More

    ದೇಶಕ್ಕೆ ದೇವರು ಕೊಟ್ಟ ವರ ಮೋದಿ

    ಜಮಖಂಡಿ: ದೇಶಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಸಿಕ್ಕಿದ್ದು ಅದು ದೇವರು ಕೊಟ್ಟ ವರವಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

    ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ಪ್ರಗತಿಯನ್ನು 12ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ತಂದಿದ್ದಾರೆ. ಮುಂದೆ 3ನೇ ಸ್ಥಾನಕ್ಕೆ ತರುವವರಿದ್ದಾರೆ. ದೇಶದ ಜನತೆ ಮೋದಿ ಅವರನ್ನು ಮತ್ತೆ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡುತ್ತಾರೆ ಎಂದರು.

    ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾಗುತ್ತಿವೆ. ಇದರಿಂದ ಪ್ರತಿ ಜಿಲ್ಲೆ ತಾಲೂಕು ಹೋಬಳಿ ಮಟ್ಟದಲ್ಲೂ ಉದ್ಯಮಿಗಳು ಸ್ಥಾಪನೆಯಾಗುವುದರಿಂದ ಉದ್ಯೋಗ ಸೃಷ್ಠಿ ಜತೆಗೆ ಆ ಪ್ರದೇಶ ಪ್ರಗತಿಯಾಗುತ್ತದೆ ಎಂದರು.

    ದೇಶದ ಪ್ರಗತಿ ಬಗ್ಗೆ ದೂರ ದೃಷ್ಠಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಇಡೀ ಪ್ರಪಂಚದಲ್ಲೇ ದೇಶ ತನ್ನದೇಯಾದ ಹಿರಿಮೆಗಳ ಮೂಲಕ ದೇಶಗಳ ಗಮನ ಸೆಳೆಯುತ್ತಿದೆ ಎಂದರು.

    ಸರ್ಕಾರದ ಸೌಲಭ್ಯಗಳು ದೇಶದ ಕಟ್ಟ ಕಡೆಯ ವ್ಯಕ್ತಿಗೆ ಲಾನುಭವಿಗೆ ನೇರವಾಗಿ ತಲುಪಿಸುವ ಮೂಲಕ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ. ದೇಶ ರಕ್ಷಣೆ, ಮಹಿಳೆಯರ ರಕ್ಷಣೆ, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಸೇರಿ ಹಲವಾರು ಯೋಜನೆಗಳನ್ನು ಮಾಡಿದ್ದಾರೆ. ದೇಶದಲ್ಲಿ ಅಂದಾಜು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ರೈಲ್ವೆ ನಿಲ್ದಾಣಗಳನ್ನು ಪುನರ್ ನಿರ್ಮಿಸಿದ್ದಾರೆ. ವಂದೇ ಭಾರತ ರೈಲ್ವೆ, ರೈತರಿಗೆ ನೆರವು ಸೇರಿ ಅನೇಕ ಯೊಜನೆಗಳನ್ನು ನೀಡಿದ್ದಾರೆ. ಬಾಗಲಕೋಟೆ ಕ್ಷೇತ್ರದ ನಮ್ಮ ಅಭ್ಯರ್ಥಿ ಸಂಸದ ಪಿ.ಸಿ. ಗದ್ದಿಗೌಡರ ಅವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಜಮಖಂಡಿ ಕ್ಷೇತ್ರದಲ್ಲಿ ಅವರಿಗೆ 30 ಸಾವಿರ ಮತಗಳ ಲೀಡ್ ನೀಡುವಲ್ಲಿ ಪ್ರಭುದ್ಧ ಮತದಾರರು ಕಾತುರರಾಗಿದ್ದಾರೆ ಎಂದರು.

    ಮುಸ್ಲಿಂ ಸಮಾಜದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಬಹಳಷ್ಟು ಗೌರವ ಇದೆ. ತಾತ್ಸಾರ ಇಲ್ಲ, ಸಮಾನವಾಗಿ ಇರಬೇಕು ಎಂದು ಹಲವಾರು ಕಾರ್ಯಗಳನ್ನು ಹಾಕಿಕೊಂಡಿದ್ದಾರೆ ಎಂದರು.

    ಸಂಸದ ಪಿ.ಸಿ. ಗದ್ದಿಗೌಡರ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಪುಸ್ತಕ ರೂಪದಲ್ಲಿ ಕ್ಷೇತ್ರದ ಜನತೆಗೆ ನೀಡುತ್ತಿದ್ದೇವೆ. ಗದ್ದಿಗೌಡರ ಅವರು ಪ್ರಚಾರಪ್ರಿಯರಲ್ಲ ಕೆಲಸ ಪ್ರಿಯರು, ಅವರು ಕೆಲಸ ಮಾಡಿದ್ದನ್ನು ಹೇಳಿಕೊಂಡಿಲ್ಲ ಎಂದರು.
    ಆಧುನಿಕ ಭಾರತ ಕಟ್ಟುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಗಲಿರುಳು ಶ್ರಮಿಸುತಿದ್ದಾರೆ. ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಭಾಜಪ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯ ಮಾಡಬೇಕು ಎಂದರು. ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts