ಐಸಿಯುನಲ್ಲಿದ್ದ ಅಮಿತಾಭ್​ ನೋಡಿ ಗಳಗಳನೆ ಅತ್ತಿದ್ದ ಇಂದಿರಾ ಗಾಂಧಿ; ಬಿಗ್​ಬಿ ಮಾತಿಗೆ ಐರನ್​ ಲೇಡಿ ರಿಯಾಕ್ಷನ್​​​ ಹೀಗಿತ್ತು..

ಮುಂಬೈ: ಬಾಲಿವುಡ್​ ಬಿಗ್​ಬಿ ಅಮಿತಾಭ್​​ ಬಚ್ಚನ್​ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಅಮೋಘ ನಟನೆ, ಬೇಸ್​ ವಾಯ್ಸ್​ಗೆ ಅಭಿಮಾನಿಗಳ ಫಿದಾ ಆಗಿರೋದ್ರಲ್ಲಿ ಡೌಟೆ ಇಲ್ಲ. ಬಿಟೌನ್​​ ​​​ಆ್ಯಂಗ್ರಿ ಯಂಗ್​ಮ್ಯಾನ್ ಅವರ ಜೀವನದಲ್ಲಿ ಮರೆಯಲಾಗದಂತ ದಿನವೊಂದಿದೆ ಎಂಬುದು ನಿಮಗೆ ಗೊತ್ತೆ. ಅದು ಅವರಿಗೆ ಸಿಕ್ಕ ಪುನರ್ಜನ್ಮ ಎಂದರೆ ತಪ್ಪಾಗಲಾರದು. ಅಳಿಯನಿಗೆ ಸಂಭವಿಸಿದ ಭೀಕರ ಅಪಘಾತದ ಬಗ್ಗೆ ಪತ್ರಕರ್ತರೂ ಆಗಿದ್ದ ಜಯಾ ಬಚ್ಚನ್​ ಅವರ ತಂದೆ ತರುಣ್​ ಕುಮಾರ್​ ಭಾದುರಿ ಅವರು ‘ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಗಾಗಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ವಿಶ್ವ ಸುಂದರಿ ಸ್ಪರ್ಧೆಯಲ್ಲಿನ ನಮಸ್ತೆ ಫೋಸ್​ ಕುರಿತ ಸೀಕ್ರೆಟ್​​ ರಿವೀಲ್​​; ಪಿಗ್ಗಿ ಚಾಪ್ಸ್ ಹೇಳಿದ್ದೇನು ಗೊತ್ತಾ?

ಹೌದು 1980ರಲ್ಲಿ ಅಮಿತಾಭ್​​ ಬಚ್ಚನ್​ ಅವರು ಕೂಲಿ ಸಿನಿಮಾದ ಚಿತ್ರೀಕರಣದಲ್ಲಿ ತೀವ್ರ ಗಾಯಗೊಂಡು ಹಲವು ದಿನಗಳು ಐಸಿಯುನಲ್ಲಿ ದಾಖಲಾಗಿದ್ದರು. ಇಡೀ ದೇಶವೇ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತಿತ್ತು. 1982 ಆಗಸ್ಟ್ 2 ರಂದು ಅಮಿತಾಭ್​​​​ ಆಸ್ಪತ್ರೆಯಿಂದ ಡಿಶ್ಚಾರ್ಜ್​ ಆದರು. ಏಳು ವರ್ಷಗಳ ಬಳಿಕ ಅಂದರೆ 1982ರಲ್ಲಿ ಈ ವಿಚಾರವನ್ನು ತರುಣ್ ಕುಮಾರ್ ಭಾದುರಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

ನಾವು ಬಾಂಬೆ (ಇಂದಿನ ಮುಂಬೈ) ತಲುಪಿದಾಗ ಅರೋರಾ ಸೇರಿದಂತೆ ನಮಗೆ ತಿಳಿದಿರುವ ಮತ್ತು ನಮಗೆ ತಿಳಿದಿಲ್ಲದ ಅನೇಕ ಸ್ನೇಹಿತರು ಇದ್ದರು. ಅವರೆಲ್ಲರೂ ಸೇರಿದಂತೆ ಇಡೀ ದೇಶವು ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಅಮಿತಾಭ್​ಗಾಗಿ ಪ್ರಾರ್ಥಿಸುತಿತ್ತು. ಅಮಿತಾಬ್ ಬಚ್ಚನ್ ಅವರ ಮಾವ ನಾಸ್ತಿಕರಾಗಿದ್ದರೂ, ಅವನಿಗೆ ಏನೂ ಆಗುವುದಿಲ್ಲ, ನಾನು ಪ್ರಾರ್ಥನೆ ಮಾಡಿದರೆ ಅಮಿತ್‌ ಪಾರಾಗುತ್ತಾನೆ ಎಂಬ ನಂಬಿಕೆಯಿಂದ ಶಾಂತಿಯಿಂದ ಆ ರಾತ್ರಿ ಮಲಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಐಸಿಯುನಲ್ಲಿ ಅಮಿತಾಭ್​ ಬಚ್ಚನ್​​ ಗಂಭೀರ ಸ್ಥಿತಿಯಲ್ಲಿದ್ದರು. ಇಂದಿರಾ ಗಾಂಧಿ ಕೂಡ ಅವರನ್ನು ನೋಡಲು ಬಂದಿದ್ದರು ಎಂಬುದನ್ನು ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ಮರುದಿನ ಬೆಳಗ್ಗೆ, ಜಯಾ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುಗೆ ಕರೆದೊಯ್ದರು. ಅಲ್ಲಿ ಅಮಿತ್ ಹಾಸಿಗೆಯ ಮೇಲೆ ಮಲಗಿದ್ದನು. ಅವನ ದೇಹಕ್ಕೆ ಅನೇಕ ಟ್ಯೂಬ್​ಗಳು ಜೋಡಿಸಲ್ಪಟ್ಟಿದ್ದವು. ಅವನ ಕೆನ್ನೆ ಒಣಗಿದಂತೆ, ಕಣ್ಣುಗಳು ಮುಳುಗಿದ್ದಂತೆ ಕಾಣುತಿತ್ತು. ನನ್ನ ಹೆಂಡತಿ ಅವನನ್ನು ನೋಡಿದ ಕ್ಷಣವೇ ಮೂರ್ಛೆ ಹೋದಳು.

ಆ ಸಮಯದಲ್ಲಿ ಅಮಿತ್​ ಹಲೋ ಬಾಬಾ, ನನಗೆ ನಿದ್ರೆ ಬರುತ್ತಿಲ್ಲ ನನ್ನ ಕಿವಿಯಲ್ಲಿ ಪಿಸುಗುಟ್ಟಿದರು. ಚಿಂತಿಸಬೇಡಿ, ನೀವು ಮಲಗುತ್ತೀರಿ ಎಂದು ನಾನು ಹೇಳಿದೆ. ಈ ಮಾತುಗಳಿಂದ ಯಾವುದೇ ಸಮಾಧಾನ ಆಗುವುದಿಲ್ಲ ಎಂದು ನನಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಎರಡು ದಿನಗಳ ನಂತರ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಕೂಡ ಅಮಿತಾಭ್​​ ಬಚ್ಚನ್​ ಅವರನ್ನು ನೋಡಲು ಸರದಿಯಲ್ಲಿ ಬಂದರು. ಇಂದಿರಾ ಗಾಂಧಿ ಅವರ ಬಳಿ ಅಮಿತ್​ ಮತ್ತೊಮ್ಮ ‘ಆಂಟಿ, ನಿದ್ರೆ ಬರುತ್ತಿಲ್ಲ’ ಎಂದು ಹೇಳಿದರು. ಶ್ರೀಮತಿ ಗಾಂಧಿ ಅಮಿತ್​ಗೆ ಒಡೆದು ಅಳುತ್ತಾ, ‘ಇಲ್ಲ ಮಗು, ನೀವು ನಿದ್ರಿಸುತ್ತೀರಿ. ನನಗೂ ಕೆಲವೊಮ್ಮೆ ನಿದ್ದೆ ಬರುವುದಿಲ್ಲ, ಅದರಲ್ಲಿ ತಪ್ಪೇನಿಲ್ಲ?’ ಎಂದು ಸಂತೈಸಿದ್ದರು ಎಂದು ವಿವರಿಸಿದ್ದಾರೆ.

ಆಸ್ಪತ್ರೆಯಿಂದ ಡಿಶ್ಚಾರ್ಜ್​ ಆದ ಕೆಲ ದಿನಗಳ ಬಳಿಕ ಅಮಿತಾಭ್​​​ ಬಚ್ಚನ್​ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಸಂದರ್ಶನವೊಂದರಲ್ಲಿ ನನಗಾಗಿ, ನನ್ನ ಜೀವಕ್ಕಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ಅತ್ಯಂತ ಕೃತಜ್ಞನಾಗಿದ್ದೇನೆ. ಅದು ದೇವಸ್ಥಾನ, ಮಸೀದಿ ಅಥವಾ ಚರ್ಚ್ ಆಗಿರಲಿ. ನಿಮ್ಮಲ್ಲಿ ಅನೇಕರು ನನಗೆ ತಿಳಿದಿಲ್ಲ, ಆದರೂ ನೀವು ನನಗಾಗಿ ಪ್ರಾರ್ಥಿಸಿದ್ದೀರಿ, ಅದಕ್ಕಾಗಿ ಕೃತಜ್ಞನಾಗಿದ್ದೇನೆ. ಈಗ ನಾನು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಬದುಕುವುದು. ಹಾಗೆ ಬದುಕಲು ನಾನು ಪ್ರಯತ್ನಿಸುತ್ತೇನೆ. ಧನ್ಯವಾದಗಳು ಎಂದು ತಿಳಿಸಿದ್ದರು.

ಅಮಿತಾಭ್​ ಬಚ್ಚನ್​​ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅವರ ಅದ್ಭುತ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳಿನಲ್ಲಿ ಅವರ ಚೊಚ್ಚಲ ಚಿತ್ರವಾಗಿದೆ. (ಏಜೆನ್ಸೀಸ್​)

ದೀಪಿಕಾ ಕೆಲಸ ನೋಡಿಲ್ಲ.. ಶ್ರದ್ಧಾ ಬಗ್ಗೆ ಏನೂ ಗೊತ್ತಿಲ್ಲ!; ನವಾಜುದ್ದೀನ್​ ಸಿದ್ದಿಕಿ ಹೀಗೆಳಿದ್ದೇಕೆ?

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…