

ಬೆಂಗಳೂರು: ಗ್ಯಾಸ್ ಕಟರ್ ಬಳಸಿ, ಎಟಿಎಂ ಮಷಿನ್ ಒಡೆದು ಕಳ್ಳತನ ಮಾಡಲು ಯತ್ನಿಸಿದ ಘಟನೆ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಶ್ರೀರಾಮಪುರದಲ್ಲಿನ ನಡೆದಿದೆ.
ಖಾಸಗಿ ಬ್ಯಾಂಕ್ನ ಎಟಿಎಂ ಒಡೆದು ಹಣ ದೋಚಲು ಆರೋಪಿಗಳು ಸಂಚು ರೂಪಿಸಿದ್ದರು. ಅದರಂತೆ ಗ್ಯಾಸ್ ಕಟರ್ ಬಳಸಿ ಎಟಿಎಂ ಬಾಕ್ಸ್ ತೆರೆಯಲು ಪ್ರಯತ್ನ ಪಟ್ಟಿದ್ದಾರೆ. ಈ ವೇಳೆ ಕಳ್ಳರ ಕೃತ್ಯವನ್ನ ಸ್ಥಳೀಯರು ಗಮನಿಸಿದ್ದಾರೆ.
ಎಟಿಎಂ ಒಡೆದು ಹಣ ದರೋಡೆ ಮಾಡಲು ಯತ್ನಿಸುತ್ತಿರುವುದು ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆ, ಗ್ಯಾಸ್ ಕಟರ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹಣ ದೋಚುವ ಪ್ರಯತ್ನ ವಿಫಲವಾಗಿದ್ದು, ಎಟಿಎಂ ಮಷಿನ್ನ್ನು ಧ್ವಂಸಗೊಳಿಸಿದ್ದಾರೆ.
ಕಳ್ಳರ ಈ ಕೃತ್ಯ ಜಿಗಣಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜಿಗಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.