ಚೆನ್ನೈ: ಉಳಗ ನಾಯಗನ್ ಕಮಲ್ ಹಾಸನ್ ಅವರು ಮುಂದಿನ ಸಿನಿಮಾ ಥಗ್ ಲೈಫ್ ಸದ್ಯ ಸುದ್ದಿಯಲ್ಲಿದೆ. ಮಣಿರತ್ನಂ ನಿರ್ದೇಶಿಸಲಿರುವ ಈ ಆ್ಯಕ್ಷನ್ ಡ್ರಾಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದೆ. ಆದರೆ ವಿಷಯ ಅದಲ್ಲ ಸಿನಿಮಾ ಬಿಡುಗಡೆಗೂ ಮುನ್ನವೆ ತನ್ನ ಡಿಜಿಟಲ್ ಹಕ್ಕಗಳೊಂದಿಗೆ ಕಾಲಿವುಡ್ ಚಲನಚಿತ್ರೋದ್ಯಮದಲ್ಲಿ ಹೊಸ ದಾಖಲೆಯನ್ನು ಮಾಡಿದೆ.
ಇದನ್ನು ಓದಿ: 20 ವರ್ಷಗಳ ನಂತರ ‘ವೀರ್ ಝೂರಾ’ ರೀರಿಲೀಸ್; ಬಾಕ್ಸ್ಆಫೀಸ್ ಕಲೆಕ್ಷನ್ ಕೇಳಿದ್ರೆ ಅಬ್ಬಬ್ಬಾ ಅಂತೀರಾ..
ಥಗ್ ಲೈಫ್ ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿದೆ. ಸಿನಿಮಾ 2025ಕ್ಕೆ ರಿಲೀಸ್ ಆಗುವ ನಿರೀಕ್ಷೆ ಇದೆ. ಡಿಜಿಟಲ್ ಹಕ್ಕುಗಳ ವಿಷಯದಲ್ಲಿ ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿ ಹೊರಹೊಮ್ಮಿದೆ. ಥಗ್ ಲೈಫ್‌ನ OTT ಒಪ್ಪಂದವನ್ನು ಖಚಿತಪಡಿಸಲಾಗಿದೆ. ಚಿತ್ರದ ಒಟಿಟಿ ಹಕ್ಕುಗಳು 149.7 ಕೋಟಿ ರೂ.ಗೆ ಮಾರಾಟವಾಗಿದೆ. ತಮಿಳು ಚಿತ್ರವೊಂದರ ಒಟಿಟಿ ಹಕ್ಕುಗಳಿಗೆ ಇಷ್ಟು ದೊಡ್ಡ ಡೀಲ್ ಲಾಕ್ ಆಗಿರುವಾಗ ಇದೊಂದು ದಾಖಲೆಯ ಡೀಲ್ ಆಗಿದೆ. ಚಿತ್ರವು ಯಾವ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಆದರೆ ಅಭಿಮಾನಿಗಳು ಅದಕ್ಕಾಗಿ ಉತ್ಸುಕರಾಗಿದ್ದಾರೆ.
‘ಥಗ್ ಲೈಫ್’ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ನಿರ್ದೇಶಕ ಮಣಿರತ್ನಂ ಮತ್ತು ಅವರ ತಂಡ ಶೀಘ್ರದಲ್ಲೇ ಚಿತ್ರೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಯೋಜಿಸುತ್ತಿದೆ ಎಂದು ಹತ್ತಿರದ ಮೂಲಗಳು ಬಹಿರಂಗಪಡಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಕಮಲ್ ಹಾಸನ್ ಅಭಿನಯದ ಈ ಚಿತ್ರದ ಟೀಸರ್ ಬಗ್ಗೆ ಹೊರಬೀಳುವ ಸಾಧ್ಯತೆ ಇದೆ.
ಕಮಲ್ ಹಾಸನ್ ‘ಥಗ್ ಲೈಫ್’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸಿಲಂಬರಸನ್ ಅವರ ಮಗನ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಸೇರಿ ಅಶೋಕ್ ಸೆಲ್ವನ್, ನಾಸಿರ್, ದೆಹಲಿ ಗಣೇಶ್, ಅಭಿರಾಮಿ, ಜೋಜು ಜಾರ್ಜ್, ಐಶ್ವರ್ಯ ಲಕ್ಷ್ಮಿ ಇತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎ. ಆರ್.ರೆಹಮಾನ್ ಈ ಚಿತ್ರದ ಹಾಡುಗಳು ಮತ್ತು ಮೂಲ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಛಾಯಾಗ್ರಹಣ ನಿರ್ದೇಶಕರು ರವಿ ಕೆ ಚಂದ್ರನ್, ಎ.ಶ್ರೀಕರ್ ಪ್ರಸಾದ್ ಸಂಕಲನವನ್ನು ನಿಭಾಯಿಸಿದ್ದಾರೆ. ಜುಲೈ 12ರಂದು ಬಿಡುಗಡೆಯಾದ ಇಂಡಿಯನ್ 2 ಸಿನಿಮಾದಲ್ಲಿ ಕಮಲ್ ಹಾಸನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)
ರಣಬೀರ್ ಆ ಕ್ಷಣವನ್ನು ಮಿಸ್ ಮಾಡಿಕೊಂಡ; ಆಲಿಯಾ ಭಟ್ ಹೇಳಿದ್ದೇನು ಗೊತ್ತಾ?