More

    ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂಕಿತ್​​ ಬಂಧನ

    ನವದೆಹಲಿ: ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಎದುರಾಳಿಯನ್ನು ಕೊಂದು, ಮತದಾರರಿಗೆ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಪೊಲೀಸರು ಬಂಧಿದ್ದಾರೆ.
    ಅಂಕಿತ್ ಗುಜ್ಜರ್ ಆರೋಪಿ. ಉತ್ತರಪ್ರದೇಶದಲ್ಲಿ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಎದುರಾಳಿಯನ್ನು ಕೊಂದು,
    ತನ್ನ ಪರವಾಗಿ ಮತ ಚಲಾಯಿಸುವಂತೆ
    ಮತದಾರನನ್ನು ಒತ್ತಾಯಿಸಿ ತನ್ನ ಹಳ್ಳಿಯಲ್ಲಿ ಬೆದರಿಕೆ ಕರಪತ್ರಗಳನ್ನು ವಿತರಿಸಿದ್ದ ಈ ಅಪರಾಧಿಯನ್ನು ಹರಿಯಾಣದ ಝಜ್ಜರ್ ನಿಂದ ದೆಹಲಿ ಪೊಲೀಸ್ ವಿಶೇಷ ಬಂಧಿಸಿದೆ.

    ಇದನ್ನೂ ಓದಿ: ರಾಂಬುಟನ್ ಹಣ್ಣು ತಿಂದು 15 ನಿಮಿಷ ಉಸಿರಾಡುವುದನ್ನೇ ಮರೆತ ಮಗು!

    ಉತ್ತರ ಪ್ರದೇಶದ ಭಾಗಪತ್ ಮೂಲದ ಅಂಕಿತ್ ಗುಜ್ಜರ್ 2019 ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಸೇರಿದಂತೆ ಎಂಟು ಜನರ ಕೊಲೆ ಆರೋಪ ಎದುರಿಸುತ್ತಿದ್ದಾನೆ. ಉತ್ತರ ಪ್ರದೇಶದ ಅಗ್ರ ಹತ್ತು ಅಪರಾಧಿಗಳಲ್ಲಿ ಇವನ್ನೂ ಒಬ್ಬನಾಗಿದ್ದು. ಅವನನ್ನು ಹಿಡಿದುಕೊಟ್ಟವರಿಗೆ 1.25 ಲಕ್ಷ ರೂ.ಬಹುಮಾನ ಘೋಷಿಸಲಾಗಿತ್ತು.
    2019 ರಲ್ಲಿ, ಪಂಚಾಯತ್ ಚುನಾವಣೆಯ ಸಮಯದಲ್ಲಿ, ಬಾಗಪತ್ ಜಿಲ್ಲೆಯ ಖೈಲಾದ ​​ಗ್ರಾಮ ಪ್ರಧಾನ ಸ್ಥಾನಕ್ಕೆ ಆತ ಕಣಕ್ಕಿಳಿದಿದ್ದ. ಚುನಾವಣೆಗೆ ಕೆಲವು ದಿನಗಳ ಮೊದಲು ಆತ ಎದುರಾಳಿಯನ್ನು ಕೊಂದು ಹಿಂದಿ ಭಾಷೆಯಲ್ಲಿ ಬರೆದ ಕರಪತ್ರಗಳನ್ನು ವಿತರಿಸಿದ್ದ. ಆ ಕರಪತ್ರಗಳಲ್ಲಿ, ಜನರು ಅವನಿಗೆ ಮತ ಚಲಾಯಿಸದಿದ್ದರೆ, ಆತನ ಪ್ರತಿಸ್ಪರ್ಧಿಗಾದ ಗತಿಯೇ ಅವರಿಗೂ ಆಗುತ್ತದೆ ಎಂದು ಬರೆಯಲಾಗಿತ್ತು.

    ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂಕಿತ್​​ ಬಂಧನ
    ನಂತರ ಉತ್ತರ ಪ್ರದೇಶದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲು ಆತನನ್ನು ಹುಡುಕಾಡಲಾರಂಭಿಸಿದರು. ಪೊಲೀಸರು ಆತನನ್ನು ಹುಡುಕಿಕೊಟ್ಟವರಿಗೆ 50,000 ರೂ. ಬಹುಮಾನ ಘೋಷಿಸಿದ್ದರು.
    ಆತ ನೋಯ್ಡಾದಲ್ಲಿ ಸುಲಿಗೆಗಾಗಿ ಕಾಲ್ ಸೆಂಟರ್ ಮಾಲೀಕರನ್ನು ಅಪಹರಿಸಿದ್ದ. ಆದರೆ ನಂತರ ಕಾಲ್ ಸೆಂಟರ್ ಮಾಲೀಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆತನ ಬಂಧನಕ್ಕೆ ಯುಪಿ ಪೊಲೀಸರು ಮತ್ತೆ 50000 ರೂ ನಗದು ಬಹುಮಾನ ಘೋಷಿಸಿದರು. ಲಕ್ಷ್ಮಿ ನಗರದಲ್ಲಿ ದರೋಡೆಗಾಗಿ ವ್ಯಕ್ತಿಯೊಬ್ಬನಿಗೆ ಗುಂಡು ಹಾರಿಸಿದ್ದಕ್ಕಾಗಿ ದೆಹಲಿ ಪೊಲೀಸರು ಆತನನ್ನು ಹುಡುಕಿಕೊಟ್ಟವರಿಗೆ ಅಥವಾ ಆತ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂ.ಗಳ ಬಹುಮಾನವನ್ನು ಘೋಷಿಸಿದ್ದರು.
    ಗುಜ್ಜರ್ ಕನಿಷ್ಠ ಎಂಟು ಕೊಲೆ ಪ್ರಕರಣಗಳಲ್ಲಿ ಮತ್ತು ಕನಿಷ್ಠ ಡಜನ್ ದರೋಡೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಪರಾರಿಯಾಗಿದ್ದ.
    ಬುಧವಾರ ಬೆಳಿಗ್ಗೆ ಇಬ್ಬರೂ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತ ಮತ್ತು ಆತನ ಸಹಚರ ಅನಿಲ್ ಮಂಡವಾಲಿ (29) ನನ್ನು ಝಜ್ಜರ್ ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಬಳಿ ಎರಡು ಪಿಸ್ತೂಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

    ಭಾರತ, ಅಮೆರಿಕಕ್ಕೆ ಟೆನ್ಶನ್ ಕಡೆಗಣಿಸಿ ಕ್ಷಿಪಣಿ ಪರೀಕ್ಷಿಸಿದ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts