ಒಂದು ಕೋಣಕ್ಕಾಗಿ ಮೂರು ಗ್ರಾಮಗಳ ಪಟ್ಟು: ದೇವರ ತೀರ್ಪನ್ನು ಒಪ್ಪದ ಗ್ರಾಮಸ್ಥರು ಮಾಡಿದ್ದೇನು?

Bull
Published on

ದಾವಣಗೆರೆ: ಒಂದೇ ಒಂದು ಕೋಣಕ್ಕಾಗಿ ಮೂರು ಗ್ರಾಮಗಳು ಪಟ್ಟುಹಿಡಿದು ದೇವರ ತೀರ್ಪಿಗೂ ಅಸ್ತು ಎನ್ನದೇ ಕೊನೆಗೂ ಹೇಗೋ ಸಮಸ್ಯೆ ಬಗೆಹರಿಸಿಕೊಂಡ ವಿಚಿತ್ರ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ನಡೆದಿದೆ.

ಭದ್ರವತಿಯ ಜಂಬರಗಟ್ಟೆ, ಹೊನ್ನಾಳಿಯ ಮಡಿಕೆ ಚೀಲೂರು ಹಾಗೂ ಮರಿಗೊಂಡನಹಳ್ಳಿಯ ಗ್ರಾಮಸ್ಥರು ಕೋಣ ನಮ್ಮದೆಂದು ಪಟ್ಟು ಹಿಡಿದಿದ್ದರು. ಅದರ ಸಾಬೀತಿಗೂ ದೇವರ ಮೊರೆ ಹೋಗಿದ್ದರು.

ಮೂರು ಗ್ರಾಮಸ್ಥರು ಕೋಣಕ್ಕಾಗಿ ಜಂಬರಗಟ್ಟೆ ಗ್ರಾಮದ ಆಂಜನೇಯ ದೇವಸ್ಥಾನದ ಅಪ್ಪಣೆ ಕೋರಿದ್ದರು. ಬಳಿಕ ದೇವರ ಅಪ್ಪಣೆಯಂತೆ ಕೋಣವನ್ನು ಬಂಜರಗಟ್ಟೆ ಗ್ರಾಮಸ್ಥರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದರು.

ಆದರೆ, ದೇವರ ತೀರ್ಪನ್ನು ಒಪ್ಪದೆ ಮರಿಗೊಂಡನಹಳ್ಳಿ ಗ್ರಾಮಸ್ಥರು ಪೊಲೀಸರನ್ನು ಕರೆತಂದರು. ಕೊನೆಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಕೋಣದ ಸಮಸ್ಯೆ ಬಗೆಹರಿದಿದೆ. ದೇವರು ಕೊಟ್ಟ ತೀರ್ಪಿನಂತೆಯೇ ಜಂಬರಗಟ್ಟೆ ಗ್ರಾಮಕ್ಕೆ ಕೋಣ ಒಲಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net