More

    ಕರೊನಾದಿಂದ ಪ್ರಧಾನಿ ಪಟ್ಟ ಹೋಯ್ತು: ಟೀಕೆಗೆ ಸಿಲುಕಿ ಹುದ್ದೆ ತ್ಯಜಿಸಿದ ನಾಯಕ ಕಾಂಟೆ

    ರೋಮ್: ವಿಶ್ವಾದ್ಯಂತ ಕರೊನಾ ಅಟ್ಟಹಾಸ ಮುಂದುವರೆದಿದೆ. ಕೋವಿಡ್‌-19 ಈ ಜಗತ್ತಿಗೆ ಕಾಲಿಟ್ಟು ವರ್ಷವಾದರೂ ಎಷ್ಟೋ ದೇಶಗಳು ಅದನ್ನು ನಿಯಂತ್ರಿಸಲಾಗದೇ ಸುಸ್ತಾಗಿಹೋಗಿವೆ. ಚಿಕ್ಕಪುಟ್ಟ ದೇಶಗಳ ಜನರೂ ಇದುವರೆಗೆ ಸಹಜ ಸ್ಥಿತಿಗೆ ಬಂದಿಲ್ಲ.
    ಅದೇ ರೀತಿ ಸಂಕಷ್ಟದಲ್ಲಿ ಸಿಲುಕಿರುವ ದೇಶವೆಂದರೆ ಇಟಲಿ. ಇದಾಗಲೇ ಇಟಲಿಯಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಕರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿಯ ಪ್ರಧಾನಿ ಗಿಸೆಪ್ಪೆ ಕಾಂಟೆ ಏನೆಲ್ಲಾ ಕ್ರಮ ತೆಗೆದುಕೊಳ್ಳುತ್ತಲೇ ಬಂದಿದ್ದರೂ ಪರಿಸ್ಥಿತಿ ಮಿತಿಮೀರಿ ಹೋಗಿದೆ.

    ಅವರು ಕರೊನಾ ನಿಯಂತ್ರಿಸುವಲ್ಲಿ ವಿಫಲರಾಗಿರುವ ಟೀಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ತಮ್ಮ ಹುದ್ದೆಯನ್ನು ತ್ಯಜಿಸಲು ನಿರ್ಧರಿಸಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ನಿಯಂತ್ರಿಸಲು ವಿಫಲವಾಗಿದ್ದಕ್ಕೆ ತೀವ್ರ ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

    ಅಧ್ಯಕ್ಷ ಸೆರ್ಗಿಯೋ ಮ್ಯಾಟೆರೆಲ್ಲ ಅವರನ್ನು ಭೇಟಿ ಮಾಡಿ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇಟಲಿಯ ನಿಯಮದ ಪ್ರಕಾರ, ಪ್ರಧಾನಿಯಾದವರು ರಾಜೀನಾಮೆ ನೀಡಿದ ನಂತರ ಅಧ್ಯಕ್ಷರು ಹೊಸ ಸರ್ಕಾರ ರಚನೆಗೆ ಆದೇಶ ನೀಡುತ್ತಾರೆ. ಅದು ವಿಫಲವಾದಲ್ಲಿ, ಮತ್ತೊಬ್ಬರಿಗೆ ಈ ಅವಕಾಶ ನೀಡಲಾಗುತ್ತದೆ. ಅದೂ ವಿಫಲವಾದರೆ ಹೊಸದಾಗಿ ಚುನಾವಣೆ ನಡೆಯುತ್ತದೆ.

    ಮೆನೋಪಾಸ್‌ ನಂತರ ಪತ್ನಿಗೆ ಲೈಂಗಿಕಾಸಕ್ತಿಯೇ ಇಲ್ಲ- ನನಗೆ ದಿಕ್ಕೇ ತೋಚದಾಗಿದೆ; ಇದಕ್ಕೆ ಪರಿಹಾರವಿಲ್ಲವೆ?

    ರೈತರ ಹೆಸರಲ್ಲಿ ಹಿಂಸೆಗಿಳಿದರು, ತಮ್ಮ ಧ್ವಜ ಹಾರಿಸಿದರು, ಹಲ್ಲೆ ಮಾಡಿದರು- ಏಳು ಮಂದಿ ವಿರುದ್ಧ ಎಫ್‌ಐಆರ್‌

    ಒಂದೆಡೆ ಮಾಜಿ ಗಂಡ, ಇನ್ನೊಂದೆಡೆ ಪ್ರೇಮಿ, ಮತ್ತೊಂದೆಡೆ ಕುಟುಂಬದವರು… ಯಾರನ್ನು ಆರಿಸಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts