ಚುನಾಯಿತ ಸದಸ್ಯರಿಗೆ ಸಿಕ್ಕಿತು ಬಂಪರ್ ಗಿಫ್ಟ್; ಇದು ಸಚಿವರು ನೀಡಿದ ದೀಪಾವಳಿ ಉಡುಗೊರೆ!

Deepavali Gift
Published on

ವಿಜಯನಗರ: ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತ್ ಮತ್ತು 10 ಗ್ರಾಮ ಪಂಚಾಯತ್​​ಗಳ ಚುನಾಯಿತ ಸದಸ್ಯರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಂಪರ್ ಗಿಫ್ಟ್​ ಲಭಿಸಿದೆ.

ಪ್ರವಾಸೋದ್ಯಮ ಸಚಿವ ಹಾಗೂ ವಿಜಯನಗರ ವಿಧಾನ ಸಭೆ ಕ್ಷೇತ್ರದ ಶಾಸಕ ಆನಂದ್ ಸಿಂಗ್ ತಮ್ಮ ಕ್ಷೇತ್ರದ ಚುನಾಯಿತ ಸದಸ್ಯರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ. ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತ್ ಮತ್ತು 10 ಗ್ರಾಪಂಗಳ ಚುನಾಯಿತ ಸದಸ್ಯರಿಗೆ 144 ಗ್ರಾಂ ಚಿನ್ನ, ಹಣ, ರೇಷ್ಮೆ ಬಟ್ಟೆ, ಮುತ್ತಿನ ಹಾರ, ಡ್ರೈ ಫ್ರೂಟ್ಸ್ ನೀಡಿದ್ದಾರೆ.

ಹೊಸಪೇಟೆಯ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿ ದೀಪಾವಳಿ ಕೊಡುಗೆಯಾಗಿ 27 ಸಾವಿರ ನಗದು, 500 ಗ್ರಾಂ ಬೆಳ್ಳಿ, ರೇಷ್ಮೆ ಸೀರೆ , ರೇಷ್ಮೆ ಪಂಜೆ, ರೇಷ್ಮೆ ಶರ್ಟ್ ಹಾಗೂ ಮುತ್ತಿನ ಹಾರ, ಡ್ರೈ ಫ್ರೂಟ್ಸ್ ಒಳಗೊಂಡ ದೀಪಾವಳಿ ಉಡುಗೊರೆ ನೀಡಿದ್ದಾರೆ.

ಸಚಿವ ಆನಂದ್ ಸಿಂಗ್ ನೀಡಿರುವ ಉಡುಗೊರೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net