ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕುಟುಂಬದೊಂದಿಗೆ ಕಳೆಯುತ್ತಿರುವ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಪ್ರಿಯಾಂಕಾ ತಮ್ಮ ಒಂದು ರಹಸ್ಯವನ್ನು ಬಹಿರಂಗಗೊಳಿಸಿದ್ದಾರೆ. ವಿಶ್ವ ಸುಂದರಿ ಪಟ್ಟ ಗೆದ್ದಾಗ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: ಅಮೀರ್ಖಾನ್ ಮಗನ ಜತೆ ಖುಷಿ ಕಪೂರ್ ರೋಮ್ಯಾನ್ಸ್; ಈ ಕುರಿತು ಜಾಹ್ನವಿ ಕಪೂರ್ ಹೇಳಿದಿಷ್ಟು..
ಇತ್ತೀಚೆಗೆ ಲಂಡನ್‌ನಲ್ಲಿ ತಮ್ಮ ಪತಿ ನಿಕ್ ಜೋನಾಸ್ ಅವರ ಸಂಗೀತ ಕಚೇರಿಯಲ್ಲಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ವಿಶೇಷವೆಂದರೆ 24 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಪ್ರಿಯಾಂಕಾ ವಿಶ್ವ ಸುಂದರಿ ಪಟ್ಟ ಗೆದ್ದಿದ್ದರು. ಆ ಕ್ಷಣವನ್ನು ನೆನಪಿಸಿಕೊಳ್ಳುವ ಕೆಲವು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹಲವು ಚಿತ್ರಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನಟಿ ಅದರ ಶೀರ್ಷಿಕೆಯಲ್ಲಿ, 24 ವರ್ಷಗಳ ಹಿಂದೆ ಈ ಸ್ಥಳದಲ್ಲಿಯೇ ವಿಶ್ವ ಸುಂದರಿ ಕಿರೀಟವನ್ನು ಪಡೆದಿದ್ದಾಗಿ ಹೇಳಿದ್ದಾರೆ. ಆ ಸಮಯದಲ್ಲಿ ಈ ಸ್ಥಳವನ್ನು ಮಿಲೇನಿಯಂ ಡೋಮ್ ಎಂದು ಕರೆಯಲಾಗುತ್ತಿತ್ತು. ತನ್ನ 18 ವರ್ಷದ ಬಾಲ್ಯದ ಆ ನೆನಪನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಆ ಸಮಯದಲ್ಲಿ ನಾನು ತುಂಬಾ ಉತ್ಸುಕಳಾಗಿದ್ದೆ ಮತ್ತು ಆತಂಕಗೊಂಡಿದ್ದೆ. ನಾನು ಸಾಧ್ಯವಾದಷ್ಟು ಉತ್ತಮವಾಗಿ ಕಾಣಲು ಪ್ರಯತ್ನಿಸುತ್ತಿದೆ. 2000 ನವೆಂಬರ್ 30 ಎಂದಿಗೂ ಮರೆಯಲಾಗದ ದಿನ ಎಂದು ಪ್ರಿಯಾಂಕಾ ಬಣ್ಣಿಸಿದ್ದಾರೆ. ಹೇಮಂತ್ ತ್ರಿವೇದಿ ಅವರ ಸುಂದರವಾದ ಉಡುಪನ್ನು ಪೆನ್ಸಿಲ್ ಹೀಲ್ಸ್‌ನೊಂದಿಗೆ ಇಡೀ ಸಂಜೆ ನಿರ್ವಹಿಸಲು ಪ್ರಯತ್ನಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಆ ದಿನ, ಭಯದ ಕಾರಣ, ಪ್ರಿಯಾಂಕಾ ತುಂಬಾ ಬೆವರುತ್ತಿದ್ದರು. ಇದರಿಂದಾಗಿ ಅವರ ದೇಹದ ಟೇಪ್ ಹಿಡಿಯಲು ಸಾಧ್ಯವಾಗಲಿಲ್ಲ. ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದ ನಂತರದ ನನ್ನ ಚಿತ್ರಗಳನ್ನು ನೀವು ನೋಡಿದರೆ ನಾನು ನಮಸ್ತೆ ಮಾಡುತ್ತಿದ್ದೀನಿ ಎಂದುಕೊಳ್ಳುತ್ತೀರಿ. ಆದರೆ ವಾಸ್ತವವಾಗಿ ನಾನು ನನ್ನ ಉಡುಗೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಹಾಗೂ ಅದರಲ್ಲಿ ನಾನು ಯಶಸ್ವಿಯಾದೆ. ಅಂತಿಮವಾಗಿ ಎಲ್ಲವೂ ಚೆನ್ನಾಗಿ ನಡೆಯಿತು ಎಂದು ನಮಸ್ತೆ ಹಿಂದಿನ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ‘ದಿ ಬ್ಲಫ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ‘ಹೆಡ್ಸ್ ಆಫ್ ಸ್ಟೇಟ್’ ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಕೂಡ ನಟಿಸಿದ್ದಾರೆ. ವಿಶ್ವ ಸುಂದರಿ ಆದ ನಂತರ ಪ್ರಿಯಾಂಕಾ ತಮಿಳು ಚಿತ್ರ ‘ತಮಿಜಾನ್’ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದು ಗೊತ್ತೇ ಇದೆ.(ಏಜೆನ್ಸೀಸ್)