ಸಿನಿಮಾ

ದೇಶ-ವಿದೇಶಗಳಲ್ಲಿ 114 ಪದಕಗಳನ್ನು ಗೆದ್ದಿರುವ 84ರ ಅಜ್ಜ..!

ಮಹಾರಾಷ್ಟ್ರ: ಆಧುನಿಕ ಜೀವನ ಶೈಲಿಯಲ್ಲಿ 40ನೇ ವಯಸ್ಸಿಗೆ ಕೈ-ಕಾಲು ನೋವು ಎಂದು ಗೋಳಾಡುವ ಅನೇಕ ಜನರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಜ್ಜ ತನ್ನ ಇಳಿವಯಸ್ಸಿನಲ್ಲಿಯೂ ದೇಶ-ವಿದೇಶಗಳಲ್ಲಿ ಆಯೋಜಿಸಲಾದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಈವರೆಗೆ ಒಟ್ಟು 114 ಪದಕಗಳನ್ನು ಗಳಿಸಿದ್ದಾರೆ.

ಮೂಲತಃ ಮಹಾರಾಷ್ಟ್ರ ನಿವಾಸಿಯಾಗಿರುವ ಜನರಾವ್ ಲೋಂಕರ್ ಅವರು ನಿವೃತ್ತ ಪೋಲಿಸ್​ ಅಧಿಕಾರಿ. 18ನೇ ವಯಸ್ಸಿನಲ್ಲಿ ಪೊಲೀಸ್ ಸೇವೆಗೆ ಬಂದು ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿ 48ನೇ ವಯಸ್ಸಿನಲ್ಲಿ ನಿವೃತ್ತರಾದರು.

ಇದನ್ನೂ ಓದಿ: ಸೆಪ್ಟಿಕ್​ ಟ್ಯಾಂಕ್​ ಶುಚಿಗೊಳಿಸುವ ವೇಳೆ ದುರಂತ: 5 ಸಾವು

ಸದ್ಯ, ಲೋಂಕರ್ ಅವರಿಗೆ 84 ವರ್ಷ ವಯಸ್ಸಾಗಿದ್ದರೂ ಸಹ, ಅವರ ಈ ಸಾಧನೆ ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ಓಟ, ಜಾವೆಲಿನ್ ಎಸೆತ, ಗುಂಡು ಎಸೆತ, ಟೇಬಲ್ ಥ್ರೋ, ಜಂಪಿಂಗ್, ಹರ್ಡಲ್ಸ್​ ಹೀಗೆ 26 ರಿಂದ 27 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.

ಆರೋಗ್ಯ ಮತ್ತು ದೈಹಿಕ ಕಸರತ್ತಿಗೆ ಮಹತ್ವ ನೀಡುವ ಲೋಂಕಾರ್​ ಪ್ರತಿನಿತ್ಯ ತಪ್ಪದೇ ವ್ಯಾಯಮ ಮಾಡಿ, ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾರೆ. ಅವರಿಗೆ 81 ವರ್ಷದ ಪತ್ನಿ ಸುಮನ್ ಜನರಾವ್ ಕೂಡ ಸಹಾಯ ಮಾಡುತ್ತಾರೆ. ಇವನ ಬಗ್ಗೆ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈಗಾಗಲೇ ಹಲವು ಸ್ಪರ್ಧೆಯಲ್ಲಿ ಗೆದ್ದಿರುವ ಈ ಅಜ್ಜನ ಗೆಲ್ಲುವ ಉತ್ಸಾಹವು ಕಡಿಮೆಯಾಗಿಲ್ಲ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್