ಸಿನಿಮಾ

ಸೆಪ್ಟಿಕ್​ ಟ್ಯಾಂಕ್​ ಶುಚಿಗೊಳಿಸುವ ವೇಳೆ ದುರಂತ: 5 ಸಾವು

ಸೋನ್​ಪೇಟ: ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಭೀಕರ ದುರಂತವೊಂದು ನಡೆದಿದೆ. ಮಹಾರಾಷ್ಟ್ರದ ಸೋನ್‌ಪೇಟ್​ ತಾಲೂಕಿನಲ್ಲಿ ನಡೆದ ಈ ಘಟನೆಯಲ್ಲಿ ಐವರು ಕಾರ್ಮಿಕರು ಸಾವಿಗೀಡಾಗಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ದಿ ಕೇರಳ ಸ್ಟೋರಿ ಬ್ಯಾನ್: ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್​

ಮೃತ ಕಾರ್ಮಿಕರನ್ನು ಸಾದಿಕ್ ಶೇಖ್(55) ಜುನೈದ್ ಶೇಖ್(32), ನವೀದ್ ಶೇಖ್(28), ಶಾರುಖ್ ಶೇಖ್(28), ಮತ್ತು ಫಿರೋಜ್ ಶೇಖ್(27) ಎಂದು ಗುರುತಿಸಲಾಗಿದೆ. ಆಕಸ್ಮಿಕ ಮರಣ ವರದಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಯೇ ಅಥವಾ ಟ್ಯಾಂಕ್ ಸ್ವಚ್ಛಗೊಳಿಸಲು ಬಳಸುತ್ತಿದ್ದ ಯಂತ್ರದ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆಯೇ ಎಂಬುದರ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ:
ಟ್ಯಾಂಕ್​ ಸ್ವಚ್ಛಗೊಳಿಸುವ ಸಮಯದಲ್ಲಿ ಮೊದಲಿಗೆ ಆಕಸ್ಮಿಕವಾಗಿ ಕಾರ್ಮಿಕನೊಬ್ಬ ಬಿದ್ದಿದ್ದ. ಆಗ ಉಳಿದವರೆಲ್ಲರೂ ಕೂಡಿಕೊಂಡು ಆತನನ್ನು ರಕ್ಷಿಸಿದ್ದಾರೆ. ಸ್ವಲ್ಪ ಸಮಯದ ನಂತರ ಇನ್ನೊಬ್ಬ ಕಾರ್ಮಿಕ ಟ್ಯಾಂಕ್​ನೊಳಗೆ ಕುಸಿದು ಬಿದ್ದ ಸಂದರ್ಭದಲ್ಲಿ ಅವನನ್ನು ರಕ್ಷಿಸಲು ಹೋಗಿ ಉಳಿದ ನಾಲ್ವರು ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್