More

    ಸಿನಿಮಾದಲ್ಲಿ ಇದೆಲ್ಲ ಕಾಮನ್ ಪ್ರತಿಯೊಬ್ಬರು ಮಾಡ್ತಾರೆ! ನಟಿ ಅಂಜಲಿ ಓಪನ್​ ಟಾಕ್​

    ಚೆನ್ನೈ: ಹೊಂಗನಸು’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸಿ, ಅದಾದ ಬಳಿಕ ಪುನೀತ್ ರಾಜಕುಮಾರ್ ಜತೆಗೆ ‘ರಣವಿಕ್ರಮ’ ಹಾಗೂ ಶಿವರಾಜ್​ಕುಮಾರ್​ ಅಭಿನಯದ ಬೈರಾಗಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ಬಹುಭಾಷಾ ನಟಿ ಅಂಜಲಿ ಸದ್ಯ ತಮಿಳು, ತೆಲುಗಿನಲ್ಲಿ ಬಿಜಿಯಾಗಿದ್ದಾರೆ.

    ಇತ್ತೀಚೆಗೆ ಸ್ಟಾರ್​ ನಟಿಯರು ಕೂಡ ಐಟಂ ಸಾಂಗ್​ಗೆ ಸೊಂಟ ಬಳುಕಿಸುವುದು ಸಾಮಾನ್ಯವಾಗಿದೆ. ತಮನ್ನಾ, ಶ್ರುತಿ ಹಾಸನ್​, ಕಾಜಲ್​, ಪೂಜಾ ಹೆಗ್ಡೆ, ರಾಗಿಣಿ ಸಾಕಷ್ಟು ನಟಿಯರು ಈ ಟ್ರೆಂಡ್​ ಫಾಲೋ ಮಾಡುತ್ತಿದ್ದಾರೆ. ಇದಕ್ಕೆ ಅಂಜಲಿ ಕೂಡ ಹೊರತಾಗಿಲ್ಲ. ಸಿಂಗಂ 2, ಸರೈನೋಡು ಹಾಗೂ ಮಾಚರ್ಲ ನಿಯೋಜಕವರ್ಗಂ ಸೇರಿದಂತೆ ಕೆಲವು ಸಿನಿಮಾಗಳ ಐಟಂ ಸಾಂಗ್​ಗೆ ಮಾದಕವಾಗಿ ಸೊಂಟ ಬಳುಕಿಸಿದ್ದಾರೆ.

    ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಅಂಜಲಿ ಅವರನ್ನು ಪ್ರಶ್ನೆ ಮಾಡಲಾಯಿತು. ನಾಯಕಿಯಾಗಿ ಐಟಂ ಸಾಂಗ್​ಗೆ ಡಾನ್ಸ್​ ಮಾಡುವುದರಿಂದ ಸಿನಿ ವೃತ್ತಿ ಜೀವನಕ್ಕೆ ತೊಂದರೆಯಾಗುವುದಲ್ಲಿವೇ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅಂಜಲಿ, ಐಟಂ ಸಾಂಗ್​ ಮಾಡುವುದರಲ್ಲಿ ತಪ್ಪಿಲ್ಲ. ಬೋಲ್ಡ್​ ಆಗಿ ಸೊಂಟ ಬಳುಕಿಸುವುದರಿಂದ ನನ್ನ ಇತರೆ ಚಿತ್ರಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.

    ಇಂದು ಸಿನಿಮಾಗಳಲ್ಲಿ ಸ್ಟಾರ್​ ನಟಿಯರು ಐಟಂ ಸಾಂಗ್​ಗಳಲ್ಲಿ ಸೊಂಟ ಬಳಕಿಸುವುದು ಸಾಮಾನ್ಯವಾಗಿದೆ. ಇದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಪ್ರತಿಯೊಬ್ಬರು ಇದನ್ನು ಮಾಡುತ್ತಿದ್ದಾರೆ ಎಂದು ಅಂಜಲಿ ಓಪನ್​ ಆಗಿ ಹೇಳಿದರು.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಂಜಲಿ ಅವರು ಸದ್ಯ ಗ್ಯಾಂಗ್ಸ್​ ಆಫ್​ ಗೋದಾವರಿ ಮತ್ತು ಗೇಮ್​ ಚೇಂಜರ್​ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

    ಖರ್ಚು ಮಾಡಿದ್ದು 6 ಲಕ್ಷ ಗಳಿಸಿದ್ದು 800 ಕೋಟಿ ರೂ.! ವಿಶ್ವದ ಅತ್ಯಂತ ಲಾಭದಾಯಕ ಚಿತ್ರವಿದು…

    ನಾನು ಕೊಹ್ಲಿಯ ಡೈ ಹಾರ್ಡ್​ ಫ್ಯಾನ್​, ಆರ್​ಸಿಬಿ ಕಪ್​ ಗೆಲ್ಲಬೇಕೆಂಬುದೇ ನನ್ನ ಕನಸೆಂದ ತಮಿಳು ನಟಿ!

    ನಿವೃತ್ತ IAS ಅಧಿಕಾರಿಯನ್ನು ಫೋನ್​ನಿಂದಲೇ ಡಿಜಿಟಲ್​ ಅರೆಸ್ಟ್​ ಮಾಡಿ 11.5 ಲಕ್ಷ ರೂ. ಸುಲಿಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts