

ವಾಷಿಂಗ್ಟನ್: ಟ್ರಾನ್ಸ್ಜೆಂಡರ್ ಬಗ್ಗೆ ನಿಮಗೆ ಗೊತ್ತಿರುತ್ತದೆ. ಎಷ್ಟೋ ಸೆಲೆಬ್ರಿಟಿಗಳು ಕೂಡ ಲಿಂಗ ಬದಲಾಯಿಸಿಕೊಂಡಿರುವ ಉದಾಹರಣೆಗಳಿವೆ. ಅದೇ ರೀತಿ ಹಾಲಿವುಡ್ನ ನಟಿಯೊಬ್ಬರು ಲಿಂಗ ಬದಲಾವಣೆ ಮಾಡಿಕೊಂಡು ಸಿಕ್ಸ್ ಪ್ಯಾಕ್ ತೋರಿಸಿರುವ ಫೋಟೋ ಇದೀಗ ಭಾರೀ ವೈರಲ್ ಆಗಿದೆ.
ಜುನೋ, ಇನ್ಸೆಪ್ಷನ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಆಲೆನ್ 2020ರ ಡಿಸೆಂಬರ್ನಲ್ಲಿ ತಮ್ಮ ಜೀವನದ ಅತ್ಯಂತ ದೊಡ್ಡ ಗುಟ್ಟನ್ನು ಹೊರಹಾಕಿದ್ದರು. ತಾವೊಬ್ಬ ಟ್ರಾನ್ಸ್ಜೆಂಡರ್ ಎಂದು ಹೇಳಿಕೊಂಡಿದ್ದರು. ಅದಾದ ನಂತರ ಸರ್ಜರಿ ಮಾಡಿಸಿಕೊಂಡ ಅವರು ಇದೀಗ ಸಂಪೂರ್ಣವಾಗಿ ಗಂಡಾಗಿ ಬದಲಾಗಿದ್ದಾರೆ. ಅವರು ಸಿಕ್ಸ್ ಪ್ಯಾಕ್ ಅನ್ನೂ ಬೆಳೆಸಿಕೊಂಡಿದ್ದು ಅದರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅಂದ ಹಾಗೆ ಆಲೆನ್ ಅವರ ಈಗಿನ ಹೆಸರು ಎಲ್ಟ್ ಪೇಜ್. ಅವರು ಈ ಹಿಂದೆ 2014ರಲ್ಲಿ ಕೆನಡಿಯನ್ ಡ್ಯಾನ್ಸರ್ ಎಮ್ಮಾ ಪೋರ್ಟರ್ ಅನ್ನು ಮದುವೆಯಾಗಿದ್ದರು. ಇದೀಗ ಅವರ ಅವರಿಬ್ಬರು ವಿಚ್ಛೇದನಕ್ಕೂ ಅರ್ಜಿ ಅಸಲ್ಲಿಸಿರುವುದಾಗಿ ಸ್ವತಃ ಎಲ್ಟ್ ಅವರೇ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)