ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ಸ್ಟಾರ್ ಬ್ಯಾಟರ್, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ತಮ್ಮ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದು, ಈಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಗಳೇ ಅದಕ್ಕೆ ಜೀವಂತೆ ನಿದರ್ಶನವಾಗಿದೆ. ಕೊಹ್ಲಿಯ ನೀರಸ ಪ್ರದರ್ಶನಕ್ಕೆ ಕಿಡಿಕಾರಿದ್ದ ಫ್ಯಾನ್ಸ್ ನಿವೃತ್ತಿ ಪಡೆಯುವಂತೆ ಸೂಚಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಮಾತನಾಡಿರುವ ಮೊಹಮ್ಮದ್ ಕೈಫ್ ಕೊಹ್ಲಿ ಕಮ್ಬ್ಯಾಕ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತಾಗಿ ವಿಡಿಯೋ ಪೋಸ್ಟ್ ಮಾಡಿರುವ ಕೈಫ್, ನಾನೂ ನೋಡಿದಂತೆ ವಿರಾಟ್ ಕೊಹ್ಲಿ (Virat Kohli) ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಆತ ಕಮ್ಬ್ಯಾಕ್ ಮಾಡೇ ಮಾಡುತ್ತಾನೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ಆತನ ಪ್ರದರ್ಶನವೇ ಎಲ್ಲವನ್ನು ಹೇಳುತ್ತದೆ. ಏಕದಿನ ಮಾದರಿಯಲ್ಲಿ ಆತ 50 ಶತಕ ಒಳಗೊಂಡಂತೆ 13 ಸಾವಿರ ರನ್ಗಳನ್ನು ಬಾರಿಸಿದ್ದಾನೆ. ಟೆಸ್ಟ್ನಲ್ಲಿ ಏನಾಯಿತು ಎಂಬುದನ್ನು ನಾವೆಲ್ಲರೂ ಮರೆಯಬೇಕು.
ವೈಟ್ಬಾಲ್ ಕ್ರಿಕೆಟ್ಗೆ ಬರುವುದಾದರೆ ವಿರಾಟ್ ಕೊಹ್ಲಿ ವಿಭಿನ್ನವಾಗಿ ಆಡುತ್ತಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ಬಾರಿ ಆತ ದುಬೈ ಕ್ರೀಡಾಂಗಣದಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಆರು ಸಿಕ್ಸರ್ ಒಳಗೊಂಡಂತೆ 61 ಎಸೆತಗಳಲ್ಲಿ 122 ರನ್ಗಳಿಸಿದ್ದರು. ಆ ಸಮಯದಲ್ಲಿ ಆತನ ಫಾರ್ಮ್ ಅತ್ಯುತ್ತಮವಾಗಿತ್ತು. ಆತ ದುಬೈನಲ್ಲಿ ಆಡಲು ಇಷ್ಟಪಡುತ್ತಾರೆ, ಆದ್ದರಿಂದ ನಾನು ಆತನ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ.
ಆತ ಏನಾದರೂ ಮೊದಲ ಪಂದ್ಯದಲ್ಲಿ ರನ್ ಗಳಿಸಿದರೆ ಉಳಿದ ಮ್ಯಾಚ್ಗಳಿಗೆ ನಾನು ಗ್ಯಾರಂಟಿ ಕೊಡಬಲ್ಲೇ. ವೈಟ್ಬಾಲ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ರಾಜ ಎಂದರೆ ತಪ್ಪಾಗಲಾರದು. ಆತನ ಯುಗವು ಇನ್ನೂ ಕೊನೆಗೊಂಡಿಲ್ಲ. ಮುಂದುವರೆಯುತ್ತದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ವಿರಾಟ್ ಕೊಹ್ಲಿ (Virat Kohli) ಫಾರ್ಮ್ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
BiggBoss ವಿನ್ನರ್ಗೆ ಲಭಿಸಿದೆ ಐದು ಕೋಟಿಗೂ ಅಧಿಕ ವೋಟ್; ಫಿನಾಲೆ ವೇದಿಕೆಯಲ್ಲಿ ಬಹಿರಂಗವಾಯ್ತು ಅಧಿಕೃತ ಲೆಕ್ಕ
Padma Awards 2025 ಪ್ರಕಟ; ಕರ್ನಾಟಕದ ಮೂವರು ಸೇರಿದಂತೆ 30 ಸಾಧಕರಿಗೆ ಪ್ರಶಸ್ತಿ ಘೋಷಣೆ