More

    ಎರಡನೇ ಮದ್ವೆ ಆಗಲು ಹೆಂಡ್ತಿ-ಮಕ್ಳನ್ನು ಕೊಂದ, 11 ವರ್ಷಗಳ ಬಳಿಕ ಸಿಕ್ಕಿಬಿದ್ದ; ಈತ ತಪ್ಪಿಸಿಕೊಂಡಿದ್ದು, ಬಳಿಕ ಮಾಡಿದ್ದೆಲ್ಲ ಭಾರಿ ಕಿತಾಪತಿ!

    ಬೆಂಗಳೂರು: ಬೇರೆ ಒಬ್ಬಳನ್ನು ಮದುವೆಯಾಗುವ ಸಲುವಾಗಿ ಹೆಂಡತಿ ಹಾಗೂ ಮಕ್ಕಳನ್ನು ಕೊಲೆ ಮಾಡಿ, ನಂತರ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ವಿಚಾರಣಾಧೀನ ಆರೋಪಿ, ಭಾರಿ ಕಿತಾಪತಿಯ ಮಾಜಿ ಜವಾನ ಕೊನೆಗೂ ಹನ್ನೊಂದು ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹರಿಯಾಣ ಮೂಲದ ಈತ ಬೆಂಗಳೂರಿನಲ್ಲಿ ಕೃತ್ಯವೆಸಗಿ ತಪ್ಪಿಸಿಕೊಂಡಿದ್ದು, ಈತನನ್ನು ಕರ್ನಾಟಕ ಪೊಲೀಸರು ಅಸ್ಸಾಮ್​ನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

    53 ವರ್ಷದ ಧರ್ಮಸಿಂಗ್ ಯಾದವ್ ಬಂಧಿತ ಆರೋಪಿ. 1987ರಿಂದ ವಾಯುಸೇನೆಯಲ್ಲಿ ಜವಾನನಾಗಿದ್ದ ಈತ ಕೋಲ್ಕತ, ದೆಹಲಿ, ಬೆಂಗಳೂರು, ವಡೋದರ ಮುಂತಾದೆಡೆ ಕೆಲಸ ಮಾಡಿದ್ದ. ನಿವೃತ್ತಿ ನಂತರ ಬೆಂಗಳೂರಿನ ವಿದ್ಯಾರಣ್ಯಪುರದ ಸ್ವಂತ ಮನೆಯಲ್ಲಿದ್ದುಕೊಂಡು ಸಂಜಯನಗರದಲ್ಲಿನ ಖಾಸಗಿ ಕಂಪನಿಯಲ್ಲಿ ಪರ್ಚೆಸಿಂಗ್ ಆಫೀಸರ್​ ಆಗಿ ಕೆಲಸ ಮಾಡುತ್ತಿದ್ದ.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ದೆಹಲಿಯ ಅನು ಯಾದವ್ ಎಂಬಾಕೆಯನ್ನು ಮದುವೆಯಾಗಿದ್ದ ಈತನಿಗೆ 14 ವರ್ಷದ ಮಗ, 8 ವರ್ಷದ ಮಗಳು ಇದ್ದರು. ಈ ಮಧ್ಯೆ ತನಗೆ ಮದುವೆ ಆಗಿಲ್ಲ ಎಂದು ಜೀವನ್​ಸಾಥಿ.ಕಾಮ್​ನಲ್ಲಿ ಅರ್ಜಿ ಹಾಕಿ, ಬೆಂಗಳೂರಿನ ರಾಜಾಜಿನಗರದ ಮಹಿಳೆಯೊಬ್ಬಳನ್ನು ನಂಬಿಸಿದ್ದ. ಆಕೆಯನ್ನು ಮದುವೆಯಾಗಲು ಹೆಂಡತಿ ಹಾಗೂ ಮಕ್ಕಳು ಅಡ್ಡಿಯಾಗುತ್ತಾರೆ ಎಂದುಕೊಂಡು 2008ರ ಅ.19ರಂದು ಮನೆಯಲ್ಲಿ ಹೆಂಡತಿ-ಮಕ್ಕಳಿಗೆ ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಲ್ಲದೆ, ಚಾಕುವಿನಿಂದ ಕುತ್ತಿಗೆ ಕೊಯ್ದಿದ್ದ. ಬಳಿಕ ಹೆಂಡತಿ ಮೈಮೇಲೆ ಇದ್ದ ಚಿನ್ನಾಭರಣ ತೆಗೆದುಕೊಂಡು, ಯಾರೋ ಕೊಲೆ ಮಾಡಿ ಆಭರಣ ತೆಗೆದುಕೊಂಡು ಹೋಗಿದ್ದಾರೆ ಎಂದು ತಾನೇ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದ. ತನಿಖೆಗಿಳಿದ ಪೊಲೀಸರಿಗೆ ಕೊಲೆಗಾರ ಧರ್ಮಸಿಂಗ್​ ಎಂಬುದು ತಿಳಿದುಬಂದಿದ್ದು, ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

    ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

    ಎರಡು ವರ್ಷ ಎರಡು ತಿಂಗಳು ಜೈಲಿನಲ್ಲಿದ್ದ ಈತ ತನಗೆ ಮೂತ್ರಕೋಶದ ಸಮಸ್ಯೆ ಇರುವುದಾಗಿ ಹೇಳಿದ್ದ. ಹೀಗಾಗಿ ಪೊಲೀಸರು ಈತನನ್ನು ವಿಕ್ಟೋರಿಯಾ ಆಸ್ಪತ್ರೆಯ ಯೂರಾಲಜಿ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಂತರ ಮುಂದೆ ಆಸ್ಪತ್ರೆಗೆ ಹೋದಾಗ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸಿದ ಈತ ಜೈಲ್​ ಕ್ಯಾಂಟೀನ್​ನಲ್ಲಿ ಕಾರದ ಪುಡಿ ತೆಗೆದುಕೊಂಡು ಜೇಬಲ್ಲಿಟ್ಟುಕೊಂಡಿದ್ದ.

    2010ರ ಡಿ. 4ರಂದು ಮತ್ತೆ ವಿಕ್ಟೋರಿಯಾ ಆವರಣದಲ್ಲಿನ ಯೂರಾಲಜಿ ಕೇಂದ್ರಕ್ಕೆ ಪೊಲೀಸರಿಬ್ಬರು ಕರೆದೊಯ್ದಿದ್ದರು. ಮಧ್ಯಾಹ್ನ 12ರ ಸುಮಾರಿಗೆ ವೈದ್ಯರ ಸಲಹೆಯಂತೆ ನೀರು ಕುಡಿಸಿ ಆಸ್ಪತ್ರೆಯ ವಾತಾವರಣದಲ್ಲಿ ನಡೆದಾಡಿಸುತ್ತಿದ್ದಾಗ ಪೊಲೀಸರ ಕಣ್ಣಿಗೆ ಕಾರದ ಪುಡಿ ಎರಚಿ ಬೇಡಿ ಸಮೇತ ಓಡಿ ಪರಾರಿಯಾಗಿದ್ದ.

    ಇದನ್ನೂ ಓದಿ: ಗಂಡನನ್ನು ಕೊಂದು ಗುಂಡಿ ತೋಡಿ ಮುಚ್ಚಿದ ಪತ್ನಿ; ಬಳಿಕ ಮೊಬೈಲ್​ಫೋನ್​ ಸ್ವಿಚ್ಡ್​ ಆಫ್ ಮಾಡಿ ಪರಾರಿ

    ಹೀಗೆ ತಪ್ಪಿಸಿಕೊಂಡಿದ್ದ ಈತ ಹರಿಯಾಣದ ಅತೇಲಿಮಂಡಿ ಎಂಬಲ್ಲಿ ಬೇರೊಬ್ಬರ ಲಿಕ್ಕರ್ ಲೈಸೆನ್ಸ್ ಪಡೆದು ವೈನ್​ ಶಾಪ್​ ನಡೆಸುತ್ತಿದ್ದ. 2012ರಲ್ಲಿ ಶಾದಿ.ಕಾಮ್​ ಮೂಲಕ ಪರಿಚಯವಾದ ಅಸ್ಸಾಮ್​ ಮಹಿಳೆಯೊಬ್ಬಳನ್ನು ಮದುವೆಯಾದ ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ, ವಿ.ವಿ.ಪುರ ಎಸಿಪಿ ಬಿ.ಎಲ್. ಶ್ರೀನಿವಾಸಮೂರ್ತಿ ಉಸ್ತುವಾರಿಯಲ್ಲಿ, ವಿ.ವಿ.ಪುರ ಇನ್​ಸ್ಪೆಕ್ಟರ್​ ಕಿರಣ್​ಕುಮಾರ್ ಎಸ್. ನೀಲಗಾರ್ ನೇತೃತ್ವದಲ್ಲಿ ಎಸ್​ಐ ಮಂಜುನಾಥ್, ಹೆಡ್​ ಕಾನ್​ಸ್ಟೆಬಲ್​ ಶ್ರೀನಿವಾಸಮೂರ್ತಿ, ಕಾನ್​ಸ್ಟೆಬಲ್​ ಮಹಾಲಿಂಗಪ್ಪ, ತಾಂತ್ರಿಕ ಸಿಬ್ಬಂದಿ ರವಿ ಅವರು ಆರೋಪಿ ಧರ್ಮಸಿಂಗ್​ನನ್ನು ಅಸ್ಸಾಂ ರಾಜ್ಯದ ನೆಲ್ಲಿ ಗ್ರಾಮದಲ್ಲಿ ಪತ್ತೆ ಮಾಡಿ ಬಂಧಿಸಿ ಕರೆದುಕೊಂಡು ಬಂದಿದ್ದಾರೆ.

    ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…

    ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts