More

    ಬಟ್ಟೆ ಬಿಚ್ಚದೇ ಮುಟ್ಟಿದರೆ ಲೈಂಗಿಕ ದೌರ್ಜನ್ಯವಲ್ಲ ಎಂದಿದ್ದ ಹೈಕೋರ್ಟ್‌- ವಿವಾದದ ಬೆನ್ನಲ್ಲೇ ತಡೆ ನೀಡಿದ ಸುಪ್ರೀಂ

    ನವದೆಹಲಿ: ಕಳೆದ ವಾರ ಬಾಂಬೆ ಹೈಕೋರ್ಟ್‌ ನಾಗ್ಪುರ ಪೀಠ ನೀಡಿದ್ದ ತೀರ್ಪೊಂದು ಭಾರಿ ವಿವಾದವೆಬ್ಬಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ತೀರ್ಪಿನ ವಿರುದ್ಧ ದೊಡ್ಡ ಆಂದೋಲನವೇ ಶುರುವಾಗಿತ್ತು. ಹೈಕೋರ್ಟ್‌ ತೀರ್ಪಿನ ಕುರಿತು ಆಕ್ರೋಶ ವ್ಯಕ್ತವಾಗಿತ್ತು.

    ಅಷ್ಟಕ್ಕೂ ನಾಗ್ಪುರ ಪೀಠ ನೀಡಿದ್ದ ತೀರ್ಪು ಏನೆಂದರೆ, ಬಟ್ಟೆ ಬಿಚ್ಚದೇ ಮಹಿಳೆಯ ಅಂಗಾಂಗವನ್ನು ಪುರುಷನೊಬ್ಬ ಸ್ಪರ್ಶ ಮಾಡಿದರೆ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂಬುದು!

    12 ವರ್ಷದ ಬಾಲಕಿಯೊಬ್ಬ ಎದೆಯನ್ನು ಸ್ಪರ್ಶಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಸೆಷನ್ಸ್‌ ಕೋರ್ಟ್‌ ಪೋಕ್ಸೋ ಕಾಯ್ದೆ ಅಡಿ ನೀಡಿದ್ದ ಶಿಕ್ಷೆಯನ್ನು ರದ್ದು ಮಾಡುವ ಮೂಲಕ ಕೋರ್ಟ್‌ ಈ ರೀತಿ ತೀರ್ಪು ನೀಡಿತ್ತು. ಆರೋಪಿಯು ಅಪ್ರಾಪ್ತೆಯ ಬಟ್ಟೆಯನ್ನು ಬಿಚ್ಚಿ ಅಥವಾ ಬಟ್ಟೆಯೊಳಗೆ ಕೈ ತೂರಿಸುವುದನ್ನು ಹೊರತುಪಡಿಸಿ ಚರ್ಮ ಸಂಪರ್ಕವಿಲ್ಲದೆ ಸುಮ್ಮನೆ ಎದೆಯನ್ನು ಸ್ಪರ್ಶಿಸಿದರೆ, ಅದನ್ನು ಲೈಂಗಿಕ ಕಿರುಕುಳ ಎಂದಿದ್ದರು ನ್ಯಾಯಮೂರ್ತಿಗಳು.

    2016ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ಈ ತೀರ್ಪು ನೀಡಿತ್ತು. ಸತೀಶ್‌ ಎಂಬಾಂತ ಬಾಲಕಿಗೆ ಚಾಲಕೇಟ್‌ ಆಮಿಷ ಒಡ್ಡಿ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆಯ ಖಾಸಗಿ ಭಾಗಗಳನ್ನು ಮುಟ್ಟಿ ಹಿಂಸೆ ನೀಡಿದ್ದ.

    ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಸೆಷನ್ಸ್‌ ಕೋರ್ಟ್‌ ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ ವಿಧಿಸಿತ್ತು. ಅದರೆ ಹೈಕೋರ್ಟ್‌ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರು, ಆರೋಪಿ ಬಟ್ಟೆಯ ಮೇಲಿನಿಂದ ಆ ರೀತಿ ಸ್ಪರ್ಶಿಸಿರುವ ಕಾರಣ, ಇದು ಪೋಕ್ಸೋ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನಕ್ಕೆ ಬರುವುದಿಲ್ಲ. ಲೈಂಗಿಕ ದೌರ್ಜನ್ಯ ಆಗಬೇಕಿದ್ದರೆ ದೇಹಕ್ಕೆ ದೇಹದ (ಸ್ಕಿನ್‌ ಟು ಸ್ಕಿನ್‌) ಸ್ಪರ್ಶ ಆಗಬೇಕು ಎಂದಿತ್ತು.

    ಈ ತೀರ್ಪು ಪ್ರಕಟವಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಸುಪ್ರೀಂಕೋರ್ಟ್‌ ಹೈಕೋರ್ಟ್‌ನ ತೀರ್ಪಿಗೆ ಇಂದು ತಡೆ ನೀಡಿದೆ.

    ‘ಬಡಿಗೆ ಹಿಡಿದುಬನ್ನಿ, ಧ್ವಜವನ್ನೂ ತನ್ನಿ… ನಾನು ಹೇಳುತ್ತಿರುವುದೇನು ಅರ್ಥವಾಯ್ತಲ್ಲ… ಈಗ ಇಷ್ಟು ಸಾಕು…’

    ಕರೊನಾ ಬಂದಿದ್ದು ಶಿವನ ಕೂದಲಿನಿಂದ- ಸ್ವಂತ ಮಕ್ಕಳನ್ನು ಕೊಂದು ಪೊಲೀಸರೆದುರು ಕುಣಿದಾಡಿದರು

    ಕರೊನಾದಿಂದ ಪ್ರಧಾನಿ ಪಟ್ಟ ಹೋಯ್ತು: ಟೀಕೆಗೆ ಸಿಲುಕಿ ಹುದ್ದೆ ತ್ಯಜಿಸಿದ ನಾಯಕ ಕಾಂಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts