ಸಿನಿಮಾ

VIDEO| ಕಾರನ್ನು ನಿಲ್ಲಿಸಲು ಹೋಗಿ ಸರಣಿ ಅಪಘಾತ ಮಾಡಿದ ಮಹಿಳೆ!

ಕಾನ್ಪುರ: ಕಾರ್​ ಚಾಲನೆಯನ್ನು ಕಲಿಯುವ ವೇಳೆ ಮಹಿಳೆಯೊಬ್ಬರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಸಂಚಾರಿ ಪೊಲೀಸರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದಕ್ಕೆ ದಂಡ ವಿಧಿಸಿದ್ದಾರೆ.

ರಿವರ್ಸ್​ ತೆಗೆಯುವ ವೇಳೆ ಅವಘಡ

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರೊಬ್ಬರು ಕಾರಿನಲ್ಲಿ ಬಂದ ಮಹಿಳೆ ಜನನಿಬಿಡ ಪ್ರದೇಶದಲ್ಲಿ ಚಾಲನೆ ಮಾಡುವುದನ್ನು ಕಲಿಯುತ್ತಿದ್ದರು.

ಈ ವೇಳೆ ಕಾರನ್ನು ಮಹಿಳೆ ರಿವರ್ಸ್​ ತೆಗೆಯುತ್ತಿದ್ದ ವೇಳೆ ವೇಗ ಹೆಚ್ಚಾದ ಕಾರಣ ಹಿಂಬದಿ ನಿಲ್ಲಿಸಿ್ದ ಬೈಕಗಳಿಗೆ ಗುದ್ದಿ ಅದರ ಮೇಲೇರಿದೆ. ಆ ನಂತರ ಸಾರ್ವಜನಿಕರ ಸಹಾಯದಿಂದ ಕಾರನ್ನು ಮತ್ತೊಂದು ಬದಿಯಲ್ಲಿ ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: CBSE 10ನೇ ತರಗತಿ ಫಲಿತಾಂಶ ಪ್ರಕಟ; ಶೇ. 93.12 ಮಂದಿ ಪಾಸ್​

ದಂಡ ವಿಧಿಸಿದ ಪೊಲೀಸರು

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ರವೀನಾ ತ್ಯಾಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಬೆನ್ನಲ್ಲೇ ಅಜಾಗರೂಕತೆಯಿಂದ ಚಲನೆ ಮಾಡಿದ ಕಾರಣ ದಂಡವನ್ನು ವಿಧಿಸಲಾಗಿದೆ.

ರಿವರ್ಸ್​ ತೆಗೆಯುವ ವೇಳೆ ಅತಿವೇಗವಾಗಿ ಚಾಲನೆ ಮಾಡಿದ ಕಾರಣ ಘಟನೆ ಸಂಭವಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Latest Posts

ಲೈಫ್‌ಸ್ಟೈಲ್