ಮುಂಬೈ: ಎಂಥ ಕ್ರಿಮಿನಲ್ ಆದರೂ ಒಂದು ಸುಳಿವು ಬಿಟ್ಟು ಹೋಗುತ್ತಾನೆ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಕಳ್ಳನ ಪಾಲಿಗೆ ತನ್ನ ಉಡುಪೇ ಮುಳುವಾಗಿದೆ. ಅಂದರೆ ಒಮ್ಮೆ ತೊಟ್ಟಿದ್ದ ಬಟ್ಟೆಯನ್ನು ಮತ್ತೊಮ್ಮೆ ಧರಿಸಿದ ಕಾರಣಕ್ಕೆ ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮನೋಜ್ ಸಾಹು (27) ಎಂಬಾತ ಬಂಧನಕ್ಕೆ ಒಳಗಾಗಿರುವ ಕಳ್ಳ. ಈತ ನ. 27 ಮತ್ತು 28ರಂದು ಎರಡು ಕಡೆ ಕಳ್ಳತನಕ್ಕೆ ಯತ್ನಿಸಿದ್ದ. ಥಾಣೆಯ ಮಖ್ಮೈಲ್ ತಲಾವೊ ಬಳಿಯ ಛಾಯಾ ಸೊಸೈಟಿಯಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿದ್ದ ಒಂದು ಪ್ಲೈವುಡ್ ಸ್ಟೋರ್ ಹಾಗೂ ಇನ್ನೊಂದು ಮೊಬೈಲ್ಫೋನ್ ಶಾಪ್ನಲ್ಲಿ ಕಳವಿಗೆ ಪ್ರಯತ್ನ ಮಾಡಿದ್ದ. ಆದರೆ ಬೀಗ ಮುರಿದು ಅಂಗಡಿಯೊಳಕ್ಕೆ ಪ್ರವೇಶಿಸಲು ಸಾಧ್ಯವಾಗದ್ದರಿಂದ ಬರಿಗೈಲಿ ತೆರಳಿದ್ದ.
ಇದನ್ನೂ ಓದಿ: ಫಸ್ಟ್ ಡೋಸ್ನಲ್ಲಿ ದೇಶದಲ್ಲೇ ಕರ್ನಾಟಕ ಫಸ್ಟ್; ಮೊದಲ ಡೋಸ್ ಲಸಿಕೀಕರಣ ಪರ್ಸೆಂಟೇಜ್ ಇಲ್ಲಿದೆ ನೋಡಿ…
ಈ ಸಂಬಂಧ ಅಂಗಡಿಯವರು ಪೊಲೀಸರಿಗೆ ದೂರು ನೀಡಿದ್ದರು. ಮನೋಜ್ ಕಳವಿಗೆ ಯತ್ನಿಸುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯದ ತುಣುಕನ್ನು ಬಿಡುಗಡೆ ಮಾಡಿದ ಪೊಲೀಸರು ಕಳ್ಳನ ಸುಳಿವು ನೀಡುವಂತೆ ತಮ್ಮ ಸುಳಿವುದಾರರಲ್ಲಿ ಕೋರಿದ್ದರು.
ಇದನ್ನೂ ಓದಿ: ಇಲ್ಲಿ ಹುತ್ತಕ್ಕೆ ಹಾಲೆರೆಯಲ್ಲ, ಕೋಳಿಯನ್ನೇ ಬಲಿ ಕೊಡ್ತಾರೆ!; ವಿಶಿಷ್ಟವಾಗಿ ಷಷ್ಠಿ ಆಚರಣೆ…
ಮನೋಜ್ ಕಳವಿಗೆ ಯತ್ನಿಸಿದ್ದ ದಿನದಂದು ಧರಿಸಿದ್ದ ಉಡುಪನ್ನೇ ತೊಟ್ಟು ಮಂಗಳವಾರ ಬೆಳಗ್ಗೆ ಥಾಣೆಯ ಮಹಾಗಿರಿ ರುದ್ರಭೂಮಿ ಬಳಿ ಕಾಣಿಸಿಕೊಂಡಿದ್ದ. ಇದನ್ನು ತಿಳಿದ ಸುಳಿವುದಾರರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಆತ ಕಳವಿಗೆ ಯತ್ನಸಿದ್ದನ್ನು ಪೊಲೀಸ್ ವಿಚಾರಣೆ ವೇಳೆ ಒಪ್ಪಿದ್ದಾನೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!
26 ಮಕ್ಕಳಿದ್ದ ಶಾಲಾ ಬಸ್ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…