More

    ಕಾಲುಗಳನ್ನು ಬಲಪಡಿಸಲು ತ್ರಿಕೋನಾಸನ ಅಭ್ಯಾಸ ಮಾಡಿ

    ಕಾಲುಗಳನ್ನು ಬಲಪಡಿಸುವುದಕ್ಕೆ ಉತ್ತಮ ಆಸನವೆಂದರೆ ತ್ರಿಕೋನಾಸನ. ಈ ಆಸನವು ತ್ರಿಕೋನಾಕಾರದಲ್ಲಿರುತ್ತದೆ. ಆಂಗ್ಲಭಾಷೆಯಲ್ಲಿ ಇದನ್ನು ಟ್ರೈಆ್ಯಂಗುಲರ್ ಪೋಸ್ಟರ್ ಎಂದು ಕರೆಯುತ್ತಾರೆ. ಇದು ಒಂದು ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿದೆ.

    ಅಭ್ಯಾಸ ಕ್ರಮ : ಮೊದಲು ತಾಡಾಸನದಲ್ಲಿ ನಿಲ್ಲಬೇಕು. ಆನಂತರ ಕಾಲುಗಳನ್ನು ಅಗಲಿಸಿ ಮೂರು ಯಾ ಮೂರೂವರೆ ಅಡಿಗಳಷ್ಟು ಅಂತರದಲ್ಲಿಡಬೇಕು. ಕೈಗಳೆರಡನ್ನೂ ಹೆಗಲಿನ ಮಟ್ಟಕ್ಕೆ ಇರುವಂತೆ ನೇರವಾಗಿ ಚಾಚಬೇಕು. ಆಮೇಲೆ ಬಲಪಾದವನ್ನು ಬಲಕಡೆಗೆ 90 ಡಿಗ್ರಿಗಳಷ್ಟು ತಿರುಗಿಸಿ ಉಸಿರನ್ನು ಹೊರಕ್ಕೆ ಬಿಟ್ಟು ಶರೀರವನ್ನು ಬಲಭಾಗಕ್ಕೆ ಬಾಗಿಸಬೇಕು. ಬಲಗೈಯನ್ನು ಬಲಗಾಲಿನ ಪಕ್ಕದಲ್ಲಿ ಇಡಬೇಕು. ಆಗ ದೃಷ್ಟಿಯು ಎಡಗೈಯ ಬೆರಳ ಮೇಲಿರಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುತ್ತಾ, ಅರ್ಧ ನಿಮಿಷದಿಂದ ಒಂದು ನಿಮಿಷ ಇರಬೇಕು. ಅದೇ ರೀತಿ ಎಡ ಭಾಗದಲ್ಲಿ ಅಭ್ಯಸಿಸಬೇಕು. ಅನಂತರ 2 ನಿಮಿಷ ವಿಶ್ರಾಂತಿ.

    ಇದನ್ನೂ ಓದಿ: ಹದಿಹರೆಯದವರ ಬೆಳವಣಿಗೆಗೆ ಉಪಯುಕ್ತವಾದ ಭುಜಂಗಾಸನ

    ಉಪಯೋಗಗಳು : ತ್ರಿಕೋನಾಸನ ಅಭ್ಯಾಸದಿಂದ ಕಾಲುಗಳ ಮಾಂಸಖಂಡಗಳು ಚೆನ್ನಾಗಿ ಪಳಗುತ್ತವೆ. ಕಾಲುಗಳ ಸಾಮಾನ್ಯ ವಕ್ರತೆಯನ್ನು ಸರಿಪಡಿಸಬಹುದಾಗಿದೆ; ಚಪ್ಪಟೆ ಕಾಲು ಸರಿಯಾಗುತ್ತದೆ. ಹಾಗೂ ಬೆನ್ನು ನೋವು, ಕುತ್ತಿಗೆ ನೋವು, ಸೊಂಟ ನೋವು ಪರಿಹಾರವಾಗುತ್ತದೆ. ಮೊಣಕೈಗಳು ಬಲಗೊಳ್ಳುತ್ತವೆ.

    ತೀರಾ ಸೊಂಟ ನೋವು, ಕತ್ತು ನೋವು ಇರುವವರು ತ್ರಿಕೋನಾಸನವನ್ನು ಮಾಡಬಾರದು.

    ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ಭಾರತದ ಮೀರಾಬಾಯಿ ಚಾನುಗೆ ದಕ್ಕಬಹುದೇ ಚಿನ್ನ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts