ನವದೆಹಲಿ: ಕ್ಲಬ್ ಬಳಿ ಬೌನ್ಸ್ರ್ಗಳನ್ನು ಮಂಡಿಯೂರಿ ಕೂರುವಂತೆ ಮಾಡಿ ಫೈರಿಂಗ್ ಮಾಡಿರುವ ಘಟನೆ ರಾಷ್ಟ್ರರಾಜಧಾನಿಯ ಸೀಮಾಪುರಿಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದನ್ನು ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಹೃದಯಕ್ಕೆ ಇರಿದ ಹಂತಕರು; ಘಟನೆ ಬಗ್ಗೆ ಪೊಲೀಸರು ಹೇಳಿದಿಷ್ಟು..
ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ವರು ದುಷ್ಕರ್ಮಿಗಳು ಕ್ಲಬ್‌ಗೆ ಆಗಮಿಸಿದ್ದಾರೆ. ಅದರಲ್ಲಿ ಮೂವರು ಕ್ಲಬ್ ಒಳಗೆ ನುಗ್ಗದರೆ, ಮತ್ತೊಬ್ಬ ಗನ್ ಹಿಡಿದು ಬೌನ್ಸರ್‌ಗಳನ್ನು ಬೆದರಿಸುತ್ತಾ ಮಂಡಿಯೂರಿ ಕೂರುವಂತೆ ಒತ್ತಾಯಿಸಿರುವುದನ್ನು ಕಾಣಬಹುದಾಗಿದೆ.ಕೆಲವು ನಿಮಿಷಗಳ ನಂತರ ಅದರಲ್ಲಿ ಇಬ್ಬರು ಫೈರಿಂಗ್ ಮಾಡಿ ಬಳಿಕ ಸ್ಥಳದಿಂದ ಹೊರಟಿದ್ದಾರೆ. ಮಹಿಳಾ ಬೌನ್ಸರ್ ಅನ್ನು ಒತ್ತೆಯಾಳಾಗಿ ಇಟ್ಟುಕೊಂಡು ಆಕೆಯ ತಲೆಗೆ ಪಿಸ್ತೂಲ್ ಹಿಡಿದು ಎಲ್ಲಾ ಬೌನ್ಸರ್‌ಗಳನ್ನು ತಮ್ಮ ಕಾಲಿನ ಮೇಲೆ ಕುಳಿತುಕೊಳ್ಳುವಂತೆ ಮಾಡಿ ನಂತರ ಕ್ಲಬ್‌ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
राजधानी दिल्ली में गुंडागर्दी का ये Video देखिए –
— Sachin Gupta (@SachinGuptaUP) September 8, 2024
सीमापुरी में एक क्लब पर 4 बदमाशों ने फायरिंग की। महिला समेत 3 बाउंसरों को घुटने के बल बैठाया, वरना गोली से भेजा उड़ाने की धमकी दी। फायरिंग करके आरोपी चले गए। pic.twitter.com/y8ayfEBl7w
ದುಷ್ಕರ್ಮಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತ ಆರೋಪಿ ಲೋಣಿ ನಿವಾಸಿ. ದುಷ್ಕರ್ಮಿಗಳು ಕ್ಲಬ್‌ಗೆ ಉಚಿತವಾಗಿ ಪ್ರವೇಶ ನೀಡುವಂತೆ ಹಾಗೂ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಹಣ ನೀಡಲು ಕ್ಲಬ್ನವರು ನಿರಾಕರಿಸಿದ ಬಳಿಕ ಮತ್ತು ಉಚಿತ ಪ್ರವೇಶ ಸಿಗದಿರುವುದೇ ದಾಳಿಯ ಹಿಂದಿನ ಉದ್ದೇಶ ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ.
ದಾಳಿಕೋರರಲ್ಲಿ ಇಬ್ಬರನ್ನು ತನಿಷ್ ಅಲಿಯಾಸ್ ಪೆಹೆಲ್ವಾನ್ ಮತ್ತು ಶಾರುಖ್ ಎಂದು ಗುರುತಿಸಲಾಗಿದೆ. ಮತ್ತೊಂದೆಡೆ ಬೌನ್ಸರ್‌ಗಳ ಪೈಕಿ ಇಬ್ಬರನ್ನು ಉಮರ್ ಮತ್ತು ಅಮಿಲ್ ಎಂದು ಗುರುತಿಸಲಾಗಿದೆ.ದೆಹಲಿ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್)
‘ಆಧಾರ್’ ಪಡೆಯಲು ಎನ್‌ಆರ್‌ಸಿ ಅರ್ಜಿ ಸಂಖ್ಯೆ ಸಲ್ಲಿಸಲು ಸೂಚನೆ; ಈ ತೀರ್ಮಾನಕ್ಕೆ ಸಿಎಂ ನೀಡಿದ ಕಾರಣ ಹೀಗಿದೆ..