ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು 2025ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ಪದ್ಮಭೂಷಣ (Padma Bhushan) ಪ್ರಶಸ್ತಿಯನ್ನು ಘೋಷಿಸಿದ್ದು, ಕನ್ನಡಚ ಚಿತ್ರರಂಗದ ಹಿರಿಯ ನಟ ಅನಂತ್ನಾಗ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಟ ಅನಂತ್ನಾಗ್ ಅವರೊಂದಿಗೆ ಸಂಗೀತ ನಿರ್ದೇಶಕ ರಿಕ್ಕಿ ಕೇಜ್, ನಟರಾದ ನಂದಮೂರಿ ಬಾಲಕೃಷ್ಣ, ತಲಾ ಅಜಿತ್, ಶೇಖರ್ ಕಪೂರ್, ಪಿಟೀಲು ವಾದಕ ಸುಬ್ರಮಣಿಯಂ ಲಕ್ಷ್ಮಿನಾರಾಯಣ, ಸುಜುಕಿ ಮೋಟಾರ್ಸ್ನ ಮಾಜಿ ಅಧ್ಯಕ್ಷ ಒಸಾಮು ಸುಜುಕಿ ಅವರಿಗೂ ಕೇಂದ್ರ ಸರ್ಕಾರ ಪದ್ಮಭೂಷಣ (Padma Bhushan) ಪ್ರಶಸ್ತಿಯನ್ನು ಘೋಷಿಸಿದೆ. ಒಟ್ಟು 19 ಮಂದಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಒಟ್ಟು 139 ಮಂದಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಇದರಲ್ಲಿ 7 ಮಂದಿಗೆ ಪದ್ಮವಿಭೂಷಣ, 19 ಮಂದಿಗೆ ಪದ್ಮಭೂಷಣ, 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.
ಕಲೆ, ಸಮಾಜುಮುಖಿ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಹಾಗೂ ಎಂಜಿನಿಯರಿಂಗ್, ವ್ಯಾಪಾರ ಹಾಗೂ ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗ ಪದ್ಮ ಪ್ರಶಸ್ತಿಯನ್ನು (Padma Awards) ಕೇಂದ್ರ ಸರ್ಕಾರ ನೀಡುತ್ತದೆ.
ಆತ ವೈಟ್ಬಾಲ್ ಕ್ರಿಕೆಟ್ನ… Virat Kohli ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್ ಆಟಗಾರ
BiggBoss ವಿನ್ನರ್ಗೆ ಲಭಿಸಿದೆ ಐದು ಕೋಟಿಗೂ ಅಧಿಕ ವೋಟ್; ಫಿನಾಲೆ ವೇದಿಕೆಯಲ್ಲಿ ಬಹಿರಂಗವಾಯ್ತು ಅಧಿಕೃತ ಲೆಕ್ಕ