ಮುಂಬೈ: ಹಿಂದಿ ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾದ ನವಾಜುದ್ದೀನ್ ಸಿದ್ದಿಕಿ ‘ಸರ್ಫರೋಶ್’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ತಮ್ಮ ಮಾತಿನ ಶೈಲಿಗೆ ಹೆಸರುವಾಸಿಯಾಗಿರುವ ನವಾಜುದ್ದೀನ್, ಬಾಲಿವುಡ್ನ ಫೇಮಸ್ ಸೆಲಿಬ್ರಿಟಿಗಳ ಬಗ್ಗೆ ನೀಡಿರುವ ಹೇಳಿಕೆ ಸದ್ಯ ವಿವಾದವನ್ನುಂಟು ಮಾಡಿದೆ.
ಇದನ್ನು ಓದಿ: ನನ್ನ ಕೆರಿಯರ್ ನಾಶಕ್ಕೆ ಯತ್ನಿಸಿದ್ದು ಆ ಪ್ರಬಲ ವ್ಯಕ್ತಿಗಳೆ; ಬಿಟೌನ್ನ ಕರಾಳ ಮುಖ ಬಿಚ್ಚಿಟ್ಟ ವಿವೇಕ್ ಒಬೆರಾಯ್
ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರಿಗೆ ಬಾಲಿವುಡ್ ಸೆಲೆಬ್ರಿಟಿಗಳಿಗೆ ಹ್ಯಾಶ್‌ಟ್ಯಾಗ್‌ಗಳನ್ನು ನೀಡುವಂತೆ ಕೇಳಲಾಯಿತು. ದೀಪಿಕಾ ಪಡುಕೋಣೆ ಅವರ ಹೆಸರನ್ನು ತೆಗೆದುಕೊಂಡಾಗ ಅವರು ತಕ್ಷಣ ಪ್ರತಿಕ್ರಿಯಿಸಿದರು. ದೀಪಿಕಾ ಅವರ ಜತೆ ಯಾವುದೇ ಸಿನಿಮಾಗಳನ್ನು ಮಾಡಿಲ್ಲ, ಅವರ ಕೆಲಸವನ್ನು ನೋಡಿಲ್ಲ. ಆದ್ದರಿಂದ ಅವರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಶ್ರದ್ಧಾ ಕಪೂರ್ ಬಗ್ಗೆ ಕೇಳಿದಾಗ ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಉತ್ತರಿಸಿದರು. ‘ಸ್ತ್ರೀ’ ಸಿನಿಮಾದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ನಾನು ಆ ಚಲನಚಿತ್ರವನ್ನು ನೋಡಿಲ್ಲ ಆದರೆ ಅದನ್ನು ನೋಡುತ್ತೇನೆ ಎಂದು ತಿಳಿಸಿದರು.
ಅನುರಾಗ್ ಕಶ್ಯಪ್ ನಿರ್ದೇಶನದ ನವಾಜುದ್ದೀನ್ ಸೇರಿ ಅನೇಕ ತಾರೆಯರು ನಟಿಸಿದ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರವು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿದೆ. ಇದಲ್ಲದೆ ಗ್ಯಾಂಗ್ಸ್ ಆಫ್ ವಾಸೇಪುರ್, ಬಜರಂಗಿ ಭಾಯಿಜಾನ್, ಬದ್ಲಾಪುರ್, ಕಹಾನಿ, ಹಡ್ಡಿ ಮತ್ತು ಕಿಕ್‌ನಂತಹ ಚಲನಚಿತ್ರಗಳಲ್ಲಿ ನವಾಜುದ್ದೀನ್ ಅಭಿನಯಿಸಿದ್ದಾರೆ. (ಏಜೆನ್ಸೀಸ್)
ಅಮೀರ್ಖಾನ್ ಮಗನ ಜತೆ ಖುಷಿ ಕಪೂರ್ ರೊಮ್ಯಾನ್ಸ್; ಈ ಕುರಿತು ಜಾಹ್ನವಿ ಕಪೂರ್ ಹೇಳಿದಿಷ್ಟು..