BiggBoss ಮನೆಯಿಂದ ಎಲಿಮಿನೇಟ್​ ಆದ ಮೊದಲೆರಡು ಸ್ಫರ್ಧಿಗಳು ಇವರೇ ನೋಡಿ!

BBKS Finale
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) 11ನೇ ಆವೃತ್ತಿಗೆ ತೆರಬೀಳುವ ಸಮಯ ಬಂದಿದ್ದು, ಜನವರಿ 25 ಹಾಗೂ 26ರಂದು ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ಈಗಾಗಲೇ ಫಿನಾಲೆ ಕಾರ್ಯಕ್ರಮ ಶುರುವಾಗಿದ್ದು, ರಜತ್​, ತ್ರಿವಿಕ್ರಮ್​, ಹನುಮಂತು, ಉಗ್ರಂ ಮಂಜು, ಮೋಕ್ಷಿತಾ ಹಾಗೂ ಮಂಜು ಫೈನಲ್ ತಲುಪಿದ್ದಾರೆ. ಇವರಲ್ಲಿ ಯಾರು ವಿಜೇತರಾಗಲಿದ್ದಾರೆ ಎಂಬುದೇ ಈಗ ಕುತೂಹಲಕಾರಿಯಾಗಿದೆ.

ವೋಟಿಂಗ್ ಆಧಾರದ ಮೇಲೆ ಬಿಗ್​ಬಸ್​ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಸ್ಫರ್ಧಿಗಳನ್ನು ಮನೆಯಿಂದ ಎಲಿಮಿನೇಟ್​ ಮಾಡಲಾಗುತ್ತದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬಿಗ್​ಬಾಸ್​ ಮನೆಯಿಂದ ರಜತ್​ ಹಾಗೂ ಭವ್ಯಾ ಎಲಿಮಿನೇಟ್​ ಆಗಿದ್ದಾರೆ ಎಂದು ಹೇಳಲಾಗಿದ್ದು, ಇನ್ನಷ್ಟೇ ಅಧಿಕೃತವಾಗಬೇಕಿದೆ.

BBKS 11

ವೋಟಿಂಗ್​ ಆಧಾರದ ಮೇಲೆ ರಜತ್​ ಹಾಗೂ ಭವ್ಯಾರನ್ನು ವೋಟಿಂಗ್ ಆಧಾರದಲ್ಲಿ ಎಲಿಮಿನೇಟ್​ ಮಾಡಲಾಗಿದೆ ಎಂದು ಹೇಳಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್​ಬಾಸ್​ ವೋಟಿಂಗ್​ ಕುರಿತಾದ ಪೋಸ್ಟ್ ಒಂದು ವೈರಲ್​ ಆಗಿದ್ದು, ಟಾಪ್​ 2ನಲ್ಲಿ ಮೋಕ್ಷಿತಾ ಹಾಗೂ ಹನುಮಂತು ಕಾಣಿಸಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ತ್ರಿವಿಕ್ರಮ್​, ನಾಲ್ಕನೇ ಸ್ಥಾನದಲ್ಲಿ ಉಗ್ರಂ ಮಂಜು ಐದು ಹಾಗೂ ಆರನೇ ಸ್ಥಾನದಲ್ಲಿ ಭವ್ಯಾ ಮತ್ತು ರಜತ್​ ಇದ್ದಾರೆ. ಆದರೆ, ಈ ವೋಟಿಂಗ್​ ಆರ್ಡರ್‌ ಅಧಿಕೃತವೇ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net