26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್...

1199213
Published on

ದಾವಣಗೆರೆ: ಇಪ್ಪತ್ತಾರು ಮಕ್ಕಳಿದ್ದ ಶಾಲಾ ಬಸ್​ ಅಪಘಾತಕ್ಕೀಡಾದ ಪ್ರಕರಣವೊಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಹಳ್ಳಿ ಗ್ರಾಮದ ಕ್ರಾಸ್ ಬಳಿ ಸಂಭವಿಸಿದೆ. ಈ ಬಸ್​ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದ ಸಮೀಪದ ಎಸ್‌ಕೆಒಟಿ ಮೆಮೋರಿಯಲ್ ಶಾಲೆಯದ್ದಾಗಿದೆ.

ಸುತ್ತಮುತ್ತಲಿನ ವಿವಿಧ ಪ್ರದೇಶಗಳ 26 ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಾಹನ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಹೊಲದ ಏರಿಯೊಂದಕ್ಕೆ ಡಿಕ್ಕಿ ಹೊಡೆದಿದೆ.

26 ವಿದ್ಯಾರ್ಥಿಗಳ ಪೈಕಿ ಐದಾರು ಮಕ್ಕಳಿಗೆ ಈ ಅಪಘಾತದಲ್ಲಿ ಗಾಯಗಳಾಗಿವೆ. ಅದೃಷ್ಟವಶಾತ್ ಯಾರೂ ಪ್ರಾಣಾಪಾಯಕ್ಕೆ ಒಳಗಾಗಿಲ್ಲ. ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net