

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಕೆಲವರು ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಎಲ್ಲ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಮನುಷ್ಯನ ಒಳಿತು-ಕೆಡುಕು, ನಡೆ-ನುಡಿ ಎಲ್ಲದರ ಮೇಲೂ ಗ್ರಹಗಳು ಪ್ರಭಾವ ಬೀರುತ್ತವೆ. ಒಬ್ಬ ವ್ಯಕ್ತಿಯ ಭವಿಷ್ಯದ ಜೀವನ ಹೇಗಿರುತ್ತದೆ? ಆತನ ವಿಶಿಷ್ಟ ಗುಣಗಳು ಏನೆಂಬುದನ್ನು ಗ್ರಹಗತಿಗಳ ಆಧಾರದ ಮೇಲೆ ಸುಲಭ ಊಹಿಸಬಹುದಾಗಿದೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ.
ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಜನರು ಒಂಟಿಯಾಗಿರುವಾಗಲೂ ಜೀವನವನ್ನು ಆನಂದಿಸುತ್ತಾರಂತೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಕನ್ಯಾ ರಾಶಿಯಲ್ಲಿ ಜನಿಸಿದವರು ಶುಕ್ರನ ಆಳ್ವಿಕೆಗೆ ಒಳಪಡುವುದರಿಂದ, ಅವರು ಐಷಾರಾಮಿ ಜೀವನ ಮತ್ತು ಲೌಕಿಕ ಸುಖಗಳ ಬಯಕೆಯನ್ನು ಹೊಂದಿರುತ್ತಾರೆ. ಅವರು ತಮ್ಮ ಸಮಯ ಮತ್ತು ವೈಯಕ್ತಿಕ ಸಂತೋಷಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಈ ರಾಶಿಯವರ ಭವಿಷ್ಯದ ಯೋಜನೆಗಳು ಇತರರಿಗೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಅವರು ತಮ್ಮ ಹಿಂದಿನ ಪ್ರೇಮಗಳು ಮತ್ತು ಪ್ರೇಮ ವೈಫಲ್ಯಗಳ ಬಗ್ಗೆ ಚಿಂತಿಸುವ ಪ್ರವೃತ್ತಿಯನ್ನು ಹೊಂದಿರುವುದಿಲ್ಲ ಮತ್ತು ಏಕಾಂತತೆಯನ್ನು ಸದಾ ಆನಂದಿಸುತ್ತಾರೆ.
ಕುಂಭ ರಾಶಿಯಲ್ಲಿ ಜನಿಸಿದ ಜನರು ಶನಿಯಿಂದ ಆಳಲ್ಪಡುತ್ತಾರೆ. ಆದ್ದರಿಂದ ಅವರು ನ್ಯಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇತರರು ತಮ್ಮ ಮಾತಗಳನ್ನು ಕೇಳುವಂತೆಯೂ ಮತ್ತು ತಾವು ಹೇಳಿದ್ದನ್ನು ಮಾಡುವಂತೆ ಮಾಡುವ ದೃಢನಿಶ್ಚಯ ಹೊಂದಿರುತ್ತಾರೆ. ಒಂದು ವೇಳೆ ಅದು ಸಂಭವಿಸದೇ ಇದ್ದರೆ, ಅವರೊಂದಿಗೆ ವಾದಿಸಲು ಕೂಡ ಪ್ರಾರಂಭಿಸುತ್ತಾರೆ. ಸಂಬಂಧಗಳಲ್ಲಿ ದೃಢವಾದ ನಿಲುವನ್ನು ತೆಗೆದುಕೊಳ್ಳುವ ಮೂಲಕ, ತಮ್ಮ ಏಕಾಂತತೆಯಲ್ಲಿ ಸಂತೋಷ ಮತ್ತು ಮುಕ್ತತೆಯನ್ನು ಅನುಭವಿಸುತ್ತಾರೆ.
ಸಿಂಹ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಅವರು ಇತರರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಅವರ ಆಕರ್ಷಕ ನೋಟ ಮತ್ತು ಉತ್ತಮ ಗುಣಗಳಿಂದಾಗಿ, ಯಾವಾಗಲೂ ತಮ್ಮ ಸುತ್ತಲೂ ಸ್ನೇಹಿತರ ಗುಂಪನ್ನು ಹೊಂದಿರುತ್ತಾರೆ. ಸಂಬಂಧಗಳ ಬಂಧನದಿಂದ ಆ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಆದ್ದರಿಂದ, ಒಂಟಿತನವು ಅವರಿಗೆ ತುಂಬಾ ಸಂತೋಷವನ್ನು ನೀಡುತ್ತದೆ. ಹಾಗಾಗಿ ಅವರು ಏಕಾಂತತೆಯನ್ನು ಸಂತೋಷದಿಂದ ಆನಂದಿಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.