ಚಾಮರಾಜನಗರ: ಸುಬ್ರಹ್ಮಣ್ಯ ಷಷ್ಠಿ ಎಂದರೆ ರಾಜ್ಯದ ಹಲವೆಡೆಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ, ನಾಗಸನ್ನಿಧಿಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಅದರಲ್ಲೂ ನಾಗಬನಗಳಲ್ಲಿ ಹುತ್ತಕ್ಕೆ ಹಾಲೆರೆದು ಹಬ್ಬ ಆಚರಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಹುತ್ತಕ್ಕೆ ಹಾಲೆರೆಯುವ ಬದಲು ಕೋಳಿಗಳನ್ನು ಬಲಿ ಕೊಡಲಾಗಿದೆ. ಆ ಮೂಲಕ ವಿಶಿಷ್ಟವಾಗಿ ಷಷ್ಠಿ ಆಚರಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈ ರೀತಿಯಲ್ಲಿ ಷಷ್ಠಿ ಆಚರಣೆ ಮಾಡಲಾಗಿದೆ. ಚಾಮರಾಜನಗರದ ಮಲ್ಲಯ್ಯನಪುರ, ಉತ್ತುವಳ್ಳಿ, ಉಪ್ಪಾರ ಬಡಾವಣೆ ಮುಂತಾದ ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಡಲಾಗಿದೆ.
ಇದನ್ನೂ ಓದಿ: ಆಯ್ತು ಬನ್ನಿ ಅಂದ್ರಂತೆ ಮನುರಂಜನ್ ರವಿಚಂದ್ರನ್, ಅಭಿಮಾನಿಗಳಿಗೆ ಖುಷಿಯೋ ಖುಷಿ…
ಕೋಳಿಯನ್ನು ಬಲಿ ಕೊಟ್ಟು ಹುತ್ತಕ್ಕೆ ರಕ್ತ ಹಾಗೂ ಮೊಟ್ಟೆಯನ್ನಿಟ್ಟು ಷಷ್ಠಿಯನ್ನು ಆಚರಿಸಲಾಗಿದೆ. ಕೋಳಿ ಬಲಿ ಕೊಟ್ಟು ಪೂಜೆ ಮಾಡಿದರೆ ಸರ್ಪ ಸಂಬಂಧಿ ದೋಷ ಪರಿಹಾರವಾಗುವ ನಂಬಿಕೆ ಇಲ್ಲಿನ ಜನರಲ್ಲಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!