Best Jobs : ಭಾರತದಲ್ಲಿ ಬಹುತೇಕ ಪಾಲಕರು ಶಾಲೆ ಮುಗಿಸಿದ ಕ್ಷಣದಿಂದಲೇ ತಮ್ಮ ಮಕ್ಕಳು ಏನಾಗಬೇಕೆಂಬ ಕನಸು ಕಾಣುತ್ತಾರೆ. ಅವರಲ್ಲಿ ಹೆಚ್ಚಿನವರು ತಮ್ಮ ಮಕ್ಕಳನ್ನು ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರಗಳಿಗೆ ಕಳುಹಿಸಲು ಪ್ರಥಮ ಆದ್ಯತೆಯನ್ನು ನೀಡುತ್ತಾರೆ. ಏಕೆಂದರೆ, ಈ ಎರಡೂ ಕ್ಷೇತ್ರಗಳು ಭಾರತದಲ್ಲಿ ಉತ್ತಮ ಸಂಬಳ ನೀಡುವ ಉದ್ಯೋಗಗಳ ಪಟ್ಟಿಯಲ್ಲಿ ಸೇರಿವೆ.

ಆದರೆ, ಇವುಗಳಲ್ಲದೆ ಬಹುತೇಕರಿಗೆ ಗೊತ್ತಿಲ್ಲದ ಮತ್ತು ಭಾರತದಲ್ಲೇ ಕೆಲಸ ಮಾಡುವ ಮೂಲಕ ಹೆಚ್ಚಿನ ಹಣ ಗಳಿಸುತ್ತಿರುವ ಕೆಲವು ಉತ್ತಮ ಉದ್ಯೋಗ ಕ್ಷೇತ್ರಗಳು ಕೂಡ ಇವೆ. ಕಳೆದ ವರ್ಷ ಅತಿ ಹೆಚ್ಚು ವಾರ್ಷಿಕ ಆದಾಯ ಗಳಿಸಿದ ಉದ್ಯೋಗಗಳು ಈ ಕೆಳಗಿನಂತಿವೆ.
ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್
ವಿವಿಧ ಸಂಸ್ಥೆಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಸ್ ಸಹಾಯವನ್ನು ಪಡೆಯುತ್ತವೆ. ಒಬ್ಬ ಅನುಭವಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್, ಕಾರ್ಪೊರೇಟ್ ವಲಯದಲ್ಲಿ ಉದ್ಭವಿಸುವ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಬಹುದು. ಅವರು ನೀಡುವ ಸಲಹೆಗಳು ಕಂಪನಿಗಳು ತಮ್ಮ ದಕ್ಷತೆಯನ್ನು ಹೆಚ್ಚಿಸಲು ಮತ್ತು ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಓರ್ವ ದಕ್ಷ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್, ಕಂಪನಿಗಳು ಅಥವಾ ಸಂಸ್ಥೆಗಳ ರಚನೆಯನ್ನು ಅಧ್ಯಯನ ಮಾಡಿದ ನಂತರ ವಿವಿಧ ವ್ಯವಹಾರ ಮಾದರಿಗಳನ್ನು ವಿಶ್ಲೇಷಿಸುವುದು, ಮಾರುಕಟ್ಟೆಯ ಟ್ರೆಂಡ್ ಅನ್ನು ತಿಳಿದುಕೊಳ್ಳುವುದು, ಕಂಪನಿಯ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಲು ಡೇಟಾವನ್ನು ಸಂಗ್ರಹಿಸುವುದು ಮತ್ತು ಕ್ಲೈಂಟ್‌ಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಪ್ರಸ್ತುತಪಡಿಸುವುದು ಸೇರಿದಂತೆ ಮುಂತಾದ ಅನೇಕ ಸಂಕೀರ್ಣ ಕೆಲಸಗಳನ್ನು ಮಾಡಬಹುದು. ಒಬ್ಬ ಸರಾಸರಿ ವೃತ್ತಿಪರರು ವರ್ಷಕ್ಕೆ 27 ಲಕ್ಷ ರೂ. ಗಳಿಸಬಹುದು.
ಆರ್ಕಿಟೆಕ್ಟ್
ಆರ್ಕಿಟೆಕ್ಟ್ ಕೆಲಸವು ಕಲ್ಪನೆ, ತಂತ್ರಜ್ಞಾನ ಮತ್ತು ಅನುಭವದ ಸಂಯೋಜನೆಯಾಗಿದೆ. ಕಟ್ಟಡಗಳು ಮತ್ತು ಇತರ ರಚನೆಗಳನ್ನು ತಲೆಮಾರುಗಳವರೆಗೆ ಬಾಳಿಕೆ ಬರುವಂತೆ ಮತ್ತು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿನ್ಯಾಸಗೊಳಿಸುವುದರಿಂದ ಅವರ ಕೆಲಸ ಯಾವಾಗಲೂ ಅಗತ್ಯವಾಗಿರುತ್ತದೆ. ಸುರಕ್ಷತೆ, ಹೊಸ ಹೊಸ ಆಲೋಚನೆಗಳು ಮತ್ತು ಕ್ಲೈಂಟ್‌ನ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡಗಳನ್ನು ವಿನ್ಯಾಸಗೊಳಿಸುವುದು ಮತ್ತು ಯೋಜನೆಯನ್ನು ಯಾರಿಗಾಗಿ ವಿನ್ಯಾಸಗೊಳಿಸಲಾಗುತ್ತಿದೆಯೋ ಅವರ ಬಜೆಟ್ಗೆ ತಕ್ಕಂತೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆರ್ಕಿಟೆಕ್ಟ್ ಜವಾಬ್ದಾರಿಯಾಗಿದೆ. ಆದ್ದರಿಂದ, ಕಟ್ಟಡಗಳ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ. ಆರ್ಕಿಟೆಕ್ಟ್, ಸ್ಥಳೀಯ ಕಟ್ಟಡ ಸಂಹಿತೆಗಳ ಪ್ರಕಾರ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಬ್ಬ ಉತ್ತಮ ಆರ್ಕಿಟೆಕ್ಟ್ ಭಾರತದಲ್ಲಿ ವರ್ಷಕ್ಕೆ ಸುಮಾರು 27 ಲಕ್ಷ ರೂ. ಗಳಿಸಬಹುದು.
ಕಮರ್ಷಿಯಲ್ ಪೈಲಟ್
ಉತ್ತಮ ಕಮರ್ಷಿಯಲ್ ಪೈಲಟ್‌ನ ಅನುಭವವು ಪ್ರಯಾಣಿಕ ವಿಮಾನ, ಸರಕು ವಿತರಣೆ ಮತ್ತು ತುರ್ತು ಸೇವೆಗಳನ್ನು ನಿರ್ವಹಿಸುವಲ್ಲಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಪೈಲಟ್‌ಗಳು ತಮ್ಮ ಉತ್ತಮ ಯೋಜನೆ ಮತ್ತು ಅದನ್ನು ಕಾರ್ಯಗತಗೊಳಿಸುವಿಕೆ ಮೂಲಕ ವಿಮಾನ ಪ್ರಯಾಣವನ್ನು ಸುಲಭಗೊಳಿಸಬಹುದು. ವಿಮಾನವು ಹೊರಡುವ ಮೊದಲು ಅದನ್ನು ಪರಿಶೀಲಿಸಿ ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವ, ಸರಿಯಾದ ಯೋಜನೆಯನ್ನು ಕೈಗೊಳ್ಳುವ ಮತ್ತು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಮಾರ್ಗವನ್ನು ನಿರ್ಧರಿಸುವ ಉತ್ತಮ ಪೈಲಟ್ ವರ್ಷಕ್ಕೆ ಸರಾಸರಿ 27 ಲಕ್ಷದವರೆಗೆ ಆದಾಯ ಗಳಿಸಬಹುದು.
ಪ್ರಾಡಕ್ಟ್ ಮ್ಯಾನೇಜರ್ಸ್
ಒಂದು ಕಂಪನಿಯ ಅಥವಾ ಸಂಸ್ಥೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಪ್ರಾಡಕ್ಟ್ ಮ್ಯಾನೇಜರ್ಸ್ ಅಗತ್ಯವಿದೆ. ಉತ್ಪನ್ನದ ತಯಾರಿಕೆಯಲ್ಲಿ ತಾಂತ್ರಿಕ ಅಂಶಗಳನ್ನು ವ್ಯವಹಾರ ತಂತ್ರಗಳೊಂದಿಗೆ ಹೊಂದಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಮ್ಯಾನೇಜರ್ಸ್ ಅಗತ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳು ಮುನ್ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವ ಮ್ಯಾನೇಜರ್ಗಳು ವರ್ಷಕ್ಕೆ ಸರಾಸರಿ 25 ಲಕ್ಷ ರೂ. ಸಂಬಳವನ್ನು ಗಳಿಸುತ್ತಾರೆ ಎಂದು ವರದಿಯಾಗಿದೆ.
ಇನ್ವೆಸ್ಟ್ಮೆಂಟ್ ಬ್ಯಾಂಕರ್
ಹೂಡಿಕೆ ಬ್ಯಾಂಕರ್‌ಗಳು ಹಣಕಾಸು ಸಂಸ್ಥೆಗಳು ಬಂಡವಾಳ ಸಂಗ್ರಹಿಸಲು ಸಹಾಯ ಮಾಡುತ್ತಾರೆ. ಅವರು ಹಣಕಾಸು ವಲಯದಲ್ಲಿ ವಿಲೀನಗಳು ಮತ್ತು ಸ್ವಾಧೀನಗಳೊಂದಿಗೆ ಕಂಪನಿಗಳಿಗೆ ಸಹಾಯ ಮಾಡುತ್ತಾರೆ ಮತ್ತು ಬೇರೆಡೆ ಹೂಡಿಕೆಗಳ ಕುರಿತು ಕಂಪನಿಗಳಿಗೆ ಸಲಹೆ ನೀಡುತ್ತಾರೆ. ಅತ್ಯುತ್ತಮ ಹಣಕಾಸು ವಿಶ್ಲೇಷಣಾ ಕೌಶಲ್ಯ ಹೊಂದಿರುವವರು ಭಾರತದಲ್ಲಿ ಸುಮಾರು 17 ಲಕ್ಷ ರೂ. ಗಳಿಸಬಹುದು.
ಸಿವಿಲ್ ಸರ್ವಿಸ್ ಅಫಿಶಿಯಲ್ಸ್
ನಾಗರಿಕ ಸೇವಾ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಅವುಗಳ ನಿಯಂತ್ರಣದಲ್ಲಿರುವ ಸಂಸ್ಥೆಗಳ ಸುಗಮ ಕಾರ್ಯನಿರ್ವಹಣೆಗೆ ನಿಯೋಜಿಸಲಾದ ಅಧಿಕಾರಿಗಳಾಗಿರುತ್ತಾರೆ. ಸಾರ್ವಜನಿಕ ಸಂಪತ್ತನ್ನು ನಿರ್ವಹಿಸಲು ಮತ್ತು ಜನರಿಗೆ ಉಪಯುಕ್ತ ಮತ್ತು ಅಗತ್ಯ ಸೇವೆಗಳನ್ನು ಸ್ಥಾಪಿಸಲು ಮತ್ತು ಕಾರ್ಯಗತಗೊಳಿಸಲು ರಚನಾತ್ಮಕ ಸಲಹೆಗಳನ್ನು ಸಿದ್ಧಪಡಿಸುವುದು ಅವರ ಕೆಲಸ. ಅವರು ಕಲೆಕ್ಟರ್, ನಿರ್ದೇಶಕ, ಆಯುಕ್ತ, ಮಹಾನಿರ್ದೇಶಕ ಮುಂತಾದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಶಾಸನ ಮತ್ತು ಜನರ ಜೀವನವನ್ನು ಪರಿಣಾಮಕಾರಿಯಾಗಿ ನಡೆಸುವುದು ಅವರ ಕರ್ತವ್ಯ. ಅವರಲ್ಲಿ ಸರಾಸರಿ ವಾರ್ಷಿಕ 15 ಲಕ್ಷ ರೂ.ಗಳವರೆಗೆ ಆದಾಯ ಗಳಿಸುವವರೂ ಇದ್ದಾರೆ.
ಇವೆಲ್ಲದರ ನಂತರ, ಭಾರತದಲ್ಲಿ ಅತ್ಯಂತ ಬೇಡಿಕೆಯ ಇಂಜಿನಿಯರಿಂಗ್ ಮತ್ತು ವೈದ್ಯ ವೃತ್ತಿಗಳಿಂದ ಬರುವ ಗಳಿಕೆ ಹೆಚ್ಚಾಗಿದೆ. ತಂತ್ರಜ್ಞಾನ ಉದ್ಯಮದಲ್ಲಿ ಅತ್ಯಂತ ಬೇಡಿಕೆಯ ಹುದ್ದೆಗಳಾದ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತು ಡೆವಲಪರ್‌ಗಳು ಹೆಚ್ಚಿನ ಸ್ಥಳಗಳಲ್ಲಿ ಸರಾಸರಿ ವಾರ್ಷಿಕ ವೇತನವಾಗಿ 9 ಲಕ್ಷ ರೂಪಾಯಿ ಗಳಿಸಿದರೆ, ಭಾರತದಲ್ಲಿ ತಜ್ಞ ವೈದ್ಯರು ವರ್ಷಕ್ಕೆ ಸರಾಸರಿ 7.6 ಲಕ್ಷ ರೂ. ಗಳಿಸಬಹುದು ಎಂದು ಅಂದಾಜಿಸಲಾಗಿದೆ. ನಿರಂತರವಾಗಿ ವಿಸ್ತರಿಸುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ, ತಜ್ಞರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಸಾಮರ್ಥ್ಯವಿದೆ. (ಏಜೆನ್ಸೀಸ್)
ಈ 4 ರಾಶಿಯ ಮಹಿಳೆಯರನ್ನು ಪ್ರೀತಿಸಿದವರು ತುಂಬಾ ಅದೃಷ್ಟಶಾಲಿಗಳಂತೆ! ಏಕೆಂದರೆ… Zodiac Signs