More

    ವಿಮಾನಗೋಪುರ ಕಳಸ ಪ್ರತಿಷ್ಠಾಪನೆ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ನಗ ದೇವತೆ ಶ್ರೀ ಮರಿಯಕ್ಕ ದೇವಾಲಯದ ವಿಮಾನಗೋಪುರಗಳ ಕಳಸ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು.
    ನಗರದ ಅಡೇಪೇಡೆಯಲ್ಲಿನ ಶ್ರೀ ಮರಿಯಕ್ಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವರಿಗೆ ವಿಶೇಷ ಅಲಂಕಾರ, ಪೂಜೆ ಸೇರಿ ಕಳಸ ಪ್ರತಿಸ್ಥಾಪನೆ, ನಗರದ ಮುಖ್ಯರಸ್ತೆಯಲ್ಲಿ ಕಳಸವನ್ನು ಮಂಗಳವಾದ್ಯಯೊಂದಿಗೆ ಮೆರವಣಿಗೆ ನಡೆಸಿ, ಸೋಮಶೇಖರ್ ದೀಕ್ಷಿತ್ ನೇತೃತ್ವದಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
    ಗಂಗಾಪೂಜೆ, ಗಣಪತಿ ಪೂಜೆ, ಪಂಚಗವ್ಯ ವಾಸ್ತುಪೂಜೆ, ವಾಸ್ತು ಹೋಮ, ಅಂಕುರಾರ್ಪಣ, ರಕ್ಷಾಬಂಧನ, ಮಂಗಳಾರತಿ, ವೇದ ಪಾರಾಯಣ, ಕಲಶ ಸ್ಥಾಪನೆ, ಅಗ್ನಿ ಪ್ರತಿಷ್ಠೆ, ಗಣಪತಿ, ನವಗ್ರಹ, ಮೃತ್ಯುಂಜಯ ಹೋಮಾದಿಗಳು, ಪೂರ್ಣಾಹುತಿ, ದೀವಿಕಾರ್ಚನೆ, ಶ್ರೀ ದುರ್ಗಾಹೋಮ, ಶ್ರೀಸೂಕ್ತ ಹೋಮ, ಪೂರ್ಣಾವತಿ ಬಳಿಕ ನಗರದ ಮುಖ್ಯರಸ್ತೆಯಲ್ಲಿ ಕಲಶವನ್ನು ಮೆರವಣಿಗೆ ಮಾಡಿದ್ದ ಬಳಿಕ ಕಶಸ ಸ್ಥಾಪನೆ ಮಾಡಲಾಯಿತು.
    ಸೋಮಶೇಖರ್ ದೀಕ್ಷಿತ್ ಮಾತನಾಡಿ, ಗರ್ಭಗುಡಿಯಲ್ಲಿರುವ ದೇವರು ಮತ್ತು ದೇವಾಲಯದ ಗೋಪುರದಲ್ಲಿ ಕಳಸದಿಂದ ಪ್ರವಹಿಸುವ ಚೈತನ್ಯದಿಂದ ಭಕ್ತರಿಗೆ ಅನೂಕೂಲವಾಗಲಿದೆ ಎಂದರು.
    ನಗರಸಭೆ ಸದಸ್ಯರಾದ ಎನ್.ಗಣೇಶ್, ಎನ್.ಎಸ್.ಗಂಗಾಧರ್‌ರಾವ್, ಶಾರದಾ ಉಮೇಶ್, ದಾಕ್ಷಾಯಣಿ ರವಿಕುಮಾರ್, ಪೂರ್ಣಿಮಾ ಸುಗ್ಗರಾಜು, ದೇವಾಲಯ ದತ್ತಿ ಸಮಿತಿಯ ರವಿಕುಮಾರ್, ಸತೀಶ್, ಚಿಕ್ಕಹನುಮಂತಯ್ಯ, ಬೈಲಪ್ಪ, ಮುಖಂಡ ಯಜಮಾನ್ ಉಮೇಶ್, ಕಪಾಲಿ ವೆಂಕಟೇಶ್ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts