ಮುಂಬೈ: ಬಾಲಿವುಡ್ ಸೆಲಿಬ್ರಿಟಿಗಳ ಕ್ಯೂಟ್ ಜೋಡಿಯಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಒಬ್ಬರು. ಏಪ್ರಿಲ್ 2022ರಲ್ಲಿ ಈ ಮುದ್ದಾದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ರಾಹಾ ಎಂಬ ಹೆಸರಿನ ಮುದ್ದಾದ ಮಗಳಿರುವುದು ಗೊತ್ತೆ ಇದೆ. ಆಗಾಗ್ಗೆ ಮಗಳೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುವ ಆಲಿಯಾ ಭಟ್ ತಮ್ಮ ಮಗಳ ಬಗ್ಗೆ ಮುಕ್ತವಾಗಿ ಮಾತನಾಡಿ ತಾಯಿಯಾದ ಸುಂದರ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಈ ಒಂದು ಕಾರಣಕ್ಕೆ ಮದುವೆಗು ಮುನ್ನ ಯಾವುದೇ ಸಂಬಂಧದಲ್ಲಿ ತೊಡಗಿಸಿಕೊಳ್ಳಲಿಲ್ಲ; ಖ್ಯಾತ ನಟನ ಹೇಳಿಕೆ ವೈರಲ್
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಆಲಿಯಾ ತನ್ನ ಮಗಳ ಮೊದಲ ಅಸ್ತಿತ್ವ ಅನುಭವಕ್ಕೆ ಬಂದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಹಾಗೂ ಅದನ್ನು ರಣಬೀರ್ ಮಿಸ್ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ನಾನು 2022ರಲ್ಲಿ ಹಾರ್ಟ್ ಆಫ್ ಸ್ಟೋನ್ ಚಿತ್ರೀಕರಣದಲ್ಲಿದ್ದಾಗ ಮೊದಲ ಬಾರಿಗೆ ರಾಹಾ ಅಸ್ತಿತ್ವವನ್ನು ಮೊದಲು ಬಾರಿಗೆ ಅರಿತುಕೊಂಡೆ. ಆಗ ನಾನು ಪೋರ್ಚುಗಲ್‌ನಲ್ಲಿದ್ದೆ. ಮರುದಿನ ನನಗೆ ಶೂಟಿಂಗ್ ಇದ್ದಿದ್ದರಿಂದ ಬೇಗನೆ ನಿದ್ರಿಸಲು ಪ್ರಯತ್ನಿಸುತ್ತಿದ್ದೆ. ನಂತರ ನನ್ನ ಹೊಟ್ಟೆಯಲ್ಲಿ ಏನೋ ಅನಿಸಿತು. ನಾನು ಯೋಚನೆಯಲ್ಲಿ ಮುಳುಗಿದ್ದೆ. ಏನಾಯಿತು ಎಂಬುದು ನನಗೆ ಗೊಂದಲವಾಯಿತು.
ಅದು ರಾಹಾ ಅವರ ಮೊದಲ ಕಿಕ್ ಆಗಿತ್ತು. ಆಗ ರಾಹಾ ಅವರ ಅಸ್ತಿತ್ವದ ಭಾವನೆ ನನಗೆ ಅರ್ಥವಾಯಿತು. ಬಹುಶಃ ರಾಹಾ ಮೊದಲ ಬಾರಿಗೆ ಒದ್ದಿರಬಹುದು. ಮತ್ತೆ ಒದೆಯುತ್ತಾರೆ ಎಂದು ನಾನು ಕಾಯುತ್ತಿದ್ದೆ. ಆದರೆ ಬಳಿಕ ನನಗೆ ಆ ಅನುಭವ ಆಗಲಿಲ್ಲ. ಬಳಿಕ ನಾನು ರಣಬೀರ್‌ಗೆ ಕರೆ ಮಾಡಿದೆ. ರಣಬೀರ್ ಬಾಂಬೆಯಲ್ಲಿದ್ದ. ನಾನು ಫೋನ್ ಮಾಡಿದಾಗ ನಿದ್ರಿಸುತ್ತಿದ್ದ. ನಿದ್ದೆಯಲ್ಲಿಯೇ ಕರೆ ಸ್ವೀಕರಿಸಿ ಏನಾಯಿತು ಎಂದು ಕೇಳಿದ. ನಾನು ಏನೂ ಇಲ್ಲ! ಬೇಬಿ ಕಿಕ್ ಮಾಡಿತು ಎಂದು ಹೇಳಿದೆ. ಅದಕ್ಕೆ ರಣಬೀರ್ ಸರಿ, ಒಳ್ಳೆಯದು ಎಂದು ಹೇಳಿ ನಂತರ ಮಲಗಿದ. ಆದರೆ ನನಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ತುಂಬಾ ಸಂತೋಷವಾಗಿತ್ತು ಎಂದು ಹೇಳಿದರು.
ಅಷ್ಟೆ ಅಲ್ಲ ರಾಹಾ ಮೊದಲು ಯಾರನ್ನು ಕರೆಯುತ್ತಾಳೆ ಎಂಬುದಕ್ಕೂ ಜಗಳ ಮಾಡಿದ್ದೇವು. ಪಾಪಾ ಅಥವಾ ಮಾಮಾ ಯಾವುದು ಕರೆಯುತ್ತಾಳೆ ಎಂದು ಜಗಳವಾಗಿತ್ತು. ರಣಬೀರ್ ಅಪ್ಪ ಎಂದು ಹೇಳಿಕೊಡುತ್ತಿದ್ದ. ಹೀಗೆ ಒಂದು ದಿನ ನಾನು ರಾಹ ಆಡುತ್ತಿದ್ದೇವು. ರಾಹಾ ಮೊದಲ ಬಾರಿಗೆ ಅಮ್ಮಾ ಎಂದು ಕರೆದರು. ಅವರು ಮತ್ತೆ ಅಮ್ಮ ಎಂದು ಹೇಳಿದರೆ ರೆಕಾರ್ಡ್ ಮಾಡುವ ಆಸೆಯಿಂದ ಮೊಬೈಲ್ ಹಿಡಿದು ಕುಳಿತಿದ್ದೆ ಎಂದು ನೆನಪಿಸಿಕೊಂಡರು.
ರಣಬೀರ್ ಅನಿಮಲ್ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರು ಸದ್ಯ ರಾಮಾಯಣ ಸಿನಿಮಾ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ. ಆಲಿಯಾ ಅವರು ಹಾರ್ಟ್ ಆಫ್ ಸ್ಟೋನ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)
ನನ್ನ ಬಂಗಲೆ ಮಾರಾಟ ಮಾಡಲು ಇದೆ ಕಾರಣ; ಸಂಕಷ್ಟ ಬಿಚ್ಚಿಟ್ಟ ಕ್ವೀನ್