More

    ‘ಬಡಿಗೆ ಹಿಡಿದುಬನ್ನಿ, ಧ್ವಜವನ್ನೂ ತನ್ನಿ… ನಾನು ಹೇಳುತ್ತಿರುವುದೇನು ಅರ್ಥವಾಯ್ತಲ್ಲ… ಈಗ ಇಷ್ಟು ಸಾಕು…’

    ನವದೆಹಲಿ: ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ಹೇಳಿ ದೆಹಲಿಯಲ್ಲಿ ನಿನ್ನೆ ಗಣರಾಜ್ಯೋತ್ಸವದಂದು ರೈತರ ಹೆಸರಿನಲ್ಲಿ ನಡೆದ ಹಿಂಸಾಚಾರದ ಒಂದೊಂದೇ ಭಯಾನಕ ಅಂಶಗಳು ಹೊರಕ್ಕೆ ಬರುತ್ತಿವೆ. ಪ್ರತಿಭಟನೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಗಲಾಟೆ ನಿಜವಾಗಿಯೂ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯ ಕುರಿತಾಗಿ ಇದೆಯೋ ಅಥವಾ ಇನ್ನಾವುದೋ ಶಕ್ತಿ ಇದರ ಹಿಂದೆ ಅಡಗಿದೆಯೋ ಎಂಬ ಸಂದೇಹ ವ್ಯಕ್ತವಾಗುತ್ತಿರುವಾಗಿ ಇದಾಗಲೇ ಹಲವಾರು ಮುಖಂಡರು ಮಾತನಾಡಿದ್ದಾರೆ.

    ಇನ್ನು ನಿನ್ನೆ ನಡೆದ ಹಿಂಸಾಚಾರ, ಶಸ್ತ್ರಸಜ್ಜಿತರಾಗಿ ಬಂದಿದ್ದ ಪಂಜಾಬ್‌ ರೈತರು, ಅಲ್ಲಿ ಬಾವುಟ ಹಾರಿಸುವ ಮೂಲಕ ಇನ್ನಷ್ಟು ಗೊಂದಲ ಸೃಷ್ಟಿ ಮಾಡಿರುವುದ ಇವೆಲ್ಲವುಗಳ ನಡುವೆಯೇ, ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಅವರು ಹೇಳಿರುವ ವಿವಾದಾತ್ಮಕ ವಿಡಿಯೋ ಒಂದು ಇದೀಗ ಭಾರಿ ಸದ್ದು ಮಾಡುತ್ತಿದೆ.

    ’ನಿಮ್ಮ ಜಮೀನು ಉಳಿಸಿಕೊಳ್ಳಲು ಸಿದ್ಧರಾಗಿರಿ. ಕೋಲುಗಳನ್ನು ಹಿಡಿದು ಬನ್ನಿ, ಅದರ ಜತೆ ಧ್ವಜವನ್ನೂ ತನ್ನಿ. ಈಗ ಇಷ್ಟು ಸಾಕು… ನಾನು ಏನು ಹೇಳುತ್ತಿದ್ದೇನೆ ಎಂದು ನಿಮಗೆಲ್ಲಾ ಅರ್ಥವಾಗಿದೆ ತಾನೆ? ಸಾಕು ಬಿಡಿ… ಎಂದು ಹೇಳಿರುವ ವಿಡಿಯೋ ಇದಾಗಿದೆ. ಇದು ಯಾವ ಸಂದರ್ಭದಲ್ಲಿ ನೀಡಿರುವ ಹೇಳಿಕೆ ಎಂದು ಸ್ಪಷ್ಟವಾಗಿಲ್ಲ. ಆದರೆ ನಿನ್ನೆ ಗಲಾಟೆ ಸಂದರ್ಭದಲ್ಲಿ ನಡೆದಿರುವ ಘಟನೆಗಳಿಗೆ ತಾಳೆ ಹಾಕಿ ನೋಡಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗುತ್ತಿದೆ.

    ಆದರೆ ಈ ವಿಡಿಯೋದಲ್ಲಿ ತಾವು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ರಾಕೇಶ್‌ ಹೇಳಿದ್ದಾರೆ. ನಿಮ್ಮ ಸ್ವಂತ ಕೋಲುಗಳನ್ನು ತೆಗೆದುಕೊಂಡು ಬನ್ನಿ ಅಂತ ನಾನು ಹೇಳಿದ್ದೆ. ಆದರೆ ನಿನ್ನೆ ನಡೆದಿರುವ ಹಿಂಸಾಚಾರ ರೈತರು ಮಾಡಿದ್ದಲ್ಲ. ಅಲ್ಲಿ ಹಾರಿಸಿದ್ದು ನಮ್ಮ ಬಾವುಟ ಅಲ್ಲ. ನಮ್ಮವರು ಎಲ್ಲರೂ ಕೋಲು ಮತ್ತು ನಮ್ಮ ರಾಷ್ಟ್ರಧ್ವಜ ತಂದಿದ್ದರು. ಘರ್ಷಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 22 ಎಫ್‌ಐಆರ್ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ ಅನ್ನು ಬ್ಯಾರಿಕೇಡ್‌ಗೆ ನುಗ್ಗಿಸಲು ಬಂದಿದ್ದ ಯುವ ರೈತನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಇಲ್ಲಿದೆ ನೋಡಿ ಸಂಪೂರ್ಣ ವಿಡಿಯೋ: ಕೃಪೆ ಎಎನ್‌ಐ

    ರೈತರ ಹೆಸರಲ್ಲಿ ಹಿಂಸೆಗಿಳಿದರು, ತಮ್ಮ ಧ್ವಜ ಹಾರಿಸಿದರು, ಹಲ್ಲೆ ಮಾಡಿದರು- ಏಳು ಮಂದಿ ವಿರುದ್ಧ ಎಫ್‌ಐಆರ್‌

    ಅತ್ತ ಗಣರಾಜ್ಯೋತ್ಸವ ಪರೇಡ್‌- ಇತ್ತ ಒಪ್ಪಂದ ಮೀರಿ ಬ್ಯಾರಿಕೇಡ್‌ ಮುರಿಯುತ್ತಿರುವ ರೈತರು

    ಕರೊನಾ ಬಂದಿದ್ದು ಶಿವನ ಕೂದಲಿನಿಂದ- ಸ್ವಂತ ಮಕ್ಕಳನ್ನು ಕೊಂದು ಪೊಲೀಸರೆದುರು ಕುಣಿದಾಡಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts