More

    ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಿ

    ವಿಜಯಪುರ: ಅವಶ್ಯವಿಲ್ಲದ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ನೀಡುವುದರ ಬದಲಾಗಿ ವಾಸ್ತವಿಕವಾಗಿ ರೈತರಿಗೆ ಅತ್ಯಗತ್ಯವಾಗಿರುವ ಅವಶ್ಯಕತೆಗಳನ್ನು ಅಭ್ಯಸಿಸಿ ಕಾರ್ಯಕ್ರಮಗಳನ್ನು ರೂಪಿಸಿದರೆ ಸಹಾಯವಾಗುತ್ತದೆ ಎಂದು ಶ್ರೀ ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ ಹೇಳಿದರು.
    ತಾಲೂಕಿನ ಕಗ್ಗೋಡದ ರಾಮನಗೌಡ ಬಾ. ಪಾಟೀಲ ಗೋರಕ್ಷಾ ಕೇಂದ್ರದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಕಿಸಾನ್‌ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
    ರೈತರು ಸರ್ಕಾರದ ಯೋಜನೆಗಳನ್ನು ತಾವು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಆತ್ಮಾವಲೋಕ ಮಾಡಿಕೊಳ್ಳಬೇಕಾಗಿದೆ. ವ್ಯವಸಾಯವೇ ಅತ್ಯಂತ ಶ್ರೇಷ್ಠವಾದ ಉದ್ಯೋಗವಾಗಿದ್ದು, ಇಡೀ ಪ್ರಪಂಚವನ್ನೇ ಸಾಕಿ ಸಲಹುವ ಸಾಮರ್ಥ್ಯ ಹೊಂದಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
    ಶಾಸಕ ದೇವಾನಂದ ಚವಾಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತನೇ ನಿಜವಾದ ಬುದ್ಧಿ ಜೀವಿ ಹಾಗೂ ನಿಜವಾದ ಶ್ರೀಮಂತ. ರೈತರಿಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಿದಲ್ಲಿ, ರೈತನೇ ಸರ್ಕಾರಕ್ಕೆ ಸಾಲ ನೀಡುವಷ್ಟು ಸಾಮರ್ಥ್ಯ ಹೊಂದಿದ್ದಾನೆ. ಆದರೆ ನಾವೆಲ್ಲರೂ ರೈತನಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ವಿಲರಾಗಿದ್ದೇವೆ ಎಂದು ತಿಳಿಸಿದರು.
    ಆತ್ಮ ಯೋಜನೆಯಡಿ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಿದ್ದಪ್ಪ ಭೂಸಗೊಂಡ, ಬಸಗೊಂಡ ಶಿರಮಗೊಂಡ, ಶಿವಸಿದ್ದ ಅವಜಿ ಹಾಗೂ ಸಂಗಪ್ಪ ಮೂಡಗಿ ಅವರಿಗೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಜಿಪಂ ಕೃಷಿ ಹಾಗೂ ಕೈಗಾರಿಕೆಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಪಾಟೀಲ, ಕೃಷಿ ಇಲಾಖೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ. ಕಲಘಟಗಿ, ಕೃಷಿ ಇಲಾಖೆ ಉಪ ನಿರ್ದೇಶಕ ಪ್ರಕಾಶ ಚವಾಣ್, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಅರಕೇರಿ, ಆತ್ಮ ಯೋಜನೆ ಉಪ ನಿರ್ದೇಶಕ ಡಾ. ಎಂ.ಬಿ. ಪಟ್ಟಣಶೆಟ್ಟಿ, ಡಾ. ಎಸ್.ಎಂ. ವಸದ, ಡಾ. ಬಿ.ಟಿ. ನಾಡಗೌಡ, ಡಾ. ಎಚ್.ಎಸ್. ಪ್ರಕಾಶ, ಡಾ. ಸಿದ್ದಣ್ಣ ಠೋಕೆ, ಡಾ. ಎ.ಎಂ. ನದಾಫ್, ಬಸಯ್ಯ ಹಿರೇಮಠ, ಸದಾನಂದ ದೇಸಾಯಿ, ಶಶಿಧರ ಹಕ್ಕಾಪಕ್ಕಿ, ಸಿದ್ರಾಮಪ್ಪ ಉಪ್ಪಿನ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts