ದಿಸ್ಪೂರ್: ರಾಜ್ಯದಲ್ಲಿ ಆಧಾರ್ ಕಾರ್ಡ್‌ಗಾಗಿ ಹೊಸ ಅರ್ಜಿದಾರರು ತಮ್ಮ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಅರ್ಜಿ ರಶೀದಿ ಸಂಖ್ಯೆಯನ್ನು (ಎಆರ್‌ಎನ್) ಸಲ್ಲಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ(ಸೆಪ್ಟೆಂಬರ್ 7) ತಿಳಿಸಿದರು.
ಇದನ್ನು ಓದಿ: ದೆಹಲಿ ಸಿಎಂ ಎಂದಿಗೂ ಪ್ರಧಾನಿ ಮೋದಿ ಮುಂದೆ ತಲೆ ಬಾಗುವುದಿಲ್ಲ; ಸುನೀತಾ ಕೇಜ್ರಿವಾಲ್
ಜನಸಂಖ್ಯೆಗಿಂತ ಆಧಾರ್ ಕಾರ್ಡ್‌ಗಾಗಿ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಶಂಕಿತ ನಾಗರಿಕರನ್ನು ಸೂಚಿಸುತ್ತದೆ. ಇಂಥಾ ಪರಿಸ್ಥಿತಿಯಲ್ಲಿ ಹೊಸ ಅರ್ಜಿದಾರರು ತಮ್ಮ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು (ARN) ಸಲ್ಲಿಸಬೇಕು ಎಂದು ನಿರ್ಧರಿಸಿದ್ದೇವೆ. ಈ ಕ್ರಮವು ಅಕ್ರಮ ವಿದೇಶಿಗರ ಆಗಮನವನ್ನು ತಡೆಯುತ್ತದೆ ಎಂದು ಹೇಳಿದರು.
ಆಧಾರ್ ಕಾರ್ಡ್‌ಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರವು ಇನ್ನು ಮುಂದೆ ಕಟ್ಟುನಿಟ್ಟಾಗಿ ಇರುತ್ತದೆ. ಅಸ್ಸಾಂನಲ್ಲಿ ಆಧಾರ್ ಪಡೆಯುವುದು ಸುಲಭವಲ್ಲ ಎಂದು ಹೇಳಿದ ಅವರು, ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ ಲಾಕ್ ಆಗಿರುವ 9.55 ಲಕ್ಷ ಜನರಿಗೆ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸುವುದು ಅನ್ವಯಿಸುವುದಿಲ್ಲ. ಅವರು ತಮ್ಮ ಕಾರ್ಡ್‌ಗಳನ್ನು ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಅನೇಕ ಬಾಂಗ್ಲಾದೇಶಿಗಳು ಸಿಕ್ಕಿಬಿದ್ದು ನೆರೆಯ ದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದರಿಂದ ಅಕ್ರಮ ವಿದೇಶಿಯರನ್ನು ಗುರುತಿಸುವ ಪ್ರಕ್ರಿಯೆಯನ್ನು ತಮ್ಮ ಸರ್ಕಾರ ವೇಗಗೊಳಿಸುತ್ತದೆ ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಜನಸಂಖ್ಯಾ ಬದಲಾವಣೆ ವಿಷಯವನ್ನು ಪ್ರಸ್ತಾಪಿಸಿದ್ದ ಅವರು ಆಗಸ್ಟ್ 28ರಂದು ಈ ವಿಷಯದ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಹಿಂದು ಬಹುಸಂಖ್ಯಾತ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೇಗೆ ಹೆಚ್ಚುತ್ತಿದೆ ಎಂಬುದರ ಕುರಿತು ಸಮಗ್ರ ಶ್ವೇತಪತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅಲ್ಲದೆ ಇತ್ತೀಚೆಗೆ ಮಿಯಾನ್ ಮುಸ್ಲಿಮರಿಗೆ ರಾಜ್ಯವನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ. ಕೆಳಗಿನ ಅಸ್ಸಾಂನ ಜನರು ಮೇಲಿನ ಅಸ್ಸಾಂಗೆ ಏಕೆ ಹೋಗುತ್ತಾರೆ ಎಂದು ಅವರು ಹೇಳಿದ್ದರು.(ಏಜೆನ್ಸೀಸ್)
ನಾನು ಅವರನ್ನು ಸರ್ ಎಂದೇ ಕರೆಯುವೆ; ಸಚಿನ್ ಅವರನ್ನು ಪ್ರಶಂಸಿದ ಪಾಕ್ ಮಾಜಿ ಆಟಗಾರ