More

    ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಸುಲಭ ಆಸನ – ಅರ್ಧ ಚಕ್ರಾಸನ

    ಅರ್ಧ ಚಕ್ರಾಸನ – ಇದು ನಿಂತುಕೊಂಡು ಮಾಡುವ ಸುಲಭವಾದ ಯೋಗಾಸನ. ದೇಹವನ್ನು ಶಿಸ್ತುಬದ್ಧವಾಗಿ ಹಿಂದಕ್ಕೆ ಬಾಗಿಸಿದಾಗ, ಶ್ವಾಸಕೋಶದ ಭಾಗ ಎಳೆತಕ್ಕೆ ಒಳಗಾಗಿ, ಹೆಚ್ಚಿನ ವಾಯು ಸಂಚಾರವಾಗುತ್ತದೆ. ಎದೆಯ ಭಾಗಕ್ಕೆ ಮೆದು ವ್ಯಾಯಾಮವಾಗುತ್ತದೆ.

    ಪ್ರಯೋಜನಗಳು : ಶಿರಸ್ಸಿನ ಭಾಗಕ್ಕೆ ಹೆಚ್ಚಿನ ರಕ್ತಸಂಚಲನೆ ಜರುಗಿ, ನರಮಂಡಲ ಸಚೇತನಗೊಳ್ಳುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಆಸ್ತಮಾ ನಿವಾರಣೆ ಮತ್ತು ಥೈರಾಯ್ಡ್​ ಗ್ರಂಥಿಯ ಆರೋಗ್ಯ ವರ್ಧನೆಗೆ ಈ ಅರ್ಧ ಚಕ್ರಾಸನ ಉಪಯುಕ್ತ.

    ಇದನ್ನೂ ಓದಿ: ಕಾಲುಗಳನ್ನು ಬಲಪಡಿಸಲು ತ್ರಿಕೋನಾಸನ ಅಭ್ಯಾಸ ಮಾಡಿ

    ಅಭ್ಯಾಸ ಕ್ರಮ : ತಾಡಾಸನದಲ್ಲಿ ನಿಲ್ಲುವುದು. ಕಾಲುಗಳ ನಡುವೆ ಸ್ವಲ್ಪ ಅಂತರ ಕೊಟ್ಟು, ಸೊಂಟದ ಹಿಂದಕ್ಕೆ ಎರಡೂ ಕೈಗಳನ್ನು ಇಟ್ಟುಕೊಳ್ಳುವುದು. ಪರಸ್ಪರ ಹೆಬ್ಬೆರೆಳುಗಳನ್ನು ಜೋಡಿಸಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಸೊಂಟದ ಮೇಲ್ಭಾಗದಿಂದ ಹಿಂದಕ್ಕೆ ಬಾಗಬೇಕು. ನೆಕ್​ ಅಂಡ್​ ಹೆಡ್​ ಹ್ಯಾಂಗಿಂಗ್ ಪೊಸಿಷನ್​ನಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಹಿಂತಿರುಗುವುದು.

    ಕೆಲವೊಮ್ಮೆ ಹಿಂದಕ್ಕೆ ಬಾಗುವಾಗ ತಲೆ ತಿರುಗಿದ ಅನುಭವವಾಗುತ್ತದೆ. ಅಭ್ಯಾಸ ಮಾಡುತ್ತಾ ಮಾಡುತ್ತಾ ಸರಿಹೋಗುತ್ತದೆ. ಆದರೆ, ತೀರಾ ಕುತ್ತಿಗೆ ನೋವು ಇರುವವರು ಮತ್ತು ಹೃದಯ ದೌರ್ಬಲ್ಯ ಇರುವವರು ಈ ಆಸನವನ್ನು ಮಾಡಬಾರದು.

    ಕಾಲುಗಳಿಗೆ ಶಕ್ತಿ ತುಂಬುವ ಸರಳ ಯೋಗಾಸನ – ಎಲ್ಲರೂ ಮಾಡಬಹುದು!

    ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟ ಸಿಂಧು; ವರ್ಲ್ಡ್​ ನಂ.5 ವಿರುದ್ಧ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts