ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 11ನೇ ಆವೃತ್ತಿಯು (BiggBoss 11th Season) ಮುಕ್ತಾಯದ ಹಂತ ತಲುಪಿದ್ದು, ಈಗಾಗಲೇ ಫಿನಾಲೆ ಸಂಚಿಕೆ ಪ್ರಸಾರವಾಗುತ್ತಿದೆ. ಜತ್, ತ್ರಿವಿಕ್ರಮ್, ಹನುಮಂತು, ಉಗ್ರಂ ಮಂಜು, ಮೋಕ್ಷಿತಾ ಹಾಗೂ ಮಂಜು ಫೈನಲ್ ತಲುಪಿದ್ದಾರೆ. ಆರಂಭದಲ್ಲಿ ಗಲಾಟೆಯ ವಿಚಾರವಾಗಿ ಹೆಚ್ಚು ಸದ್ದು ಮಾಡಿದ್ದ ಬಿಗ್ಬಾಸ್ ಕಾರ್ಯಕ್ರಮವು ಆ ಬಳಿಕ ಟಿಆರ್ಪಿ ವಿಚಾರದಲ್ಲಿ ದಾಖಲೆ ಬರೆದಿತ್ತು. ನಿರೂಪಕ ಕಿಚ್ಚ ಸುದೀಪ್ ಆರಂಭದಲ್ಲೇ ಹೇಳಿದಂತೆ 11ನೇ ಆವೃತ್ತಿಯ ಬಿಗ್ಬಾಸ್ ಈಗ ಮತ್ತೊಂದು ದಾಖಲೆಯನ್ನು ಬರೆದಿದೆ.
ಈ ಮೊದಲು 10ನೇ ಆವೃತ್ತಿಯ ಬಿಗ್ಬಾಸ್ (BiggBoss) ಯಶಸ್ವಿ ಎನಿಸಿಕೊಂಡಿತ್ತು. ಆದರೆ, 11ನೇ ಸೀಸನ್ ಅದಕ್ಕೆ ಸೆಡ್ಡು ಹೊಡೆದಿದ್ದು, ಟಿಆರ್ಪಿ ಸೇರಿದಂತೆ ಅನೇಕ ವಿಚಾರದಲ್ಲಿ ದಾಖಲೆ ಬರೆದಿತ್ತು. ಇದೀಗ ವೋಟಿಂಗ್ ವಿಚಾರದಲ್ಲೂ ಕೂಡ 11ನೇ ಆವೃತ್ತಿಯ ಬಿಗ್ಬಾಸ್ ಎಲ್ಲರ ಗಮನ ಸೆಳೆದಿದ್ದು, ಈ ವಿಚಾರವನ್ನು ಫಿನಾಲೆ ವೇದಿಕೆಯಲ್ಲಿ ಸುದೀಪ್ ಅವರು ರಿವೀಲ್ ಮಾಡಿದ್ದಾರೆ.
ಇತಿಹಾಸ ಸೃಷ್ಟಿಸಿದ ಬಿಗ್ ಬಾಸ್ ವೋಟಿಂಗ್! ಯಾರಿಗೆಷ್ಟು ವೋಟ್?
ಬಿಗ್ ಬಾಸ್ ಕನ್ನಡ 11 ಗ್ರಾಂಡ್ ಫಿನಾಲೆ | ಈಗಲೇ ನೋಡಿ#BiggBossKannada11 #BBK11 #GrandFinale #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKWatchNow pic.twitter.com/DmZQNmkvU2
— Colors Kannada (@ColorsKannada) January 25, 2025
ಅದರಂತೆ ಬಿಗ್ಬಾಸ್ 11ನೇ ಆವೃತ್ತಿಯನ್ನು ಗೆಲ್ಲಲಿರುವ ಸ್ಫರ್ಧಿಯು 5,23,89,318 ಕೋಟಿ ಮತ ಪಡೆದಿದ್ದು, ಮೊದಲು ಎಮಿಲಿನೇಟ್ ಆಗುತ್ತಿರುವ ಸ್ಫರ್ಧಿ 64,48,853 ಮತಗಳನ್ನು ಪಡೆದಿದ್ದಾರೆ. ಈ ವಿಚಾರವನ್ನು ಕೇಳಿ ಸ್ಫರ್ಧಿಗಳು ಹಾಗೂ ನೆರದಿದ್ದವರು ಹೌಹಾರಿದ್ದು, ಜನರು ಕಾರ್ಯಕ್ರಮಕ್ಕೆ ಎಷ್ಟು ಪ್ರೀತಿ ನೀಡಿದ್ದಾರೆ ಎಂಬುದಕ್ಕೆ ಸ್ಫರ್ಧಿಗಳು ಪಡೆದಿರುವ ಮತಗಳೇ ಸಾಕ್ಷಿಯಾಗಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.
Padma Awards 2025 ಪ್ರಕಟ; ಕರ್ನಾಟಕದ ಮೂವರು ಸೇರಿದಂತೆ 30 ಸಾಧಕರಿಗೆ ಪ್ರಶಸ್ತಿ ಘೋಷಣೆ
BiggBoss ಮನೆಯಿಂದ ಎಲಿಮಿನೇಟ್ ಆದ ಮೊದಲೆರಡು ಸ್ಫರ್ಧಿಗಳು ಇವರೇ ನೋಡಿ!