ಬೆಂಗಳೂರು: ಈಗಾಗಲೇ, ಜೀ ಕನ್ನಡ ವಾಹಿನಿಯಲ್ಲಿ ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿಹಕ್ಕಿ, ರಾಧಾ ಕಲ್ಯಾಣ, ಸರೆಗಮಪ, ಡ್ರಾಮಾ ಜೂನಿಯರ್ ಸೀಜನ್-2 ಮತ್ತು ಕಾಮಿಡಿ ಕಿಲಾಡಿಗಳು ಸೀಜನ್-3 ಸೇರಿದಂತೆ ಹಲವಾರು ಸೀರಿಯಲ್ ಮತ್ತು ರಿಯಾಲಿಟಿ ಶೋಗಳು ಕರುನಾಡ ಜನತೆಯನ್ನು ಸಿಕ್ಕಾಪಟ್ಟೆ ರಂಜಿಸುತ್ತಿವೆ. ಆದರೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಶೋನ ನೋಡಲು ಇಷ್ಟು ದಿನ ಕಾದು ಕುಳಿತುಕೊಳ್ಳುತ್ತಿದ್ದರು. ಬಹುತೇಕ, ಈ ಶೋನ ಎಲ್ಲಾ ಸೀಸನ್ಗಳನ್ನು ಪ್ರೇಕ್ಷಕರು ಬಹಳಷ್ಟು ಮೆಚ್ಚಿಕೊಂಡರು. ಹಾಗೆಯೇ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಫ್ಯಾಮಿಲಿ ವಾರ್ ಸೀಜನ್-6 ಅನ್ನು ನೋಡಲು ಪ್ರೇಕ್ಷಕರು ಸಿಕ್ಕಾಪಟ್ಟೆ ಕಾತರರಾಗಿದ್ದಾರೆ.