More

    ರಾಂಬುಟನ್ ಹಣ್ಣು ತಿಂದು 15 ನಿಮಿಷ ಉಸಿರಾಡುವುದನ್ನೇ ಮರೆತ ಮಗು!

    ಅಲುವಾ(ಕೇರಳ): ಆಟ ಆಡಿಕೊಂಡಿದ್ದ ಮಗು ಆಕಸ್ಮಿಕವಾಗಿ ರಾಂಬುಟನ್ ಹಣ್ಣು ನುಂಗಿ 15 ನಿಮಿಷ ಉಸಿರಾಟವನ್ನೇ ನಿಲ್ಲಿಸಿತ್ತು. ಜುಲೈ 28ರಂದು ಈ ಘಟನೆ ನಡೆದಿದ್ದು, ಕೂಡಲೇ ಮಗುವನ್ನು ಆಲುವಾದ ರಾಜಾಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆಲುವಾ ನಿವಾಸಿಗಳೇ ಆದ ದಂಪತಿಯ ಪುತ್ರ ಈ ರೀತಿ ಸಂಕಷ್ಟಕೊಳಗಾದವನು. ಆತ ಆಟ ಆಡ್ತಾ ಆಡ್ತಾ ಕೈಗೆ ಸಿಕ್ಕಿದ ರಾಂಬುಟನ್ ಹಣ್ಣನು ನುಂಗಿದ್ದ. ಕೂಡಲೇ ಅರಿವು ತಪ್ಪಿದ ಆತನನ್ನು ಪಾಲಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆತನ ಆರೋಗ್ಯ ಸ್ಥಿತಿ ಪರಿಶೀಲಿಸಿದಾಗ ಹಣ್ಣು ಶ್ವಾಸನಾಳದಲ್ಲಿ ಸಿಲುಕಿರುವುದು ಕಂಡುಬಂದಿತ್ತು. ಬಳಿಕ ವೈದ್ಯರ ಸತತ ಪ್ರಯತ್ನದ ಬಳಿಕ ಹಣ್ಣನ್ನು ಹೊರತೆಗೆಯಲಾಗಿದೆ. ಆತನ ಆರೋಗ್ಯ ಸುಧಾರಿಸುವುದಕ್ಕೆ ಕೆಲವು ದಿನಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ.

    ಇದನ್ನೂ ಓದಿ: ಜಿ.ಸಿ.ಮುರ್ಮು ಭಾರತದ ನೂತನ ಸಿಎಜಿ

    ಹದಿನೈದು ನಿಮಿಷ ಉಸಿರಾಟ ನಿಲ್ಲಿಸಿದ್ದರ ಪರಿಣಾಮ ಮೆದುಳಿಗೆ ಆಮ್ಲಜನಕ ಪೂರೈಕೆಯಾಗದೆ ಹಾನಿ ಆಗಿರಬಹುದು. ಈ ಸಂಬಂಧ ನಿಗಾವಹಿಸಲಾಗಿದ್ದು ಮಗುವನ್ನು ಆರಂಭದಲ್ಲಿ ಐಸಿಯು ಘಟಕದಲ್ಲಿ ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಸದ್ಯ ಮಗು ಉಸಿರಾಡುತ್ತಿದ್ದು, ಇನ್ನೂ ಕೆಲವು ದಿನಗಳ ಚಿಕಿತ್ಸೆ ಅಗತ್ಯವಿದೆ ಎಂದು ಡಾಕ್ಟರ್​ಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ರಾಮಜನ್ಮಭೂಮಿಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ‘ರಾವಣ ಜನ್ಮಭೂಮಿ’ಯ ಮಣ್ಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts