ಸ್ನೇಹಿತರ ಜತೆ ಮಲಗು ಅಂತಿದ್ದ ಅದಕ್ಕೆ ಡಿವೋರ್ಸ್ ನೀಡಿದೆ ಎಂದು ಕಣ್ಣೀರಿಟ್ಟ ನಟಿ

karishma kapoor
Published on

ಮುಂಬೈ: ಬಾಲಿವುಡ್​ ನಟಿ ಕರಿಷ್ಮಾ ಕಪೂರ್ ಒಂದು ಕಾಲದಲ್ಲಿ ಟಾಪ್​ ಹೀರೋಯಿನ್​. ಕರಿಷ್ಮಾ ತನ್ನ ತಂಗಿ ಕರೀನಾ ಕಪೂರ್‌ಗಿಂತ ಮೊದಲು ಬಾಲಿವುಡ್‌ಗೆ ಕಾಲಿಟ್ಟರು ಮತ್ತು ಅಷ್ಟೆ ಬೇಗ ಸಿನಿಮಾ ಇಂಡಸ್ಟ್ರೀಯಿಂದ ದೂರವಾದರು.

90ರ ದಶಕದಲ್ಲಿ ತನ್ನ ಸೌಂದರ್ಯದಿಂದಲೇ ಅದೆಷ್ಟೋ ಹೃದಯಗಳನ್ನು ಮಿಡಿಯುವಂತೆ ಮಾಡಿದ ನಟಿ ಕರಿಷ್ಮಾ ಕಪೂರ್, ವೈಯಕ್ತಿಕ ಬದುಕಿನಲ್ಲಿ ತುಂಬಾ ದುರದೃಷ್ಟವಂತೆ. ಕರಿಷ್ಮಾ ಕಪೂರ್ ಗಂಡನಿಗೆ ಡಿವೋರ್ಸ್​​ ನೀಡಿ ಮಕ್ಕಳ ಜತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಈಕೆ ಈ ಹಿಂದೆ ಸಂದರ್ಶನದಲ್ಲಿ ಮಾಜಿ ಗಂಡನ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದರು.

1991ರಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದ ಕರಿಷ್ಮಾ ಕಪೂರ್ ಟಾಪ್ ಸ್ಟಾರ್ ಗಳ ಜೊತೆ ಸೇರಿಕೊಂಡಿದ್ದಾರೆ.ಕರೀನಾ ಎಷ್ಟು ಸ್ಟಾರ್ ಆಗಿದ್ದಾರೋ ಅಷ್ಟೇ ವಿವಾದಾತ್ಮಕ ನಟಿಯೂ ಆಗಿದ್ದಾರೆ. 2003 ಸೆಪ್ಟೆಂಬರ್ 29ರಂದು ಕರಿಷ್ಮಾ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಸಂಜಯ್‌ಗೆ ಕರೀಷ್ಮಾ ಜೊತೆಗಿನದು ಎರಡನೇ ವಿವಾಹ. ಕರೀಷ್ಮಾ ಕೂಡಾ ಅಭಿಷೇಕ್ ಬಚ್ಚನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಅದು ಮುರಿದು ಬಿತ್ತು. ನಂತರ ಸಂಜಯ್ ಜೊತೆಗಿನ ದಾಂಪತ್ಯ ಕರೀಷ್ಮಾಗೆ ಅಕ್ಷರಶಃ ದುಃಸ್ವಪ್ನವಾಗಿತ್ತು.

ಮದುವೆಯಾದ ಕೇವಲ ಎರಡು ವರ್ಷಗಳ ನಂತರ, ಕರಿಷ್ಮಾ ಮಗಳು ಸಮೈರಾ ಕಪೂರ್’ಗೆ ಜನ್ಮ ನೀಡಿದರು. ಇದಾದ ಬಳಿಕ 2010ರಲ್ಲಿ ಪುತ್ರ ಕಿಯಾನ್ ಕಪೂರ್ ಜನಿಸಿರು. ಆದರೆ, ಮಗ ಹುಟ್ಟುವ ಮುನ್ನವೇ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ವಿವಾದ ಕುಟುಂಬದೊಳಗಷ್ಟೇ ಕೇಳಿಬಂದಿತ್ತು. 13 ವರ್ಷಗಳ ಸುದೀರ್ಘ ದಾಂಪತ್ಯ ವಿಚ್ಛೇದನ ಪಡೆಯುವ ಮೂಲಕ ಕೊನೆಯಾಯಿತು. ಈ ಸಂದರ್ಭದಲ್ಲಿ ಕರಿಷ್ಮಾ, ಸಂಜಯ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು.

ನಟಿ ಮಾತನಾಡಿ, ಯಾರು ಹೆಚ್ಚು ಹಣ ಕೊಟ್ಟರೂ ಅವರ ಜತೆ ಮಲಗಲು ಪತಿ ಹೇಳುತ್ತಿದ್ದರು. ಆದರೆ ನಾನು ಅಂತಹ ಹೇಯ ಕೆಲಸಗಳನ್ನು ಮಾಡಲಾರೆ ಎಂದಿದ್ದೇನು. ಆತನನ್ನು ಮದುವೆಯಾದ ನಂತರವೂ ಆತ ತನ್ನ ಮಾಜಿ ಪತ್ನಿಯೊಂದಿಗೆ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದ. ಆತನ ಕಿರುಕುಳ ತಾಳಲಾರದೆ ಪತಿಗೆ ವಿಚ್ಛೇದನ ನೀಡಿರುವುದಾಗಿ ಬಹಿರಂಗಪಡಿಸಿದ್ದರು.

ಸಧ್ಯ ನಟಿ ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದು, ನಟನಾ ವೃತ್ತಿಗೆ ಮತ್ತೆ ಮರಳಿದ್ದಾರೆ.

ತಾನು ಫೇಮಸ್ ಆಗಿದ್ದ ಒಂದೇ ಕಾರಣಕ್ಕೆ ಅದರ ಲಾಭ ಬಳಸಿಕೊಳ್ಳಲು ಸಂಜಯ್ ತನ್ನನ್ನು ಮದುವೆಯಾಗಿದ್ದ. ಅಷ್ಟೇ ಅಲ್ಲ ಹನಿಮೂನ್‌’ನಲ್ಲಿ ಸ್ನೇಹಿತನ ಜೊತೆ ಮಲಗುವಂತೆ ಒತ್ತಾಯಿಸಿದ್ದ ಎಂದು ಸಾಲು ಸಾಲು ಆರೋಪ ಮಾಡಿ ಡೀವೊರ್ಸ್​ ನೀಡಿದ್ದರು.

ಅತಿ ಹೆಚ್ಚು ಗಳಿಸಿದ ಪ್ರಣಯ ರಾಜಾ ಹಿಂದೂಸ್ತಾನಿ (1996) ಮತ್ತು ದಿಲ್ ತೋ ಪಾಗಲ್ ಹೈ (1997) ನಲ್ಲಿನ ಅವರ ಪಾತ್ರಗಳು ಕರಿಷ್ಮಾ ಬೇಡಿಕೆ ಹೆಚ್ಚಿಸಿದವು. ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net