ಸೀದಾ ಬಂದರು.. ಎಟಿಎಂ ಮಷಿನ್ ಕಿತ್ತೊಗೆದು 18 ಲಕ್ಷ ರೂ. ದೋಚಿ ಪರಾರಿಯಾದರು...

ATM
Published on

ನವದೆಹಲಿ: ಭದ್ರತೆ ಕೊರತೆಯಿಂದಾಗಿ ಎಟಿಎಂ ಮಷಿನ್ ಕಿತ್ತಿ ಹಣ ದೋಚಿ ಪರಾರಿಯಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.
ಮತ್ತೊಂದು ಘಟನೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು 18 ಲಕ್ಷ ರೂ.ಗಳ ನಗದು ಹೊಂದಿರುವ ಎಟಿಎಂ ಅನ್ನು ದೆಹಲಿಯ ಹೊರವಲಯದ ನರೇಲಾದಲ್ಲಿ ಕಿತ್ತುಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಘಟನೆ ಮಂಗಳವಾರ ಮುಂಜಾನೆ 1: 30 ಕ್ಕೆ ವರದಿಯಾಗಿದೆ.
ಪೊಲೀಸರ ಪ್ರಕಾರ, ಇಬ್ಬರು ಅಪರಿಚಿತ ವ್ಯಕ್ತಿಗಳು ಎಟಿಎಂ ಬೂತ್‌ಗೆ ಪ್ರವೇಶಿಸಿ 18 ಲಕ್ಷ ರೂ. ನಗದು ಹೊಂದಿರುವ ಎಟಿಎಂ ಯಂತ್ರವನ್ನು ಕಿತ್ತುಹಾಕಿದ್ದಾರೆ. ಅವರು ಎಟಿಎಂ ಬೂತ್ ಪ್ರವೇಶಿಸಿ ಸಿಸಿಟಿವಿ ಕ್ಯಾಮೆರಾ ಹಾನಿಗೊಳಿಸಿದ್ದಾರೆ.


ಮತ್ತೊಂದು ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಅವರು ಯಂತ್ರದೊಂದಿಗೆ ಬೂತ್‌ನಿಂದ ಹೊರಹೋಗುತ್ತಿರುವುದು ಕಂಡುಬಂದಿದ್ದು. ಆ ವೇಳೆ ಹೊರಗೆ ಕಾವಲುಗಾರರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನೈಋತ್ಯ ದೆಹಲಿಯ ರಾಜೋಕ್ರಿ ಗ್ರಾಮದಿಂದ ಬೆಳಗ್ಗೆ 4 ಗಂಟೆಗೆ ಎಟಿಎಂ ಕಳ್ಳತನದ ಮತ್ತೊಂದು ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತರನ್ನು ಪತ್ತೆ ಹಚ್ಚಲು ಎಟಿಎಂ ಬೂತ್‌ಗಳು ಮತ್ತು ಹತ್ತಿರದ ಸ್ಥಳಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net