಗಳ ಕಾಲ ನಡೆಯುವ ಪ್ರೀ ವೆಡ್ಡಿಂಗ್​ ಸಂಭ್ರಮದಲ್ಲಿ ಭಾಗವಹಿಸಲು ವಿಶ್ವದ ಪ್ರಮುಖ ಉದ್ಯಮಿಗಳು ಹಾಗೂ ಬಾಲಿವುಡ್ ಹಾಗೂ ಹಾಲಿವುಡ್ ತಾರೆಯರು ಆಗಮಿಸುತ್ತಿದ್ದಾರೆ.

    ಮುಂಬೈನ ವಿರಾನ್ ಮರ್ಚೆಂಟ್ ಮತ್ತು ಶೀಲಾ ದಂಪತಿಯ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ತಮ್ಮ ಪ್ರೇಮ ಸಂಬಂಧದ ಬಗ್ಗೆ ಸ್ವತಃ ಅನಂತ್​ ಅಂಬಾನಿ ಅವರು ಮಾಧ್ಯಮ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ನಾನೆಂದಿಗೂ ಮದುವೆಯಾಗುವುದಿಲ್ಲ ಎಂದು ಯೋಚಿಸಿದ್ದೆ. ನಾನು ಅದೃಷ್ಟವಂತ. ನಾನು ನನ್ನ ಕನಸಿನ ಸಂಗಾತಿಯನ್ನು ಪಡೆಯುತ್ತಿದ್ದೇನೆ. ನಾನೆಂದಿಗೂ ಮದುವೆಯಾಗುವುದಿಲ್ಲ ಎಂದು ಬಾಲ್ಯದಲ್ಲೇ ಯೋಚಿಸಿದ್ದೆ. ಇದನ್ನು ಆಗಾಗ ನನ್ನ ಹೆತ್ತವರಿಗೂ ಹೇಳುತ್ತಿದ್ದೆ. ಸದಾ ಪ್ರಾಣಿಗಳಿಗೆ ಸೇವೆ ಸಲ್ಲಿಸಲು ನನ್ನ ಮನಸ್ಸು ಬಯಸುತ್ತದೆ ಎಂದು ಅನಂತ್​ ಅಂಬಾನಿ ಹೇಳಿದರು.

    ರಾಧಿಕಾ ಪರಿಚಯ ಬಳಿಕ ನನ್ನ ಯೋಚನೆಯೆಲ್ಲ ಬದಲಾಯಿತು. ಏಕೆಂದರೆ, ನನ್ನಂತೆಯೇ ರಾಧಿಕಾ ಯೋಚನೆಯೂ ಇತ್ತು. ಅವಳು ಕೂಡ ಪ್ರಾಣಿಗಳನ್ನು ಪಾಲನೆ ಮಾಡಲು ಇಷ್ಟಪಡುತ್ತಾಳೆ. ನಾನು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದಾಗ, ಆಕೆ ನನ್ನ ಬೆಂಬಲಕ್ಕೆ ನಿಂತಳು ಎಂದು ರಾಧಿಕಾರನ್ನು ಮೆಚ್ಚಿದ ಅನಂತ್​ ಅಂಬಾನಿ, ಸಹೋದರ ಆಕಾಶ್ ಅಂಬಾನಿ ನನಗೆ ಶ್ರೀರಾಮನಿದ್ದಂತೆ ಮತ್ತು ಸಹೋದರಿ ತಾಯಿಯಂತೆ ಎಂದರು. ನಮ್ಮ ನಡುವೆ ಯಾವುದೇ ಸ್ಪರ್ಧೆ ಇಲ್ಲ. ಅಂಬಾನಿ ಕುಟುಂಬದಲ್ಲಿ ಹುಟ್ಟಿರುವುದೇ ನನ್ನ ಭಾಗ್ಯ. ಮುಖೇಶ್ ಅಂಬಾನಿಯವರ ಮಗನಾಗಿ ಹುಟ್ಟಿದ್ದಕ್ಕೆ ಕೃತಜ್ಞನಾಗಿರುತ್ತೇನೆ. ಅಕ್ಕ-ತಂಗಿಯರ ಸಂಬಂಧ ಒಂದು ರೀತಿಯ ಅಂಟು ಇದ್ದಂತೆ ಎಂದು ಅನಂತ್​ ಅಂಬಾನಿ ಹೇಳಿದರು.

    ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಗೂಗಲ್ ಸಿಇಒ ಸುಂದರ್ ಪಿಚೈ, ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಇತರರು ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಅತಿಥಿಗಳಿಗಾಗಿ ವಿಶ್ವದ ವಿವಿಧ ಭಾಗಗಳಿಂದ 2,500ಕ್ಕೂ ಹೆಚ್ಚು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಅದ್ಧೂರಿ ಸಮಾರಂಭಕ್ಕಾಗಿ ಜಾಮ್​ನಗರದಲ್ಲಿ ಇಂದ್ರ ಲೋಕವೇ ಸೃಷ್ಟಿಯಾಗಿದೆ. (ಏಜೆನ್ಸೀಸ್​)

    ಈ ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ತಪ್ಪು! ನಟಿ ಕಿರಣ್​ ರಾಥೋಡ್ ಪಶ್ಚಾತಾಪ

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts