ಇನ್ನು, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ದರ್ಶನದ ಬಳಿಕ ಮಾಧ್ಯಮಗಳ ಜತೆಗೆ ಮಾತಾಡಿದ್ದು, ''ಸಿನಿಮಾ ರಿಲೀಸ್ ಹತ್ತಿರ ಬರ್ತಿದೆ. ಹಾಗಾಗಿ, ದೇವಸ್ಥಾನಕ್ಕೆ ಭೇಟಿ ನೀಡಿದ್ದೀನಿ. ನಾನು ಮತ್ತು ನಮ್ಮ ನಿರ್ಮಾಪಕರು ಒಳ್ಳೆ ಕೆಲಸ ಶುರು ಮಾಡುವಾಗ ದೇವರ ದರ್ಶನ ಮಾಡ್ತೇವೆ. ನಾವು ಪಟ್ಟ ಶ್ರಮಕ್ಕೆ ದೇವರ ಅನುಗ್ರಹ ಇರಬೇಕಲ್ವಾ. ಸದ್ಯ, ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಪಡೆದಿದ್ದೇವೆ. ವೀರೇಂದ್ರ ಹೆಗ್ಗಡೆಯವರ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದಿದ್ದೇವೆ. ನಾನು ತುಂಬಾ ವರ್ಷದಿಂದ ಧರ್ಮಸ್ಥಳಕ್ಕೆ ಬರ್ತಾ ಇದೇನೆ. ಹೆಗ್ಗಡೆಯವರು ನನ್ನೆಲ್ಲಾ ಬೆಳವಣಿಗೆಯನ್ನೂ ನೋಡ್ತಾ ಬಂದವರು. ಇವತ್ತು ಅವರು ಖುಷಿ ಪಟ್ಟು ಆಶೀರ್ವಾದ ಮಾಡಿದ್ರು. 'ಕೆಜಿಎಫ್ 2' ರಿಲೀಸ್ ಅಭಿಮಾನಿಗಳಿಗೊಂದು ಖುಷಿ. ಈಗ, ಟಿಕೆಟ್ ಓಪನ್ ಆಗಿದೆ, ಎಲ್ಲರೂ ನಮ್ಮನ್ನು ಆಶೀರ್ವದಿಸಿ'', ಎಂದು ಹೇಳಿದ್ದಾರೆ.