ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು 2 ವಿಕೆಟ್ಗಳ ಜಯ ಸಾಧಿಸುವ ಮೂಲಕ 2-0 ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು (Team India) ಎದುರಾಳಿಗಳನ್ನು ನಾಯಕ ಜೋಸ್ ಬಟ್ಲರ್ (45 ರನ್, 30 ಎಸೆತ, 2 ಬೌಂಡರಿ, 3 ಸಿಕ್ಸರ್) ದಿಟ್ಟ ಪ್ರತಿರೋಧದ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ಗೆ 165 ರನಗ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ (4-0-32-2), ವರುಣ್ ಚಕ್ರವರ್ತಿ (4-0-38-2), ಅರ್ಷ್ದೀಪ್ ಸಿಂಗ್ (4-0-40-1), ಹಾರ್ದಿಕ್ ಪಾಂಡ್ಯ (2-0-6-1), ವಾಷಿಂಗ್ಟನ್ ಸುಂದರ್ (1-0-9-1), ಅಭಿಷೇಕ್ ಶರ್ಮ (1-0-12-1) ರನ್ ನೀಡಿ ವಿಕಟ್ ಪಡೆದಿದ್ದಾರೆ.
ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾಗೆ (Team India) ಆರಂಭದಲ್ಲೇ ಆಘಾತ ನೀಡುವಲ್ಲಿ ಆಂಗ್ಲರು ಸಫಲರಾದರು. ತಿಲಕ್ ವರ್ಮಾ (72 ರನ್, 55 ಎಸೆತ, 4 ಬೌಂಡರಿ, 5 ಸಿಕ್ಸರ್) ಆರ್ಧಶತಕದ ಫಲವಾಗಿ 19.2 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ಗಳಿಸಿ ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ಪರ ಬ್ರೈಡಾನ್ ಕಾರ್ಸೆ (4-0-29-3), ಆದಿಲ್ ರಶೀದ್ (4-0-14-1), ಜೋಫ್ರಾ ಆರ್ಚರ್ (4-0-60-1), ಮಾರ್ಕ್ ವುಡ್ (3-0-28-1), ಲಿಯಾನ್ ಲಿವಿಂಗ್ಸ್ಟನ್ (2-0-14-1), ಜೇಮಿ ಓವರ್ಟನ್ (2.2-0-20-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
2️⃣-0️⃣ 🙌
Tilak Varma finishes in style and #TeamIndia register a 2-wicket win in Chennai! 👌
Scorecard ▶️ https://t.co/6RwYIFWg7i #INDvENG | @IDFCFIRSTBank pic.twitter.com/d9jg3O02IB
— BCCI (@BCCI) January 25, 2025
ಸ್ಯಾಂಡಲ್ವುಡ್ನ ಹಿರಿಯ ನಟ ಅನಂತ್ನಾಗ್ಗೆ Padma Bhushan ಪ್ರಶಸ್ತಿ
ಆತ ವೈಟ್ಬಾಲ್ ಕ್ರಿಕೆಟ್ನ… Virat Kohli ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್ ಆಟಗಾರ
BiggBoss ವಿನ್ನರ್ಗೆ ಲಭಿಸಿದೆ ಐದು ಕೋಟಿಗೂ ಅಧಿಕ ವೋಟ್; ಫಿನಾಲೆ ವೇದಿಕೆಯಲ್ಲಿ ಬಹಿರಂಗವಾಯ್ತು ಅಧಿಕೃತ ಲೆಕ್ಕ