More

    ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿಗೆ ಶೇ. 27 ಮೀಸಲಾತಿ ಘೋಷಿಸಿದ ಕೇಂದ್ರ ಸರ್ಕಾರ

    ನವದೆಹಲಿ: ವೈದ್ಯಕೀಯ ಶಿಕ್ಷಣದಲ್ಲಿ ಮಹತ್ವದ ಪರಿವರ್ತನೆಗೆ ಮುಂದಾಗಿರುವ ಕೇಂದ್ರ ಸರ್ಕಾರವು ಹಿಂದುಳಿದ ವರ್ಗ, ಬಡವರಿಗೆ ಮೀಸಲು ಕಲ್ಪಿಸಲು ನಿರ್ಧರಿಸಿದೆ. ಹಿಂದುಳಿದ ವರ್ಗಗಳಿಗೆ ಶೇ.27, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡುವುದಾಗಿ ಘೋಷಿಸಿದೆ.

    ಅಖಿಲ ಭಾರತೀಯ ಕೋಟಾದಡಿ ವೈದ್ಯಕೀಯ ಶಿಕ್ಷಣ ಪ್ರವೇಶಾತಿಯಲ್ಲಿ (ನೀಟ್) ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ. 27 ಮೀಸಲಾತಿ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ. 10 ಮೀಸಲಾತಿ ನೀಡಲಾಗುವುದು. ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಮೀಸಲಾತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

    2021-22ರ ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್, ಎಂಡಿ, ಎಂಸ್, ಬಿಡಿಎಸ್, ಎಂಡಿಎಸ್, ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸ್​ ಸಂಬಂಧಿಸಿದ ಡಿಪ್ಲೋಮಾ ಪ್ರವೇಶಾತಿಗೆ ಈ ಮೀಸಲಲಾತಿ ಅನ್ವಯವಾಗಲಿದೆ. ಇದರಿಂದಾಗಿ ಪ್ರತಿವರ್ಷ 5,550 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್)

    ಟೆಕ್ಕಿಗಳು, ಪಿಜಿಗಳಲ್ಲಿರುವ ಯುವಕ-ಯುವತಿಯರೇ ಇವರ ಟಾರ್ಗೆಟ್! ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್

    ಕಾಂಗ್ರೆಸ್ ನಾಯಕರ ಚರ್ಚೆಯಲ್ಲಿ ಬಿಜೆಪಿ ಸಂಸದ ಭಾಗಿ! ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಯಡವಟ್ಟು!

    ಉತ್ತರ ಕನ್ನಡ ಪ್ರವಾಹ: ನೆರೆ ಸಂತ್ರಸ್ತರ ನೆರವಿಗೆ ನಿಲ್ಲುವುದಾಗಿ ಭರವಸೆ ಕೊಟ್ಟ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts