More

    ಕಾಲುಗಳಿಗೆ ಶಕ್ತಿ ತುಂಬುವ ಸರಳ ಯೋಗಾಸನ – ಎಲ್ಲರೂ ಮಾಡಬಹುದು!

    ಉತ್ಥಿತ ಏಕಪಾದಾಸನ ಎಂಬುದು ಕಾಲುಗಳಿಗೆ ಹೆಚ್ಚು ಶಕ್ತಿ ತುಂಬುವ ಸರಳ ಯೋಗಾಸನ. ಮಲಗಿಕೊಂಡು ಬೆನ್ನಿನ ಆಧಾರದ ಮೇಲೆ ಸುಲಭವಾಗಿ ಮಾಡುವ ಆಸನವಿದು.

    ಮಾಡುವ ವಿಧಾನ : ಜಮಖಾನ ಅಥವಾ ಯೋಗ ಮ್ಯಾಟ್​ ಹಾಸಿ ಬೆನ್ನಿನ ಮೇಲೆ ಮಲಗುವುದು. ಕಾಲುಗಳನ್ನು ಜೋಡಿಸಿ, ಕೈಗಳನ್ನು ತೊಡೆಯ ಪಕ್ಕದಲ್ಲಿರಿಸುವುದು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಬಲಗಾಲನ್ನು ಮೇಲೆತ್ತಬೇಕು. ಮತ್ತೆ ನಿಧಾನವಾಗಿ ಉಸಿರು ಬಿಡುತ್ತಾ ಕಾಲನ್ನು ಇಳಿಸಬೇಕು. ಬೆರಳು ನೇರವಾಗಿ ಪಾಯಿಂಟ್​ ಆಗಿರಬೇಕು ಮತ್ತು ಮಂಡಿ ನೇರವಾಗಿರಬೇಕು. ಮತ್ತೆ ಎಡಗಾಲನ್ನು ಅದೇ ರೀತಿ ಮೇಲಕ್ಕೆ ಎತ್ತುವುದು, ಕೆಳಕ್ಕೆ ಇಳಿಸುವುದು. ಮೊದಲಿಗೆ 2-3 ಬಾರಿ ಮಾಡಬೇಕು. ಕ್ರಮೇಣ ಅಭ್ಯಾಸವಾದಂತೆ 9 ಬಾರಿ, 16 ಬಾರಿ ಮಾಡಬಹುದು.

    ಇದನ್ನೂ ಓದಿ: ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿಗೆ ಶೇ. 27 ಮೀಸಲಾತಿ ಘೋಷಿಸಿದ ಕೇಂದ್ರ ಸರ್ಕಾರ

    ಪ್ರಯೋಜನಗಳು : ಈ ಆಸನವನ್ನು ಎಲ್ಲರೂ ಮಾಡಬಹುದು. ಕೆಳಬೆನ್ನು ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಕಾಲಿನ ನರಗಳ ಸೆಳೆತ, ಮಂಡಿನೋವು ಮತ್ತು ಬೆನ್ನು ನೋವು ನಿಯಂತ್ರಣ ಮಾಡುತ್ತದೆ. ಪಿತ್ತ ಜನಕಾಂಗ, ಮೂತ್ರಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ.

    ಶರೀರಕ್ಕೆ ಮೃದುವಾದ ವ್ಯಾಯಾಮ ನೀಡುವ ಸುಲಭ ಆಸನವಿದು!

    ಕಾಲುಗಳನ್ನು ಬಲಪಡಿಸಲು ತ್ರಿಕೋನಾಸನ ಅಭ್ಯಾಸ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts