More

    ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟ ಸಿಂಧು; ವರ್ಲ್ಡ್​ ನಂ.5 ವಿರುದ್ಧ ಗೆಲುವು

    ಟೋಕಿಯೋ : ಭಾರತದ ಬ್ಯಾಡ್ಮಿಂಟನ್ ಚ್ಯಾಂಪಿಯನ್ ಪಿ.ವಿ.ಸಿಂಧು ಇಂದು ವುಮೆನ್ಸ್​ ಸಿಂಗಲ್ಸ್​ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ, ವರ್ಲ್ಡ್​ ನಂ.5 ಆಗಿರುವ ಜಪಾನಿನ ಅಕಾನೆ ಯಮಗುಚಿ ವಿರುದ್ಧ, ಗೆಲುವು ಸಾಧಿಸಿದರು. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್​ನ ಸೆಮಿಫೈನಲ್ಸ್​ಗೆ ಪ್ರವೇಶಿಸಿರುವ ಸಿಂಧು, ಚಿನ್ನದ ಪದಕದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

    ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 26 ವರ್ಷ ವಯಸ್ಸಿನ ಪುಸರ್ಲ ವೆಂಕಟ ಸಿಂಧು, 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉತ್ತಮ ಆಟಗಾರಿಕೆ ಪ್ರದರ್ಶಿಸಿದರು. ಟೋಕಿಯೋದ ಮುಸಾಶೀನೋ ಫಾರೆಸ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ 21-13, 22-20 ಸ್ಕೋರ್​ ಪಡೆದು, ನೇರ ಸೆಟ್​​ಗಳೊಂದಿಗೆ ಅಕಾನೆ ಅವರನ್ನು ಪರಾಜಯಗೊಳಿಸಿದರು.

    ಥಾಯ್ಲೆಂಡಿನ ರತ್ಮನೊಕ್ ಇಂತಾನಾನ್ ಮತ್ತು ಚೀನಾದ ಟಾಯಿ ಟ್ಸು ಯಿಂಗ್​ ನಡುವೆ ನಡೆಯಲಿರುವ ಮತ್ತೊಂದು ಕ್ವಾರ್ಟರ್​ಫೈನಲ್ಸ್ ಪಂದ್ಯದ ವಿಜೇತರೊಂದಿಗೆ, ಸಿಂಧು, ಸೆಮಿಫೈನಲ್ಸ್​ ಆಡಲಿದ್ದಾರೆ. (ಏಜೆನ್ಸೀಸ್)

    ಭಾರತಕ್ಕೆ ಮತ್ತೊಂದು ಪದಕ ಗ್ಯಾರಂಟಿ! ಬಾಕ್ಸಿಂಗ್​ನಲ್ಲಿ ಸೆಮಿಫೈನಲ್ಸ್ ತಲುಪಿದ ಲವ್ಲೀನಾ ಬೊರ್ಗೊಹೈನ್

    16 ಕೋಟಿ ರೂ. ಮೌಲ್ಯದ ಕಲಾಕೃತಿಗಳು ಭಾರತಕ್ಕೆ ವಾಪಸ್​!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts