ಮುಂಬೈ: ಇತ್ತೀಚೆಗೆ ಸಿನಿಮಾಗಳ ರೀರಿಲೀಸ್ ಟ್ರೆಂಡ್ ಶುರುವಾಗಿರುವುದು ಗೊತ್ತೆ ಇದೆ. ಕನ್ನಡ, ತೆಲುಗು, ತಮಿಳು ದಕ್ಷಿಣ ಚಿತ್ರರಂಗ ಮಾತ್ರವಲ್ಲ ಬಾಲಿವುಡ್ ಕೂಡ ಇದರಿಂದ ಹೊರತಾಗಿಲ್ಲ. ಶಾರೂಖ್ಖಾನ್ ಮತ್ತು ಪ್ರೀತಿಜಿಂಟಾ ಹಾಗೂ ರಾಣಿ ಮುಖರ್ಜಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವೀರ್ ಝೂರಾ ಸಿನಿಮಾ 2004ರಲ್ಲಿ ಬಿಡುಗಡೆಯಾಯಿತು. ಇಂದಿಗೂ ಸಿನಿಮಾದ ಹಾಡಿನ ಕ್ರೇಜ್ ಕಡಿಮೆಯಾಗಿಲ್ಲ. ಚಿತ್ರದ ಕಥೆಯು ಅಭಿಮಾನಿಗಳನ್ನು ಅಷ್ಟೆ ಆಕರ್ಷಿಸಿದೆ. ಹಳೆಯ ಚಿತ್ರಗಳು ಮತ್ತೆ ಥಿಯೇಟರ್‌ಗೆ ಮರಳುತ್ತಿರುವ ಹಾದಿಯಲ್ಲೇ ವೀರ್ ಝೂರಾ ಕೂಡ ಮರುಬಿಡುಗಡೆಯಾಗಿದೆ.
ಇದನ್ನು ಓದಿ: ರಣಬೀರ್ ಆ ಕ್ಷಣವನ್ನು ಮಿಸ್ ಮಾಡಿಕೊಂಡ; ಆಲಿಯಾ ಭಟ್ ಹೇಳಿದ್ದೇನು ಗೊತ್ತಾ?
ಈ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ವಿಶ್ವದಾದ್ಯಂತ ರೀರಿಲೀಸ್ ಆದ ಬಳಿಕ ಗಲ್ಲಪೆಟ್ಟಿಗೆ ಕಲೆಕ್ಷನ್ನಲ್ಲಿ ಇತಿಹಾಸ ಸೃಷಿಸಿದೆ. ರೀರಿಲೀಸ್ನಲ್ಲಿ 100 ಕೋಟಿ ರೂಪಾಯಿ ಗಡಿ ದಾಟಿರುವುದಾಗಿ ತಿಳಿಸಲಾಗಿದೆ.
'VEER ZAARA' CROSSES ₹ 💯 CR *WORLDWIDE GROSS* ON RE-RELEASE… Released in very few cinemas [282] and with limited showings, the timeless classic #VeerZaara – originally released in 2004 – fares very well in its *re-release*.
— taran adarsh (@taran_adarsh) September 20, 2024
As it enters Week 2 [203 cinemas], #VeerZaara… pic.twitter.com/G19orck83O
ಟ್ರೇಡ್ ಆ್ಯನಲಿಸ್ಟ್ ತರಣ್ ಆದರ್ಶ್ ಪ್ರಕಾರ ವೀರ್ ಝೂರಾ ಶುಕ್ರವಾರ (ಸೆಪ್ಟೆಂಬರ್ 13) 20 ಲಕ್ಷ ರೂ., ಶನಿವಾರ 32 ಲಕ್ಷ ರೂ., ಭಾನುವಾರ 38 ಲಕ್ಷ ರೂ., ಸೋಮವಾರ 20 ಲಕ್ಷ ರೂ., ಮಂಗಳವಾರ 18 ಲಕ್ಷ ರೂ., ಬುಧವಾರ 15 ಲಕ್ಷ ರೂ., ಗುರುವಾರ 14 ಲಕ್ಷ ರೂ. ಗಳಿಸಿದೆ. ಸಿನಿಮಾ ರೀರಿಲೀಸ್ ಬಳಿಕ ಒಟ್ಟು ದೇಶೀಯ ಬಾಕ್ಸ್ ಆಫೀಸ್ 1.57 ಕೋಟಿ ರೂ. ಕಲೆಕ್ಷನ್ಗೆ ಕಾರಣವಾಗಿದೆ. ವಿದೇಶದಲ್ಲಿ 0.23 ಕೋಟಿ ರೂ.ಗೆ ಗಳಿಸಿದೆ.
ಆರಂಭಿಕ ಬಿಡುಗಡೆ ಅಂದರೆ 2004ರಲ್ಲಿ ವೀರ್ ಝೂರಾ ದೇಶೀಯ ಮತ್ತು ಸಾಗರೋತ್ತರ ಗಲ್ಲಾಪೆಟ್ಟಿಗೆಯಲ್ಲಿ ಕ್ರಮವಾಗಿ 60 ಕೋಟಿ ರೂ., 37 ಕೋಟಿ ರೂ. ಸಂಗ್ರಹಿಸಿದೆ. 2005 ರಿಂದ 2023ರವರೆಗಿನ ವರ್ಷಗಳಲ್ಲಿ 2.50 ಕೋಟಿ ರೂ. ಗಳಿಸಿತು. ಮರು ಬಿಡುಗಡೆಯ ಎರಡೂ ಕಲೆಕ್ಷನ್‌ಗಳನ್ನು ಸೇರಿಸಿದ ನಂತರ ಸಿನಿಮಾವು ಈಗ 102.60 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿದೆ.
ವೀರ್ ಝಾರಾ ಸಿನಿಮಾವುದಲ್ಲಿ ಭಾರತೀಯ ವಾಯುಪಡೆಯ ಪೈಲಟ್ ವೀರ್ ಪಾತ್ರದಲ್ಲಿ ಶಾರೂಖ್ ಖಾನ್ ಮತ್ತು ಪಾಕಿಸ್ತಾನದ ಮಹಿಳೆ ಜಾರಾ ಪಾತ್ರದಲ್ಲಿ ಪ್ರೀತಿ ಜಿಂಟಾ ನಟಿಸಿದ್ದಾರೆ. ಭಾರತಕ್ಕೆ ಭೇಟಿ ನೀಡಿದಾಗ ವೀರ್ ಜಾರಾಳನ್ನು ರಕ್ಷಿಸಿದಾಗ ಅವರ ಪ್ರೇಮಕಥೆಯು ತೆರೆದುಕೊಳ್ಳುತ್ತದೆ. ಎರಡು ರಾಷ್ಟ್ರಗಳ ನಡುವಿನದ ಪ್ರೇಮಕಥೆ ಮತ್ತು ಆ್ಯಕ್ಷನ್ ಕಥಾಹಂದರವಾಗಿದೆ. (ಏಜೆನ್ಸೀಸ್)
ಈ ಒಂದು ಕಾರಣಕ್ಕೆ ಮದುವೆಗು ಮುನ್ನ ಯಾವುದೇ ಸಂಬಂಧದಲ್ಲಿ ತೊಡಗಿಸಿಕೊಳ್ಳಲಿಲ್ಲ; ಖ್ಯಾತ ನಟನ ಹೇಳಿಕೆ ವೈರಲ್