More

    ಟೆಕ್ಕಿಗಳು, ಪಿಜಿಗಳಲ್ಲಿರುವ ಯುವಕ-ಯುವತಿಯರೇ ಇವರ ಟಾರ್ಗೆಟ್! ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾದಕ ವಸ್ತುವಿನ ದಂಧೆ ದಿನೇದಿನೇ ಹೆಚ್ಚುತ್ತಲೇ ಸಾಗಿದೆ. ದೂರದ ರಾಜಸ್ಥಾನದಿಂದ ಮಾದಕ ವಸ್ತು ಅಕ್ರಮ ಸಾಗಣೆ ಮಾಡಿ, ನಗರದ ಯುವಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

    ರಾಜಸ್ಥಾನ ಮೂಲದ ಅಮರಾರಾಮ್, ಮೋತಿಲಾಲ್ ಬಂಧಿತ ಆರೋಪಿಗಳು. ಅವರಿಬ್ಬರು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡುತಿದ್ದರು. ರಾಜಸ್ಥಾನದಿಂದ ಅಕ್ರಮವಾಗಿ ಅಫೀಮು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ನಗರದಲ್ಲಿರುವ ಪಿಜಿಗಳಲ್ಲಿ ವಾಸಿಸುವ ಯುವಕ ಯುವತಿಯರಿಗೆ ಹೆಚ್ಚಾಗಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿತ್ತಂತೆ. ಅವರ ಜತೆ ಟೆಕ್ಕಿಗಳಿಗೂ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 20 ಲಕ್ಷ ರೂಪಾಯಿ ಮೌಲ್ಯದ ಒಂದು ಕೆಜಿ ಅಫೀಮು ಮತ್ತು ಒಂದು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಕಾಂಗ್ರೆಸ್ ನಾಯಕರ ಚರ್ಚೆಯಲ್ಲಿ ಬಿಜೆಪಿ ಸಂಸದ ಭಾಗಿ! ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಯಡವಟ್ಟು!

    ಉತ್ತರ ಕನ್ನಡ ಪ್ರವಾಹ: ನೆರೆ ಸಂತ್ರಸ್ತರ ನೆರವಿಗೆ ನಿಲ್ಲುವುದಾಗಿ ಭರವಸೆ ಕೊಟ್ಟ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts