ಕುಂಭಮೇಳಕ್ಕೆ ಬಂದವರು ಗಮನಿಸಲೇ ಇಲ್ಲ... ಈ ಸ್ಕಿಲ್​ ಭಾರತದ​ ಮಹಿಳೆಯರಲ್ಲಿ ಮಾತ್ರ ಇರೋದಂತೆ! Maha Kumbh Mela

Maha Kumbh Mela
Published on

Maha Kumbh Mela : ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಪ್ರತಿದಿನ ಲಕ್ಷಾಂತರ ಜನರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಿದ್ದಾರೆ. ಅವರಲ್ಲಿ ಅನೇಕ ಸೆಲೆಬ್ರಿಟಿಗಳು ಸಹ ಇದ್ದಾರೆ. ಪ್ರತಿಯೊಬ್ಬರು ಪ್ರಯಾಗ್‌ರಾಜ್‌ಗೆ ಬಂದು ಶಾಹಿ ಸ್ನಾನ ಮಾಡಿ ಹಿಂತಿರುಗುತ್ತಿದ್ದಾರೆ.

ಆದರೆ, ಕುಂಭಮೇಳದಲ್ಲಿ ಇದುವರೆಗೂ ಯಾರೂ ಗಮನಿಸದ ವಸ್ತು ಒಂದನ್ನು ಪತ್ತೆಹಚ್ಚಿದ ಮಹಿಳೆಯೊಬ್ಬರು ಅದನ್ನು ಮನೆಗೆ ತೆಗೆದುಕೊಂಡು ಹೋದಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೇಲಿನ ವಿಡಿಯೋದಲ್ಲಿ ನೀವು ನೋಡುತ್ತಿರುವ ಮಹಿಳೆ ತನ್ನ ಕುಟುಂಬದೊಂದಿಗೆ ಕುಂಭಮೇಳಕ್ಕೆ ಬಂದಿದ್ದರು. ಈ ವೇಳೆ ಅಲ್ಲಿಯೇ ತೆರೆದ ಪ್ರದೇಶದಲ್ಲಿ ಬೆಳೆದಿದ್ದ ಸಸ್ಯವನ್ನು ನೋಡುತ್ತಾರೆ. ಈ ವೇಳೆ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಆ ಮಹಿಳೆಯ ಮಗಳು ಅಮ್ಮ ಏನದು ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಉತ್ತರಿಸುವ ಮಹಿಳೆ, ಅದು ಪಾಲಕ್​ ಎಂದು ಹೇಳುತ್ತಾರೆ. ಬಿಹಾರ ಮತ್ತು ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಒಗ್ಗರಣೆಗಳಲ್ಲಿ ಬಳಸುವ ವಿಶೇಷ ರೀತಿಯ ಪಾಲಕ್ ಅದಾಗಿತ್ತು. ತಾಯಿ ಹೇಳಿದ್ದನ್ನು ಕೇಳಿ ಅದು ಪಾಲಕ್​ ಗಯ್ಸ್​... ಇಂಡಿಯನ್​ ಮಾಮ್ಸ್​ ಎಂದು ಹೇಳುತ್ತಾಳೆ.

ಅಂದಹಾಗೆ, ಕೆಲವು ನಗರಗಳಲ್ಲಿ, ಈ ಪಾಲಕ್ ಅನ್ನು ಖರೀದಿಸಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅದರ ಮೌಲ್ಯವನ್ನು ಅರಿತುಕೊಂಡ ಮಹಿಳೆ ಅದನ್ನು ತೆಗೆದುಕೊಂಡು ಒಂದು ಕವರ್​ನಲ್ಲಿ ಹಾಕಿಕೊಂಡು ಮನೆಗೆ ತೆಗೆದುಕೊಂಡು ಹೋಗಲು ತಯಾರಿ ನಡೆಸುತ್ತಿರುವುದನ್ನು ವೈರಲ್​ ವಿಡಿಯೋದಲ್ಲಿ ಕಾಣಬಹುದು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹು ಬೇಗನೆ ವೈರಲ್ ಆಗಿದ್ದು, ಅನೇಕ ಜನರು ಆ ಮಹಿಳೆಯನ್ನು ಹೊಗಳುತ್ತಿದ್ದಾರೆ. ಇವರೇ ನೋಡಿ ನಮ್ಮ ಭಾರತದ ಆದರ್ಶ ನಾರಿ ಎನ್ನುತ್ತಿದ್ದಾರೆ. ವಿಡಿಯೋಗೆ ಹಲವು ಲೈಕ್‌ಗಳು ಬರುತ್ತಿವೆ. ಇದು ಭಾರತೀಯ ಮಹಿಳೆಯರ ವಿಶೇಷ ಪ್ರತಿಭೆ ಎಂದು ಹಲವರು ಹೊಗಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net