More

  ಸ್ಕೂಟರ್‌ಗೆ ಕಾರು ಡಿಕ್ಕಿ: ಮಹಿಳೆ ಸಾವು

  ಮೈಸೂರು: ನಗರದ ಕೆಆರ್‌ಎಸ್ ರಸ್ತೆಯ ಇಎಸ್‌ಐ ಆಸ್ಪತ್ರೆ ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದಾರೆ.


  ಹೆಬ್ಬಾಳಿನ ಭೈರವೇಶ್ವರನಗರದ ನಿವಾಸಿ ಸತೀಶ್ ಅವರ ಪತ್ನಿ ರಾಧಾ(34)ಮೃತರು. ಶುಕ್ರವಾರ ಬೆಳಗ್ಗೆ ರಾಧಾ ಅವರು ತಮ್ಮ ಸ್ಕೂಟರ್‌ನಲ್ಲಿ ಒಂಟಿಕೊಪ್ಪಲ್ ಕಡೆಯಿಂದ ಬೃಂದಾವನದ ಕಡೆ ಹೋಗುತ್ತಿದ್ದರು.

  ಹಿಂದಿನಿಂದ ಬಂದ ಕಾರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ತೀವ್ರವಾಗಿ ಗಾಯಗೊಂಡಿದ್ದ ರಾಧಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

  ರಸ್ತೆ ಅಪಘಾತದ ಕುರಿತು ಮೃತರ ಪತಿ ನೀಡಿದ ದೂರಿನ ಮೇರೆಗೆ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts