ನಾನು ಅವರನ್ನು ಸರ್​ ಎಂದೇ ಕರೆಯುವೆ; ಸಚಿನ್​ ಅವರನ್ನು ಪ್ರಶಂಸಿದ ಪಾಕ್​ ಮಾಜಿ ಆಟಗಾರ

blank

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಯೀದ್​​​ ಅಜ್ಮಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆದಿರುವುದು ನನ್ನ ವೃತ್ತಿಜೀವನದ ಪ್ರಮುಖ ಮತ್ತು ಸಂತೋಷದ ಕ್ಷಣ ಎಂದು ಬಣ್ಣಿಸಿದ್ದಾರೆ. ಸಚಿನ್ ಒಬ್ಬ ಮಹಾನ್ ಕ್ರಿಕೆಟಿಗ. ವಿಶ್ವದ ಅತ್ಯಂತ ಪ್ರಾಮಾಣಿಕ ಮತ್ತು ಕರುಣಾಮಯಿ ವ್ಯಕ್ತಿ. ಅವರೊಬ್ಬ ದಂತಕಥೆ. ನಾನು ಅವರನ್ನು ಸರ್ ಎಂದು ಕರೆಯುತ್ತೇನೆ ಎಂದು ಪ್ರಶಂಸಿದ್ದಾರೆ.

ಇದನ್ನು ಓದಿ: ಅರ್ಜುನ್ ತೆಂಡೂಲ್ಕರ್ ಕಲ್ಲಿದ್ದಲು; ಸಚಿನ್​ ತೆಂಡೂಲ್ಕರ್​​ ಪುತ್ರನ ಬಗ್ಗೆ ಯುವಿ ತಂದೆ ಯೋಗರಾಜ್​ ಹೀಗೆಳಿದ್ದೇಕೆ?

ಸರ್​ ಎಂದು ಕರೆಸಿಕೊಳ್ಳಲು ಅವರು ಅರ್ಹರು. ಕ್ರಿಕೆಟ್‌ನಲ್ಲಿ ನೀವು ಮೈದಾನಕ್ಕೆ ಹೋದಾಗ ಸರ್ ಅಂತ ಏನೂ ಇರುವುದಿಲ್ಲ. ಆದರೆ ನಾನು ಅವನೊಂದಿಗೆ ಆಡಿದ್ದೇನೆ, ಅದು ನನಗೆ ಗೌರವದ ವಿಷಯವಾಗಿದೆ. ನಾನು ಅವರ ವಿಕೆಟ್​ ಪಡೆದಿರುವುದು ನನಗೆ ಸಂತೋಷದ ವಿಷಯವಾಗಿದೆ. ನಾನು ಅದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಮತ್ತು ಅವರೊಂದಿಗೆ ಆಡಿದಾಗಲೆಲ್ಲಾ ನಾನು ಗೌರವದಿಂದ ಆಡುತ್ತೇನೆ ಎಂದು ಹೇಳಿದರು.

ಶಾರ್ಜಾ ಮತ್ತು ಅಜ್ಮಾನ್‌ನಲ್ಲಿ ನಡೆಯಲಿರುವ ಗ್ಲೋಫ್ಯಾನ್ಸ್ ಹೈಸ್ಕೂಲ್ ಕ್ರಿಕೆಟ್ ಕಪ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಯೀದ್ ಅಜ್ಮಲ್, 2010ರಲ್ಲಿ ನಡೆದ ಲೀಗ್​ ಪಂದ್ಯದಲ್ಲಿ ಸಚಿನ್​ ಅವರು ನನಗೆ ದೂಸ್ರಾ ಬೌಲ್​ ಮಾಡಲು ಸಲಹೆ ನೀಡಿದರು. ಇದರಿಂದ ಇಂಗ್ಲೆಂಡ್‌ನ ದಂತಕಥೆ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಔಟ್ ಆಗಿದ್ದರು. ಆ ಬಳಿಕ 4 ಓವರ್‌ಗಳಲ್ಲಿ 4 ವಿಕೆಟ್‌ ಉರುಳಿಸಿದಾಗ ಸಚಿನ್‌, ಈಗ 6 ವಿಕೆಟ್‌ ಮಾತ್ರ ಬಾಕಿ ಉಳಿದಿದೆ, ಇಷ್ಟು ಬೇಗ ಮುಗಿಸಬೇಡಿ ಎಂದು ತಮಾಷೆಯಾಗಿ ಹೇಳಿದ್ದರು ಎಂದು ಆ ಸಮಯವನ್ನು ನೆನಪಿಸಿಕೊಂಡರು. ಸಚಿನ್​ ಯಾವಾಗಲೂ ನಮ್ಮನ್ನು ಗೌರವಿಸುತ್ತಾರೆ ಮತ್ತು ತುಂಬಾ ಒಳ್ಳೆಯ ವ್ಯಕ್ತಿ ಎಂದು ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34,357 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 100 ಶತಕಗಳು ಮತ್ತು 164 ಅರ್ಧ ಶತಕಗಳಿವೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಾಧಿಸಿದ ಮೊದಲ ಆಟಗಾರ ಮತ್ತು 200 ಟೆಸ್ಟ್‌ಗಳನ್ನು ಆಡಿದ ಏಕೈಕ ಕ್ರಿಕೆಟಿಗ. ಅವರು 2011ರಲ್ಲಿ ಭಾರತ ವಿಶ್ವಕಪ್ ವಿಜೇತ ತಂಡದ ಭಾಗವಾಗಿ ವಿಶ್ವಕಪ್ ಗೆಲ್ಲುವ ತಮ್ಮ ಕನಸನ್ನು ನನಸಾಗಿಸಿದರು.(ಏಜೆನ್ಸೀಸ್​​)

ಕಾರ್ಗಿಲ್ ಯುದ್ಧದಲ್ಲಿನ ತನ್ನ ಪಾತ್ರವನ್ನು ಮೊದಲ ಬಾರಿಗೆ ಒಪ್ಪಿದ ಪಾಕ್​​​; ಸೇನಾ ಮುಖ್ಯಸ್ಥ ಹೇಳಿದಿಷ್ಟು..

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…