ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ನೇರ ನುಡಿಯಿಂದಾಗಿ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುತ್ತಾರೆ. ಯಾರು ಏನೇ ಹೇಳಿದರು ಡೋಂಟ್ ಕೇರ್ ಎನ್ನುವ ಸ್ವಭಾವದಿಂದ ತಮ್ಮ ಅನಿಸಿಕೆಯನ್ನು ಮುಜುಗರಕ್ಕೆ ಒಳಗಾಗದೆ ವ್ಯಕ್ತಪಡಿಸುತ್ತಾರೆ. ಅಂದ್ಹಾಗೆ ಈ ನಟಿ ಇತ್ತೀಚೆಗೆ ತನ್ನ ಮುಂಬೈ ಬಂಗಲೆಯನ್ನು ಮಾರಾಟ ಮಾಡಿದ್ದು ಗೊತ್ತೆ ಇದೆ. ಮಾರಾಟದ ವಿಚಾರ ಹಲವು ಊಹಾಪೋಹಗಳಿಗೆ ರೆಕ್ಕೆ ನೀಡಿದಂತೆ ಆಗಿತ್ತು. ಆದರೆ ಅದಕ್ಕೆಲ್ಲಾ ಫುಲ್ಸ್ಟಾಪ್ ಇಡುವಂತೆ ಈಗ ಸ್ವತಃ ಕಂಗನಾ ತನ್ನ ಮನೆಯನ್ನು ಮಾರಾಟ ಮಾಡಲು ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ.
ಇದನ್ನು ಓದಿ: ಐಸಿಯುನಲ್ಲಿದ್ದ ಅಮಿತಾಭ್ ನೋಡಿ ಗಳಗಳನೆ ಅತ್ತಿದ್ದ ಇಂದಿರಾ ಗಾಂಧಿ; ಬಿಗ್ಬಿ ಮಾತಿಗೆ ಐರನ್ ಲೇಡಿ ರಿಯಾಕ್ಷನ್ ಹೀಗಿತ್ತು..
ಸಂದರ್ಶನವೊಂದರಲ್ಲಿ ಕಂಗನಾ ರಣಾವತ್ ತಮ್ಮ ಬಂಗಳೆ ಮಾರಲು ಕಾರಣ ಏನೆಂಬುದನ್ನು ತಿಳಿಸಿದ್ದಾರೆ. ಅವರು ನಟಿಸಿರುವ ಎಮರ್ಜೆನ್ಸಿ ಸಿನಿಮಾ ಬಹಳ ದಿನಗಳಿಂದ ಸುದ್ದಿಯಲ್ಲಿರುವುದು ತಿಳಿದಿದೆ. ಎಮರ್ಜೆನ್ಸಿ ಸಿನಿಮಾ ಬಿಡುಗಡೆಗೆ ಸಾಕಷ್ಟು ಪ್ರಯತ್ನ ನಡೆಸಿದ್ದೆ. ನನ್ನ ಸಂಪೂರ್ಣ ವೈಯಕ್ತಿಕ ಆಸ್ತಿಯನ್ನು ಈ ಚಿತ್ರಕ್ಕೆ ಹೂಡಿಕೆ ಮಾಡಿದ್ದೆ. ಆದರೀಗ ಚಿತ್ರದ ಬಿಡುಗಡೆ ಮುಂದೂಡಿಕೆಯಾಗಿದ್ದು ಹಣದ ಕೊರತೆಯಿಂದ ಬಂಗಲೆಯನ್ನು ಮಾರಬೇಕಾಯಿತು ಎಂದು ಹೇಳಿದರು.
ಕಂಗನಾ ಅವರು ಈ ಬಂಗಲೆಯನ್ನು 2017ರಲ್ಲಿ 20 ಕೋಟಿ ರೂಪಾಯಿಗೆ ಖರೀದಿಸಿದ್ದರು. ಕಂಗನಾ 2019ರಲ್ಲಿ ಈ ಬಂಗಲೆಯಲ್ಲಿ ತನ್ನ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ ಅನ್ನು ಸ್ಥಾಪಿಸಿದ್ದರು. ಆದರೆ 2020ರಲ್ಲಿ ಬಿಎಂಸಿ ಈ ಬಂಗಲೆಯ ಅಕ್ರಮ ಭಾಗವನ್ನು ಕೆಡವಿತ್ತು. ಕಂಗನಾ ಈ ಕ್ರಮಕ್ಕಾಗಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಪರಿಹಾರಕ್ಕೆ ಅವರು ಅರ್ಹರು ಎಂದು ನ್ಯಾಯಾಲಯವು ಹೇಳಿತ್ತು. ಆದರೆ ಬಳಿಕ ಇದು ತೆರಿಗೆದಾರರ ಹಣ ಮತ್ತು ಪರಿಹಾರಕ್ಕಿಂತ ಹೆಚ್ಚಾಗಿ ತನ್ನ ಶ್ರಮವನ್ನು ನಂಬುತ್ತೇನೆ ಎಂದು ತಿಳಿಸಿದ ಕಂಗನಾ ಈ ಆಲೋಚನೆಯನ್ನು ಕೈಬಿಟ್ಟರು.
ಸೆಪ್ಟೆಂಬರ್ 6ರಂದು ತೆರೆಗೆ ಬರಬೇಕಿದ್ದ ಕಂಗನಾ ಅಭಿನಯದ ಎಮರ್ಜೆನ್ಸಿ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದ ಕಾರಣ ಮುಂದೂಡಲ್ಪಟ್ಟಿದೆ. ಈ ಬಗ್ಗೆ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿದ್ದಾರೆ. ಎಮರ್ಜೆನ್ಸಿ ಸಿನಿಮಾ ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)
ಭಾರತೀಯ ಆಹಾರ ಕೊಳಕು ಮಸಾಲೆಗಳಿಂದ ಕೂಡಿದೆ; ಯುಟ್ಯೂಬರ್ಗೆ ಚಳಿ ಬಿಡಿಸಿದ ನೆಟ್ಟಿಗರು